ಕಂಪ್ಲಿ: ರಜೆದಿನ ಮಜಾ, ಮಕ್ಕಳ ಬೇಸಿಗೆ ಶಿಬಿರ

ಲೋಕದರ್ಶನ ವರದಿ

ಕಂಪ್ಲಿ 26: ತಾಲೂಕಿನ ಮೆಟ್ರಿ ಗ್ರಾಮದಲ್ಲಿ ಬೆಳ್ಳಿ ಚುಕ್ಕಿ ಕಲಾ ಸಂಸ್ಥೆಯಿಂದ ಸ್ನೇಹ ಜೀವಿ ಸಾಮಾಜಿಕ, ಸಾಂಸ್ಕೃತಿಕ, ಕ್ರೀಡಾ ಸಂಘ ಹಾಗೂ ಗ್ರಾಮದ ಶಿವಪುರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಆಶ್ರಯದಲ್ಲಿ ರಜಾದಲ್ಲಿ ಮಜಾ, ಮಕ್ಕಳ ಬೇಸಿಗೆ ಶಿಬಿರ ಪ್ರಾರಂಭವಾಯಿತು.

ಬೇಸಿಗೆಶಿಬಿರದ ನಿರ್ದೇಶಕ  ಮೆಟ್ರಿ ಕೆ.ಶಂಕರ್ ಮಾತನಾಡಿ, ರಜಾ ದಿನದಲ್ಲಿ ಮಕ್ಕಳಲ್ಲಿ ರಂಗಗೀತೆ, ಜನಪದ, ಭಾವಗೀತೆ, ಕೋಲಾಟ, ಚಿತ್ರಕಲೆ, ನಾಟಕ, ನೃತ್ಯ, ಪೇಪರ ಕಟಿಂಗ್ಸ್ ಸೇರಿದಂತೆ ಮಣ್ಣಿನ ಮಾದರಿ ಕುರಿತು ಕಲಿಸಲಾಗುವುದು. ಶಿಬಿರ ಮೇ15ಕ್ಕೆ ಮುಗಿಯಲಿದೆ ಎಂದರು. ಮುಖಂಡ ಹೊನ್ನಳ್ಳಿ ಗಂಗಾಧರ ಮಾತನಾಡಿ, ಈ ಶಿಬಿರದಲ್ಲಿ ಮಕ್ಕಳಲ್ಲಿ ನಾಟಕ, ಸಂಗೀತ, ಕಲೆ ಬಗ್ಗೆ ಅಭಿರುಚಿ ಮೂಡಿಸಲು ಸಹಕಾರಿಯಾಗಿದೆ ಎಂದರು. 

ಸಭೆಯಲ್ಲಿ ಶ್ರೀಲಂಕಾದ ಕೊಲಂಬೊದಲ್ಲಿ ಇತ್ತೀಚಗೆ ನಡೆದ, ವಿಕಲಚೇತನರ 3ನೇ ಅಂತರಾಷ್ಟ್ರೀಯ ಪ್ಯಾರ ಗೇಮ್ಸ್ನ ಅಂತರಾಷ್ಟ್ರೀಯ ಕಬಡ್ಡಿ ಕ್ರೀಡಾಕೂಟದಲ್ಲಿ ಭಾರತ ತಂಡ ಚಿನ್ನದ ಪದಕಗಳಿಸಿದ್ದು, ತಂಡದ ನಾಯಕ ಶೇಖರ್ ಕಾಖಂಡಕಿ, ಆಟಗಾರರಾದ ದೇವಲಾಪುರದ ಚಿನ್ನದಾಸರ ಸುರೇಶ, ಮಾವಿನಹಳ್ಳಿ ರವಿಶಂಕರ್ ಅವರನ್ನು ಗೌರವಿಸಲಾಯಿತು. ಮುಖ್ಯಗುರು ಮಲ್ಲಯ್ಯ ಆರ್.ಮಠದ್, ಎಸ್ಡಿಎಂಸಿ ಉಪಾಧ್ಯಕ್ಷ ವಿರೂಪಾಕ್ಷಪ್ಪ,  ಸ್ನೇಹ ಜೀವಿ ಸಂಘದ ಅಧ್ಯಕ್ಷ ಕೆ.ನಾಗರಾಜ, ಸಂಪನ್ಮೂಲ ವ್ಯಕ್ತಿ ಮಂಜುನಾಥ ಇತರಿದ್ದರು.