ಸರ್ವೆ ಮಾಡಿ ಫಲಾನುಭವಿಗಳನ್ನು ಪಂಚಗ್ಯಾರಂಟಿ ವ್ಯಾಪ್ತಿಗೆ ಸೇರಿಸಿ: ಮಿಥುನ ಪಾಟೀಲ

Conduct a survey and include beneficiaries under the Panchagaranti coverage: Mithun Patil

ರೋಣ ತಾಲೂಕ ಮಟ್ಟದ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರೀಶೀಲನಾ ಸಭೆ  

ರೋಣ 13 : ಪಂಚ ಗ್ಯಾರಂಟಿ ಯೋಜನೆಯಡಿಯಲ್ಲಿ ತಾಲೂಕಿನ ಯಾವುದೇ ವ್ಯಕ್ತಿ ಯೋಜನೆಯ ಲಾಭ ಪಡೆಯದೆ ಇದಲ್ಲಿ ಅಂತವರನ್ನು ಗುರುತಿಸಿ ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಸರ್ವೆ ಕೈಗೊಂಡು ಸರ್ಕಾರದಿಂದ ಅನುಷ್ಟಾನಿತ ಪಂಚ ಗ್ಯಾರಂಟಿ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಿ ಎಂದು ತಾಲೂಕು ಮಟ್ಟದ ಗ್ಯಾರಂಟಿ ಯೋಜನಾ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಮಿಥುನ ಪಾಟೀಲ ತಿಳಿಸಿದರು.

ಪಟ್ಟಣದ ತಾಲೂಕ ಪಂಚಾಯತಿ ಯಲ್ಲಿ ಇರುವ ಗ್ಯಾರಂಟಿ ಕಾರ್ಯಾಲಯದಲ್ಲಿ ಜರುಗಿದ ರೋಣ ತಾಲೂಕು ಮಟ್ಟದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಕುರಿತು ಪ್ರಗತಿ ಪರೀಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ತಾಲೂಕಿನ ಪ್ರತಿ ಗ್ರಾಮ ದಲ್ಲಿಯೂ ಕೂಡಾ ಅಂಗನವಾಡಿ ಕಾರ್ಯಕರ್ತೆಯರನ್ನು ಸರ್ವೆ ಮಾಡಲು ನೇಮಿಸಿ, ನೇಮಿಸಿದ ಅಂಗನವಾಡಿ ಕಾರ್ಯಕರ್ತೆಯರು ಪ್ರತಿ ಮನೆಗೆ ಹೋಗಿ ಸರ್ವೆ ಮಾಡಿ ಸರ್ಕಾರದಿಂದ ಅನುಷ್ಟಾನಿತ ಪಂಚ ಗ್ಯಾರಂಟಿ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿದರ ಬಗ್ಗೆ ಪರೀಶೀಲನೆ ಮಾಡಬೇಕು, ಗ್ಯಾರಂಟಿ ಯೋಜನೆಗಳು ಇನ್ನು ತಲುಪದಿದಲ್ಲಿ , ತಲುಪದೇ ಇರಲು ಕಾರಣವನ್ನು ಕಂಡು ಹಿಡಿದು ಪರೀಶೀಲಿಸಿ ಅದಕ್ಕೆ ಪರಿಹಾರವನ್ನು ಕಲ್ಪಿಸಿ ಅರ್ಹರಿಗೆ ಯೋಜನೆಗಳನ್ನು ತಲುಪಿಸಬೇಕು ಎಂದು ಅವರು ಹೇಳಿದರು.ಅನ್ನಭಾಗ್ಯ ಯೋಜನೆಯ ಸಮರ​‍್ಕ ಅನುಷ್ಟಾನ ಕ್ಕಾಗಿ ಆಹಾರ ಇಲಾಖೆಯ ಅಧಿಕಾರಿಗಳು ಪಡಿತರ ಅಂಗಡಿದಾರರ ಜೊತೆಗೆ ಸಭೆ ನಡೆಸಬೇಕು. ಅನ್ನಭಾಗ್ಯದ ಅಕ್ಕಿಯು ಅರ್ಹ ಫಲಾನುಭವಿಗಳಿಗೆ ತಲುಪಬೇಕು. ಸದ್ಯ ರೇಶನ್ ಕಾರ್ಡಗಳನ್ನು ಪ್ರಾರಂಭಿಸಿದ್ದು ಅದರ ಕಾಲಾವಧಿಯನ್ನು ಜನರಿಗೆ ತಿಳಿಯುವಂತೆ ಜಾಗೃತಿ ವಹಿಸಬೇಕು ಸೂಚಿಸಿದರು.ರೋಣ ತಾಲೂಕಿನಲ್ಲಿ ಗೃಹಲಕ್ಷಿ ಯೋಜನೆಯಡಿ 36857 ಅರ್ಜಿಗಳು ನೊಂದನೆಯಾಗಿದ್ದು ಅದರಲ್ಲಿ 36183 ಮಂಜೂರಾತಿ ಆಗಿವೆ ಅದರಲ್ಲಿ 674 ಮಂಜೂರಾತಿಗೆ ಬಾಕಿ ಉಳದಿವೆ ಅವರನ್ನು ಗುರುತಿಸಿ ಅವರಿಗೆ ಗೃಹಲಕ್ಷ್ಮಿ ಗೆ ಸೇರಿಸಿ ಶೇಕಡಾ 98.17 ಪ್ರಗತಿ ಸಾಧಿಸಿದೆ. ಮುಖ್ಯವಾಗಿ 171 ಗೃಹಲಕ್ಷೀ ಯೋಜನೆಯ ಫಲಾನುಭವಿಗಳು ಮರಣ ಹೊಂದಿದ್ದು ಸಂಬಂಧಿಸಿದ ಅಂಗನವಾಡಿ ಕಾರ್ಯಕರ್ತೆಯರು ಮರಣ ಪತ್ರ ತೆಗೆದುಕೊಂಡು ಅವರ ಹೆಸರನ್ನು ಕಡಿಮೆ ಮಾಡಲು ಹೇಳಿದರು.

ಗೃಹಜ್ಯೋತಿ ಯೋಜನೆಯಡಿ ರೋಣ ಉಪವಿಭಾಗದಲ್ಲಿ ಒಟ್ಟು ಸಂಪರ್ಕ ಇದ್ದ ಸಂಖ್ಯೆ 43272 ಸ್ಥಾವರಗಳು ಅದರಲ್ಲಿ 22268 ಫಲಾನುಭವಿಗಳು ಯೋಜನೆ ಲಾಭ ಪಡೆದಿದ್ದು 1380 ಯೋಜನೆಯ ಲಾಭ ಪಡೆದಿಲ್ಲಾ ಇದನ್ನು ಕೂಡಾ ಸರ್ವೆ ಮಾಡಿ ಎಂದರುಯುವನಿಧಿ ಯೋಜನೆಯಡಿ ರೋಣ ತಾಲೂಕಿನಲ್ಲಿ 753 ಫಲಾನುಭವಿಗಳ ನೋಂದಣಿಯಾಗಿದ್ದು 448 ಅರ್ಹ ಫಲಾನುಭವಿಗಳಿಗೆ ಡಿಬಿಟಿ ಮೂಲಕ 13,30,500 ರೂ. ವರ್ಗಾವಣೆಯಾಗಿರುತ್ತದೆ ಎಂದು ಸಂಭಂಧಿಸಿದ ಅಧಿಕಾರಿಗಳು ಮಾಹಿತಿ ನೀಡಿದರು...ಸಭೆಯಲ್ಲಿ ತಾಲೂಕ ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ ಚಂದ್ರಶೇಖರ ಬಿ ಕಂದಕೂರ,ಗ್ಯಾರಂಟಿ ಸಮಿತಿಯ ಸದಸ್ಯರು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಟಾನಿತ ಅಧಿಕಾರಿಗಳು ಸೇರಿದಂತೆ ತಾಲೂಕ