ಲೋಕದರ್ಶನ ವರದಿ
ಕಂಪ್ಲಿ 19: ಪ್ರತಿಯೋಬ್ಬರು ಸಮತೋಲಿತ ಆಹಾರ ಸೇವಿಸುವ ಮೂಲಕ ಮಹಿಳೆಯರು ಆರೋಗ್ಯವಂತರಾಗಬೇಕಾಗಿದೆ. ಸಕಾಲದಲ್ಲಿ ತಪಾಸಣೆ ನಾನಾ ಗುಪ್ತ ಕಾಯಿಲೆಗಳಿಂದ ವಿಮುಖರಾಗುವಲ್ಲಿ ಜಾಗೃತಿ ತೋರಬೇಕು ಎಂದು ಬೆಂಗಳೂರಿನ ಸ್ಪರ್ಶ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಡಾ.ಜಯಂತಿ ಎಸ್.ತುಮ್ಸಿ ಹೇಳಿದರು.
ಕೊಟ್ಟಾಲ್ ರಸ್ತೆಯ ಕಾಲುವೆ ಬಳಿಯ ಶಿರಿಡಿ ಸಾಯಿಬಾಬಾ ಸೇವಾಶ್ರಮದಲ್ಲಿ, ಗಂಗಾವತಿಯ ಭಾರತೀಯ ವೈದ್ಯಕೀಯ ಸಂಘ, ಸತ್ಯ ಅರುಣೋದಯ ಸೇವಾ ಸಮಿತಿ, ಶಿರಿಡಿ ಸೇವಾಶ್ರಮ, ಬೆಂಗಳೂರಿನ ಸ್ಪರ್ಶ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಪೂರ್ಣಸುಧ ಫೌಂಡೇಶನ್ಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ, ಬೃಹತ್ ಉಚಿತ ಮಹಿಳಾ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ, ಮಹಿಳೆಯರು ರೋಗಗಳನ್ನು ಸಕಾಲಕ್ಕೆ ಪರೀಕ್ಷೆ ಮಾಡಿಸಿಕೊಳ್ಳುವ ಮೂಲಕ ಆರೋಗ್ಯವನ್ನು ಸದೃಢವಾಗಿಟ್ಟುಕೊಳ್ಳಬೇಕು ಎಂದು ಹೇಳಿದರು.
ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ಶ್ರೀನಿವಾಸರೆಡ್ಡಿ ಹಾಗೂ ಸತ್ಯ ಅರುಣೋದಯ ಸೇವಾ ಸಮಿತಿ ಅಧ್ಯಕ್ಷ ಡಿ.ವಿ.ಸತ್ಯನಾರಾಯಣ ಮಾತನಾಡಿ, ಮಹಿಳಾ ತಪಾಸಣಾ ಶಿಬಿರದಲ್ಲಿ 320ಕ್ಕೂ ಹೆಚ್ಚು ಮಹಿಳೆಯರನ್ನು ತಪಾಸಿಸಲಾಯಿತು. 65ಕ್ಕೂ ಹೆಚ್ಚು ಸ್ಕ್ಯಾನ್ನಿಂಗ್, 60ಕ್ಕೂ ಹೆಚ್ಚು ಪ್ಯಾಪ್ಸ್ಮಿಯರ್ ಪರೀಕ್ಷೆ ಹಾಗೂ 62ಮಹಿಳೆಯರಿಗೆ ಮ್ಯಾಮೋಗ್ರಫಿ ಪರೀಕ್ಷೆ ಮಾಡಲಾಗಿದೆ. ಕಂಪ್ಲಿ ಪಟ್ಟಣದಲ್ಲಿ ಇದೇ ಮೊದಲಿಗೆ ಮ್ಯಾಮೋಗ್ರಫಿ ಯಂತ್ರ ಮೂಲಕ ಪರೀಕ್ಷಿಸಲಾದ್ದು, ಬೃಹತ್ ಮಟ್ಟದ ಮಹಿಳಾ ತಪಾಸಣಾ ಶಿಬಿರ ಆಯೋಜಿಸಿ ಯಶಸ್ವಿಗೊಳಿಸುವಲ್ಲಿ ಡಾ.ಜಂಬುನಾಥಗೌಡ ಪಾತ್ರ ಮಹತ್ವದ್ದಾಗಿದೆ. ತಪಾಸಣೆಯಲ್ಲಿ ಬಿಪಿ, ಶುಗರ್, ಹಿಮೋಗ್ಲೋಬಿನ್ ಪರೀಕ್ಷೆಯೊಂದಿಗೆ ಉಚಿತ ಔಷಧಿ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಬೃಹತ್ ಮಹಿಳಾ ಆರೋಗ್ಯ ತಪಾಸಣಾ ಶಿಬಿರದಲ್ಲಿ ಬೆಂಗಳೂರಿನ ಡಾ.ರಾಹುಲ್ ಎಸ್.ಕನಕಾ, ಡಾ.ನಿರ್ಮಲ ಜಂಬುನಾಥಗೌಡ, ಡಾ.ಸಂಗಮಪಾಟೀಲ್, ಡಾ.ಶಾಂತಾ ಶಿರಿಗೇರಿ, ಡಾ.ಮಂಜುಳಾ ಪಾಟೀಲ್, ಡಾ.ವೀಣಾ ಸತೀಶ್, ಡಾ.ಉಮಾರಾಜು, ಡಾ.ಕಲ್ಪನಾ ಭರತ್, ಡಾ.ಮೇಘರಂಜಿನಿ, ಡಾ.ಅನಿತಾ ಶಶಿಧರ, ಡಾ.ಮೇಧಾ ಮಲ್ಲನಗೌಡ, ಡಾ.ಪ್ರಭಾ ರಾಯ್ಕರ್, ಡಾ.ಕಾರ್ತೀಕ ಜಂಬುನಾಥಗೌಡ, ಡಾ.ಮಂಜುನಾಥ, ಡಾ.ಅಜರ್ುನ ಹೊಸಳ್ಳಿ, ಡಾ.ಬಸವರಾಜ ಸಿಂಗನಾಳ್, ಡಾ.ಶ್ರೀನಿವಾಸರೆಡ್ಡಿ, ಡಾ.ಜಂಬುನಾಥಗೌಡ, ವಿನಿಲಾ ಶ್ರೀನಿವಾಸರೆಡ್ಡಿ, ಪುಲ್ಲಾರೆಡ್ಡಿ, ಪ್ರತ್ಯುಷಾ, ಉಮಾಮಹೇಶ್ವರಿ, ಬಿ.ಗೋಪಾಲ್ರಾವ್, ರವಿ ಬಿಳಿಚೋಡ್, ಬಿ.ಎಸ್.ರಾಘವೇಂದ್ರ, ಸಂತೋಷ್ ಮುತಾಲಿಕ್ ಸೇರಿ ಅನೇಕರು ಪಾಲ್ಗೊಂಡಿದ್ದರು. ತಪಾಸಣೆಗೆ ಬಂದು ಹೋಗುವ ರೋಗಿಗಳಿಗೆ ಬ್ರೈಟ್ವೇ ಶಾಲೆಯ ಆಡಳಿತ ಮಂಡಳಿಯವರು ಹಳೆ ಬಸ್ನಿಲ್ದಾಣದಿಂದ ತಪಾಸಣಾ ಕೇಂದ್ರದತನಕ ಬಸ್ಸುಗಳ ವ್ಯವಸ್ಥೆ ಒದಗಿಸಿದ್ದರು