ಬೆಂಗಳೂರು, ಜೂ.13, ಉದ್ಯಮಿಗಳನ್ನೇ ಕೇಂದ್ರೀಕರಿಸಿ ಯಾಮಾರಿಸುತ್ತಿದ್ದ ಅಂತಾರಾಜ್ಯ ವಂಚಕರ ವಿರುದ್ಧ ಕಬ್ಬನ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಕೇರಳ ಮೂಲದ ಅಮ್ಜತ್ ಮತ್ತು ಖುಷಿ ಜಾನ್ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಡಿದ್ದಾರೆ. ಆರ್ ಎಸ್ ಎಸ್ ಪ್ರಧಾನ ಕಾರ್ಯದರ್ಶಿ ಎಂದು ಪರಿಚಯಿಸಿಕೊಂಡು ಅಮ್ಜತ್ ಉದ್ಯಮಿಗಳನ್ನು ವಂಚಿಸಿದ್ದ. ಅಮ್ಜತ್ ಮತ್ತು ಖುಷಿ ಜಾನ್ ಅವರು ತಮ್ಮ 48 ಲಕ್ಷ ರೂ.ಗೆ ಬೆನ್ಜ್ ಕಾರು ಪಡೆದುಕೊಂಡು ಎರಡು ತಿಂಗಳಾದರೂ ಹಣ ನೀಡಿಲ್ಲ. ಅಲ್ಲದೇ, ಕಾರು ವಾಪಸ್ಸು ನೀಡದೇ ಮೋಸ ಮಾಡಿದ್ದಾರೆ. ಈ ಬಗ್ಗೆ ವಿಚಾರಿಸಿದಾಗ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಬೆಂಗಳೂರಿನ ಉದ್ಯಮಿ ಶಾಜೀ ಜಾರ್ಜ್ ಥಾಮಸ್ ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ನಂತರ ಬೆನ್ಜ್ ಕಾರನ್ನು ಹಿಂದಿರುಗಿಸಿದಾಗ ಕಾರು ದುಸ್ಥಿತಿಯಲ್ಲಿದ್ದು, ರಿಪೇರಿ ಮಾಡಲು 18 ಲಕ್ಷ ರೂ. ವೆಚ್ಚ ಮಾಡಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ.ಆರೋಪಿಗಳ ವಿರುದ್ಧ ಕೇರಳ ಸೇರಿ ರಾಜ್ಯದ ಹಲವೆಡೆ ವಂಚನೆ ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿಗಳು ಪರಾರಿಯಾಗಿದ್ದು, ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.