ಫ್ರೆಂಚ್ ಓಪನ್ ಈ ವರ್ಷವೇ ನಡೆಯುವ ವಿಶ್ವಾಸ:ಬರ್ನಾರ್ಡ್

ಪ್ಯಾರಿಸ್, ಜೂನ್ 3,ಪ್ರಸಕ್ತ ವರ್ಷವೇ 2020ರ ಆವೃತ್ತಿಯ ಫ್ರೆಂಚ್ ಓಪನ್ ಟೆನಿಸ್ ಟೂರ್ನಿ ನಡೆಯಲಿದೆ ಎಂದು ಫ್ರೆಂಚ್ ಟೆನಿಸ್ ಫೆಡರೇಷನ್ ಅಧ್ಯಕ್ಷ ಬರ್ನಾರ್ಡ್ ಗಿಯುಡಿಸೆಲಿ ಮಂಗಳವಾರ ಖಚಿತಪಡಿಸಿದ್ದಾರೆ.ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂಗಾಗಿ ಇಡೀ ಟೆನಿಸ್ ಋತು ಸ್ತಬ್ಧಗೊಂಡಿದೆ. ಆದರೆ ಕ್ಯಾಲೇಂಡರ್ ವರ್ಷದ ಎರಡನೇ ಗ್ರ್ಲ್ಯಾಮ್ ಸ್ಲಾಮ್ ಟೂರ್ನಿ ಆಯೋಜನೆಯ ಬಗ್ಗೆ ಗಿಯುಡಿಸೆಲ್ ಮತ್ತೆ ವಿಶ್ವಾಸ ಹೊಂದಿದ್ದಾರೆ.ಪೂರ್ವ ನಿಗದಿಯಂತೆ ಮೇ 24ರಿಂದ ಜೂನ್ 7ರವರೆಗೆ ಫ್ರೆಂಚ್ ಓಪನ್ ಟೂರ್ನಿ ನಡೆಯಬೇಕಿತ್ತು. ಆದರೆ ಕೋವಿಡ್-19 ಏಕಾಏಕಿ ಎಲ್ಲಡೆ ವ್ಯಾಪಿಸಿದ್ದರಿಂದ ಆಟಗಾರರು, ಸಿಬ್ಬಂದಿ ಹಾಗೂ ಪ್ರೇಕ್ಷಕರ ಸುರಕ್ಷತೆಯನ್ನು ಗಮನದಲ್ಲಿರಿಸಿಕೊಂಡು ಮುಂಜಾಗ್ರತ ಕ್ರಮವಾಗಿ ಸೆಪ್ಟೆಂಬರ್ 20ಕ್ಕೆ ಮುಂದೂಡಲಾಗಿದೆ.