ಕಂಪ್ಲಿ: ತಂಗುದಾಣ, ಶೌಚಾಲಯ ವ್ಯವಸ್ಥೆ ಕಲ್ಪಿಸದಿದ್ದರೆ ಬೃಹತ್ ಪ್ರತಿಭಟನೆ: ಎಚ್ಚರಿಕೆ

ಲೋಕದರ್ಶನ ವರದಿ

ಕಂಪ್ಲಿ 10: ಸ್ಥಳೀಯ ಅಂಬೇಡ್ಕರ್ ವೃತ್ತ ಬಳಿಯಲ್ಲಿ ರುವ ಹಳೆ ಬಸ್ ನಿಲ್ದಾಣದ ಸಾರ್ವಜನಿಕ ತಂಗುದಾಣ, ಮಹಿಳೆಯರ ಮೂತ್ರಾಲಯ ನಿಮರ್ಿಸುವಂತೆ ಅಗ್ರಹಿಸಿ ಮಾಜಿ ಪುರಸಭೆ ಸದಸ್ಯ ಜಿ.ಜಿ.ಚಂದ್ರಣ್ಣ ನೇತೃತ್ವದಲ್ಲಿ ಅನೇಕರು ಸೇರಿಪುರಸಭೆ ಮುಖ್ಯಾಧಿಕಾರಿ ಎನ್.ಶಿವಲಿಂಗಪ್ಪ, ಪುರಸಭೆ ಅಧ್ಯಕ್ಷ ಎಂ.ಸುಧೀರ್ ಅವರಿಗೆ ಶುಕ್ರವಾರ ಮನವಿ ಪತ್ರ ನೀಡಿದರು 

ಮಾಜಿ ಪುರಸಭೆ ಸದಸ್ಯ  ಜಿ.ಜಿ.ಚಂದ್ರಣ್ಣ ಮಾತನಾಡಿ, ಅಂಬೇಡ್ಕರ್ ವೃತ್ತದ ಮುಂದೆ ಎಡಕ್ಕೆ ಮತ್ತು ಬಲಕ್ಕೆ ಗಂಗಾವತಿ, ಹೊಸಪೇಟೆ, ಬಳ್ಳಾರಿಗೆ ತೆರಳುವ ಬಸ್ಸುಗಳು ನಿಲ್ಲುತ್ತಿದ್ದು, ಇಲ್ಲಿ ಪ್ರಯಾಣಿಕರೆಗೆ ಬಸ್ ನಿಲ್ದಾಣ ಮತ್ತು ಮೂತ್ರಾಲಯಗಳಿಲ್ಲ.  ಪ್ರಯಾಣ ಮಾಡುವ ಪ್ರಯಾಣಿಕರು ಚಿಕ್ಕಮಕ್ಕಳನ್ನು ಎತ್ತಿ ಕೊಂಡು ಸುಡು ಬಿಸಿಲು, ನಿಂತು ಬಸ್ಸಿಗಾಗಿ ಕಾಯಬೇಕಾಗಿದ್ದು ಇದರಿಂದ ಮಹಿಳೆಯರಿಗೆ ವಿದ್ಯಾಥರ್ಿಗಳು, ವೃದ್ದರಿಗೆ ಬಹಳ ತೊಂದರೆಯಾಗುತ್ತದೆ. ತಂಗುದಾಣ ಮತ್ತು ಮೂತ್ರಾಲಯಗಳನ್ನು ನಿಮರ್ಿಸುವಂತೆ 2019ರ ಫೆ.13ರಂದು ಮನವಿ ಪತ್ರ ಸಲ್ಲಿಸಿದ್ದು, ಇದುವರೆಗೆ  ಪುರಸಭೆಯಿಂದಸೂಕ್ತ ಸ್ಪಂದನೆ ಇಲ್ಲ. ಪ್ರಯಾಣಿಕರ. ಸಾರ್ವಜನಿಕ ಹಿತದೃಷ್ಠಿಯಿಂದಮನವಿ ಪತ್ರ ಸಲ್ಲಿಸಿದ್ದು, ಒಂದು ತಿಂಗಳೊಳಗಾಗಿ ತಾತ್ಕಾಲಿಕ ತಂಗುದಾಣ, ಮಹಿಳೆಯರ ಮೂತ್ರಾಲಯ ವ್ಯವಸ್ಥೆ ಕಲ್ಪಿಸದಿದ್ದಲ್ಲಿ ಪಟ್ಟಣದ ಪ್ರಗತಿಪರ ಸಂಘಟನೆಗಳು, ಬೃಹತ್ ಪ್ರತಿಭಟನಾ ಮತ್ತು ಪುರಸಭೆ ಮುತ್ತಿಗೆ ಹಾಕಲಾಗುವುದು ಎಂದು ಖಡಕ ಎಚ್ಚರಿಕೆ ನೀಡಿದರು. 

ಈ ಸಂದರ್ಭದಲ್ಲಿ ಮುಖಂಡರಾದ ಭಾರತೀಯ ದಲಿತ ಪ್ಯಾಂಥರ್ಸ್ ರಾಜ್ಯ ಪ್ರಧಾನ ಕಾರ್ಯದಶರ್ಿ ಡಾ.ಎ.ಸಿ.ದಾನಪ್ಪ, ಪ್ರಗತಿ ರೈತ ಕೊಟ್ಟೂರು ರಮೇಶ್, ಮರಿಸ್ವಾಮಿ, ಬಿ.ವೆಂಕಟೇಶ್, ದೇವೇಂದ್ರ ಸೇರಿ ಅನೇಕರಿದ್ದರು ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಎಂ.ಸುಧೀರ್ ಮಾತನಾಡಿ, ನಾಳೆಯಿಂದಲೇ ಮಹಿಳೆಯರ ತಾತ್ಕಾಲಿಕ ಮೂತ್ರಾಲಯಗಳನ್ನು ಅಳವಡಿಸಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು