ರಾಹುಲ್ ದ್ರಾವಿಡ್ @ 47, ಬಿಸಿಸಿಐ ಸೇರಿ ಕ್ರಿಕೆಟಿಗರ ಅಭಿನಂದನೆ

ನವದೆಹಲಿ, ಜ ೧೧, ಜಾಗತಿಕ ಮಟ್ಟದಲ್ಲಿ  ಭಾರತೀಯ ಕ್ರಿಕೆಟ್‌ಗೆ ಮತ್ತಷ್ಟು ಘನತೆ, ಹೊಳಪು   ತಂದುಕೊಟ್ಟಿರುವ  ಆಟಗಾರ.  ಮಿಸ್ಟರ್ ಡಿಫೆಂಡಬಲ್ ಎಂದೇ  ಪ್ರಸಿದ್ಧರಾಗಿರುವ  ರಾಹುಲ್ ದ್ರಾವಿಡ್    "ದಿ ವಾಲ್”  ಎಂದೂ ಹೆಸರುವಾಸಿ. ಕ್ರಿಕೆಟ್ ನಲ್ಲಿ   ನಿಖರವಾದ ಹೊಡೆತಗಳಿಗೆ ಹೆಸರುವಾಸಿ. ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್  ಜೀವನದಲ್ಲಿ ೨೪,೦೦೦ ಕ್ಕೂ ಹೆಚ್ಚು ರನ್ ಗಳಿಸಿದ ಅಪ್ರತಿಮ ಕ್ರಿಕೆಟಿಗ.

 ಕರಿಕೆಟ್ ನಲ್ಲಿ  ಕ್ಲಾಸ್ , ಟೈಮಿಂಗ್  ದ್ರಾವಿಡ್  ಅವರ ವೈಶಿಷ್ಟ್ಯ..   ಅದು  ಟೆಸ್ಟ್ ಪಂದ್ಯವಾಗಲಿ, ಏಕದಿನ ಪಂದ್ಯವಾಗಲಿ, ದ್ರಾವಿಡ್ ಪರಿಸ್ಥಿತಿಗೆ ತಕ್ಕಂತೆ ಆಟಕ್ಕೆ  ಪ್ರಸಿದ್ದಿ. ಪ್ರಸ್ತುತ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ (ಎನ್‌ಸಿಎ) ನಿರ್ದೇಶಕರಾಗಿರುವ ದ್ರಾವಿಡ್ ತಮ್ಮ ೪೭ ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ.  ಈ ಸಂಬಂಧ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ದ್ರಾವಿಡ್ ಅವರನ್ನು ಅಭಿನಂದಿಸಿದೆ. ನ್ಯೂಜಿಲೆಂಡ್ ವಿರುದ್ಧದ ಸರಣಿಯ ದ್ರಾವಿಡ್   ಆಟದ  ವಿಡಿಯೋ  ಅನ್ನು  ಪೋಸ್ಟ್ ಮಾಡಿದೆ.   ಹಲವು  ಹಿರಿಯ, ಮಾಜಿಗಳು ಕ್ರಿಕೆಟಿಗರು  ದ್ರಾವಿಡ್ ಗೆ  ಅಭಿನಂದಿಸಿದ್ದಾರೆ.

"ಹ್ಯಾಪಿ ಬರ್ತ್ ಡೇ    ರಾಹುಲ್  ದ್ರಾವಿಡ್  ... ವಾಟೆ  ಲೆಜಂಡ್” ಎಂದು   ಹರ್ಭಜನ್ ಸಿಂಗ್  ಹಾರೈಸಿದ್ದಾರೆ.    “ನೀವೊಬ್ಬ   ಸ್ಪೂರ್ತಿ, ರೂಲ್ ಮಾಡೆಲ್”   ಎಂದು  ಮಹಮದ್ ಕೈಪ್  ಶುಭಾಷಯ ತಿಳಿಸಿದ್ದಾರೆ.   “ಆಸಾದಾರಣ  ಕ್ರಿಕೆಟರ್ .. ಒಬ್ಬ ಒಳ್ಳೆಯ ಮನುಷ್ಯ”   ಎಂದು   ವೀಕ್ಷಕ  ವಿವರಣೆಗಾರ  ಹರ್ಷ ಭೋಗ್ಲೆ    ಅಭಿನಂದಿಸಿದ್ದಾರೆ.  ಭಾರತ ಅಂಡರ್ -೧೯ ಇಂಡಿಯಾ-ಎ ತಂಡಗಳ ತರಬೇತುದಾರರಾಗಿದ್ದ ದ್ರಾವಿಡ್ ಈಗ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ನಿರ್ದೇಶಕರಾಗಿದ್ದಾರೆ. ಮುಂದಿನ ತಲೆಮಾರಿನ ಕ್ರಿಕೆಟಿಗರಿಗೆ  ಸಲಹೆ ಸೂಚನೆ  ನೀಡುವ  ಮೂಲಕ ಭಾರತೀಯ ಕ್ರಿಕೆಟ್ ಅನ್ನು ಇನ್ನೂ ಉನ್ನತ ಎತ್ತರಕ್ಕೆ  ಕೊಂಡೊಯ್ಯಲು ದ್ರಾವಿಡ್ ಶ್ರಮಿಸುತ್ತಿದ್ದಾರೆ.