ಗದಗ : ಗದಗ ಜಿಲ್ಲೆಯ ನೆರೆಯಿಂದ ಹಾನಿಗೊಳಗಾದ ರಸ್ತೆ, ಸೇತುವೆ, ಶಾಲಾ ಅಂಗನವಾಡಿ ಕಟ್ಟಡ ಹಾಗೂ ವಿದ್ಯುತ್ ಸಂಪರ್ಕ ಕಾಮಗಾರಿಗಳನ್ನು ಶೀಘ್ರವೇ ಪೂರ್ಣಗೊಳಿಸಲು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರಿಂದು ಕಟ್ಟುನಿಟ್ಟಿನ ನಿರ್ದೇ ಶನ ನೀಡಿದರು.
ಗದಗ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಜರುಗಿದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನೆರೆಯಿಂದಾಗಿ ಹಾನಿಗೊಳಗಾದ ರಾಜ್ಯ, ಜಿಲ್ಲಾ, ರಸ್ತೆ, ಸೇತುವೆ ಕಾಮಗಾರಿಗಳ ಗ್ರಾಮೀಣ ಕುಡಿಯುವ ನೀರು, ನೈರ್ಮಲ್ಯ ಇಲಾಖೆಯಿಂದ ಶುದ್ಧ ಕುಡಿಯುವ ನೀರು ಘಟಕಗಳು, ಶಾಲಾ ಅಂಗನವಾಡಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳೂ, ಹೆಸ್ಕಾಂನಿಂದ ಸಂತ್ರಸ್ತರ ಪುನರ್ವಸತಿ ತಾತ್ಕಾಲಿಕ ಶೆಡ್ ಹಾಗೂ ಗ್ರಾಮಗಳ ಮನೆಗಳಿಗೆ ವಿದ್ಯುತ್ ಸಂಪರ್ಕ ಪುನರ್ ಕಲ್ಪಿಸುವ ಕಾಮಗಾರಿಗಳ ಕುರಿತು ಜಿಲ್ಲಾಧಿಕಾರಿಗಳು ಪರಿಶೀಲನೆ ನಡೆಸಿ ಕಾಮಗಾರಿ ನಿರ್ವಹಿಸುವ ಏಜೆನ್ಸಿ, ಇಲಾಖೆಯೊಂದಿಗೆ ಸಂಬಂಧಿತ ಇಲಾಖೆಗಳು ಖುದ್ದಾಗಿ ಸಮನ್ವಯ ಸಾಧಿಸಿ ಅವುಗಳು ನಿಗದಿತ ಅವಧಿಯೊಳಗೆ ಪೂರ್ಣಗೊಳ್ಳುವಂತೆ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು ಎಂದರು.
ಸಂತ್ರಸ್ತರ ವಸತಿಗಾಗಿ ಕೊಣ್ಣೂರ ಮತ್ತು ಶಿರೋಳದಲ್ಲಿ ನಿಮರ್ಿಸಿದ ತಾತ್ಕಾಲಿಕ ಶೆಡ್ ಗಳಿಗೆ ವಿದ್ಯುತ್ ಸಂಪರ್ಕ, ವೆಚ್ಚದ ವಿವರಗಳನ್ನು ಹೆಸ್ಕಾಂ ಅಧಿಕಾರಿಗಳು ಪ್ರತ್ಯೇಕವಾಗಿ ನೀಡಬೇಕು. ಸಾರ್ವಜನಿಕ ಶಿಕ್ಷಣ ಇಲಾಖೆಯ 167 ಶಾಲಾ ಕೊಠಡಿಗಳು ಹಾನಿಗೊಳಗಾಗಿದ್ದ 83 ಕೊಠಡಿಗಳು ತೀವ್ರ ಹಾನಿಗೊಳಗಾಗಿದ್ದು ಹೊಸದಾಗಿ ನಿರ್ಮಿಸಬೇಕು. ಈ ಪೈಕಿ 51 ಸ್ಥಳಗಳಲ್ಲಿ ತಾತ್ಕಾಲಿಕ ಶೆಡ್ಗಳನ್ನು ನಿರ್ಮಿತಿ ಕೇಂದ್ರ ನಿರ್ಮಿಸುತ್ತಿದ್ದು ಈ ಕಾರ್ಯ ಇದೇ ವಾರದಲ್ಲಿ ಪೂರ್ಣಗೊಳಿಸಲು ಜಿಲ್ಲಾಧಿಕಾರಿಗಳು ತಿಳಿಸಿದರು.
ಅಂಗನವಾಡಿ 67 ಕೇಂದ್ರಗಳ ಕಟ್ಟಡಗಳು ಹಾನಿಗೊಳಗಾಗಿದ್ದು ನರಗುಂದ ತಾಲೂಕಿನ 5 ಕಟ್ಟಡಗಳನ್ನು ಹೊಸದಾಗಿ ನಿಮರ್ಿಸಬೇಕಿದೆ. ಅಂದಾಜು ಪಟ್ಟಿಯನ್ನು ತಯಾರಿಸಿ ನೀಡಬೇಕು. ಮಲಪ್ರಭಾ ಬಲದಂತೆ ಕಾಲುವೆ ಉಪ ಕಾಲುವೆ ದುರಸ್ತಿ ಅಂದಾಜು ವೆಚ್ಚ ನೀಡಬೇಕು. ರೋಣ ತಾಲೂಕಿನ ಕೆರೆಗಳನ್ನು ತುಂಬಿಸಲು ಅಗತ್ಯ ಕ್ರಮ ಶೀಘ್ರವೇ ಕೈಕೊಳ್ಳಲು ಅಧಿಕಾರಿಗಳಿಗೆ ಜಿಲ್ಲಾದಿಕಾರಿಗಳು ನಿರ್ದೇಶನ ನೀಡಿದರು.
ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರುದ್ರೇಶ, ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಇದ್ದರು.