ವಿವಿಧ ಸಾಧಕರಿಗೆ ಕಾಯಕ ಮತ್ತು ಮಾಸ್ತರ ಪ್ರಶಸ್ತಿ ಪ್ರಧಾನ

ವಿವಿಧ ಸಾಧಕರಿಗೆ ಕಾಯಕ ಮತ್ತು ಮಾಸ್ತರ ಪ್ರಶಸ್ತಿ ಪ್ರಧಾನ Kayak and Master Awards presented to various achievers

ಲೋಕದರ್ಶನ ವರದಿ  

ಇಂಡಿ 06 : ತಾಲೂಕಿನ ಹರಳಯ್ಯನಹಟ್ಟಿ(ಬೆನಕನಳ್ಳಿ)ಯಲ್ಲಿ  ಅಪ್ಪ ಅವ್ವ ಕಲಾ ಮತ್ತು ಸಾಹಿತ್ಯ, ಸಂಸ್ಕೃತಿ ಸಂಸ್ಥೆಯಿಂದ ದಿ. ಚಂದ್ರಾಮ ಯ ಹೊನ್ನಕಟ್ಟಿ (ಮಾಸ್ತರ) ಇವರ 24ನೇ ಪುಣ್ಯಾರಾಧನೆ ನಿಮಿತ್ಯ,  ರಾಜ್ಯ ಮಟ್ಟದ ಮಾಸ್ತರ ಪ್ರಶಸ್ತಿ ಮತ್ತು ವಿವಿಧ  ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹನೀಯರಿಗೆ ಕಾಯಕ ಪ್ರಶಸ್ತಿ ಪ್ರದಾನ ಹಾಗೂ  ಸಿದ್ಧೇಶ್ವರ ಸ್ವಾಮಿಜೀ ಅವರ ನುಡಿನಮನ ಕಾರ್ಯಕ್ರಮ ಇಂದು ನಡೆಯಿತು.ಈ ಕಾರ್ಯಕ್ರಮವನ್ನು ಗ್ರಾಂಗೆ ಮಡಿವಾಳೇಶ್ವರ ಮಠದ  ಆತ್ಮಾರಾಮ ಸ್ವಾಮಿಗಳು ಹಾಗೂ ಎರಡೆತ್ತಿನಮಠ ನಿಡೋಣಿ ಸಿದ್ದಲಿಂಗಸ್ವಾಮಿಗಳು ಅವರು ಸಸಿಗೆ ನೀರು ಉಣಿಸುವ  ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಇದೇ ಸಂದರ್ಭದಲ್ಲಿ ಡಾ. ಜ್ಯೋತಿರ್ಲಿಂಗ ಹೊನ್ನಕಟ್ಟಿ ಸಿಪಿಐ ಹುಬ್ಬಳ್ಳಿ ಧಾರವಾಡ ಇವರು ಬರೆದ “ಚಂದ್ರಾಮ ಮಾಸ್ತರ ಬದುಕು"  ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ವಿಜಯಪೂರ ಖ್ಯಾತ ನೇತ್ರ ತಜ್ಞರು ಡಾ ಪ್ರಭುಗೌಡ ಪಾಟೀಲ ಅವರು ಜ್ಯೋತಿರಲಿಂಗ ಹೊನ್ನಕಟ್ಟಿ ಅವರು ಗ್ರಾಮಿಣ ಭಾಗದಲ್ಲಿ ಹುಟ್ಟಿ ಬೆಳೆದು ಭವ್ಯ ಭಾರತದ ಸಾಂಸ್ಕೃತಿಕ ಜಾನಪದ ಕಲೆಯ ಉಳಿವಿಗಾಗಿ ಹಗಲಿರುಳು ದುಡಿಯುತ್ತಿದ್ದಾರೆ ಇವರ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ಹಾಗೂ ಪ್ರೋ, ಬಿ.ಆರ್‌.ಪೋಲಿಸ ಪಾಟೀಲ ಅವರು ಬರೆದ “ಇನ್ನೆಷ್ಟು  ದಿನ ಇರತಿ” ಪುಸ್ತಕವನ್ನು   ಸ್ನೇಹ ಜೀವಿಗಳು ವಿಜಯಪೂರ ಡಾ ಮಹಾಂತೇಶ ಬಿರಾದಾರ ಅವರು ಬಿಡುಗಡೆ ಮಾಡಿ ಮಾತನಾಡಿದ ಅವರು ಜ್ಯೋತಿರ್ಲಿಂಗ ಹಾಗೂ ಕುಟುಂಬದ ಸದಸ್ಯರೆಲ್ಲರೂ ಸೇರಿ ತಂದೆಯವರ ಸ್ಮರಣಾರ್ಥ ಪ್ರತಿವರ್ಷ ಪುಣ್ಯಾರಾಧನೆ ಮಾಡುವುದರ ಮೂಲಕ ಸಮಾಜದಲ್ಲಿ ಮಾದರಿಯಾಗಿದ್ದಾರೆ ಎಂದು ಹೇಳಿದರು.

ಹಾಗೂ ಕನ್ನಡ ನಾಡಿನಲ್ಲಿ ಉತ್ತಮ ಸೇವೆಗೈದ ಮಹನೀಯರಾದ ಡಾ ಪ್ರಭುಗೌಡ ಪಾಟೀಲ ಡಾ ಮಹಾಂತೇಶ ಬಿರಾದಾರ ಡಾ ಸಮೀರ ಹಾದಿಮನಿ ಇಮಾಮಸಾಬ ವಲ್ಲೆಪ್ಪನವರ ಲಿಂಗರಾಜು ಕಂಬಳಿ ಧನರಾಜ್ ಮುಜಗೊಂಡ  ಇಂಡಿ ತಾಲೂಕ ಲೋಕದರ್ಶನ ದಿನ ಪತ್ರಿಕೆಯ ವರದಿಗಾರ ಸಚೀನ ಇಂಡಿ ಇವರಿಗೆ ಕಾಯಕ ಪ್ರಶಸ್ತಿ ಪ್ರಧಾನ ಮಾಡಿ ಸನ್ಮಾನಿಸಿ ಗೌರವಿಸಲಾಯಿತು ಹಾಗೂ ಬಿ ಆರ್ ಪೋಲಿಸ್ ಪಾಟೀಲ ಪ್ರೊ ಎಸ್ ಕೆ ಕೌಜಲಗಿ ಎಂ ಎಂ ಪಡಶಟ್ಟಿ ತಿಪ್ಪಣ್ಣ ನಾಗೂರ ಚಂದ್ರಶೇಖರ ಪದಗಣ್ಣನವರ ರಮೇಶ್ ಮೂಲಿಮನಿ ವಿದ್ಯಾ ಕಲ್ಯಾಣಶೆಟ್ಟಿ ಮೇರಿ ಜೇವಿಯರ್ ರಂಗಮ್ಮ ರಾಜಾಪೂರ ಇವರಿಗೆ ಮಾಸ್ತರ ಪ್ರಶಸ್ತಿಗೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಅಪ್ಪ ಅವ್ವ ಕಲಾ ಸಾಹಿತ್ಯ ಮತ್ತು ಸಂಸ್ಕೃತಿ ಸಂಸ್ಥೆ ಸದಸ್ಯ ಡಾ.ಜ್ಯೋತಿರ್ಲಿಂಗ ಹೊನ್ನಕಟ್ಟಿ  ಸಿ ಪಿ ಐ ಹುಬ್ಬಳ್ಳಿ ಅವರು ಮಾತನಾಡಿದ ತಂದೆ ತಾಯಿ ರುಣ ತಿರಿಸಲು ಹಾಗೂ ಈ ಸಮಾಜದಲ್ಲಿ ಉತ್ತಮ ಸಂಸ್ಕಾರವನ್ನು ಬೆಳಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಮಾಡುತ್ತಿದ್ದೆನೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಪ್ರೊ ಬಿ ಆರ್ ಪೋಲಿಸ್ ಪಾಟೀಲ ಎಂ ಎಂ ಪಡಶಟ್ಟಿ ವಿದ್ಯಾ ಕಲ್ಯಾಣ ಶೆಟ್ಟಿ ಸೇರಿದಂತೆ ಅನೇಕರು ಮಾತನಾಡಿದರು.ಗ್ರಾಂಗೆ ಮಡಿವಾಳೇಶ್ವರ ಮಠದ  ಆತ್ಮಾರಾಮ ಸ್ವಾಮಿಗಳು ಹಾಗೂ ಎರಡೆತ್ತಿನಮಠ ನಿಡೋಣಿ  ಸಿದ್ದಲಿಂಗ ಸ್ವಾಮಿಗಳು ಆಶಿರ್ವಚನ ನೀಡಿದರು.ಹರಳಯ್ಯನಹಟ್ಟಿ ಸರ್ಕಾರಿ ಕನ್ನಡ ಗಂಡು ಮಕ್ಕಳಿಂದ  ಸಿದ್ದೇಶ್ವರ ಸ್ವಾಮೀಜಿಯವರ ಜೀವನ ಚರಿತ್ರೆ ನಾಟಕ ನೋಡುಗರ ಗಮನ ಸೆಳೆಯುತ್ತು.