ಕಂಪ್ಲಿ: ಮೀನುಗಾರಿಕೆ ಸಲಕರಣೆಗಳ ಕಿಟ್ ವಿತರಿಸಿದ ಶಾಸಕ ಜೆ.ಎನ್‌.ಗಣೇಶ್‌

Comply: MLA J.N.Ganesh distributed fishing equipment kit

ಕಂಪ್ಲಿ: ಮೀನುಗಾರಿಕೆ ಸಲಕರಣೆಗಳ ಕಿಟ್ ವಿತರಿಸಿದ ಶಾಸಕ ಜೆ.ಎನ್‌.ಗಣೇಶ್‌

ಬಳ್ಳಾರಿ 10:ಮೀನುಗಾರಿಕೆ ಇಲಾಖೆ ವತಿಯಿಂದ ಉಚಿತವಾಗಿ ನೀಡುವ ಮೀನುಗಾರಿಕೆ ಸಲಕರಣೆಗಳ ಕಿಟ್‌ನ್ನು ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಕಂಪ್ಲಿ ಶಾಸಕ ಜೆ.ಎನ್‌.ಗಣೇಶ್ ಅವರು ಕಂಪ್ಲಿ ಪಟ್ಟಣದ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಸೋಮವಾರ ಮೀನುಗಾರರಿಗೆ ವಿತರಿಸಿದರು. 

ಕಿಟ್‌ನಲ್ಲಿ ಬಲೆ, ಲೈಫ್ ಜಾಕೆಟ್ ಮತ್ತು ಫೈಬರ್ ಗ್ಲಾಸ್ ಹರಿಗೋಲು ಒಳಗೊಂಡಿದ್ದು, ಕಂಪ್ಲಿ ಪಟ್ಟಣದ ನೋಂದಾಯಿತ ಮೀನುಗಾರರಿಗೆ ವಿತರಿಸಲಾಯಿತು. 

ಈ ವೇಳೆ ಮಾತನಾಡಿದ ಅವರು, ಮೀನುಗಾರಿಕೆ ಇಲಾಖೆ ವತಿಯಿಂದ ನೀಡುವ ಸೌಲಭ್ಯ ಪಡೆದುಕೊಳ್ಳಬೇಕು ಎಂದರು. ಬಳಿಕ ಎನ್‌ಎಫ್‌ಡಿಪಿ ಯೋಜನೆಯಡಿ ನೋಂದಣಿಗೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಮೀನುಗಾರಿಕೆ ಉಪನಿರ್ದೇಶಕ ಶಿವಣ್ಣ, ಕಂಪ್ಲಿ ತಾಲ್ಲೂಕು ಪಂಚಾಯತ್ ಇಒ ಶ್ರೀಕುಮಾರ್, ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ನಿರ್ದೇಶಕರಾದ ಅಭಿಲಾಷ, ಬಳ್ಳಾರಿ ತಾಲ್ಲೂಕು ಮೀನುಗಾರಿಕೆ ಸಹಾಯಕ ನಿರ್ದೇಶಕರಾದ ಬಿ.ಭಾವನ, ಸಂಡೂರು ತಾಲ್ಲೂಕು ಮೀನುಗಾರಿಕೆ ಸಹಾಯಕ ನಿರ್ದೇಶಕ ಮಂಜುನಾಥ.ಕೆ.ಎಸ್ ಸೇರಿದಂತೆ ಕಂಪ್ಲಿ ಮತ್ತು ಕುರುಗೋಡು ತಾಲ್ಲೂಕಿನ ಮೀನುಗಾರರ ಸಹಕಾರ ಸಂಘದ ಅಧ್ಯಕ್ಷರು, ಮೀನುಗಾರರು ಮತ್ತು ಮೀನುಗಾರಿಕೆ ಇಲಾಖೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.