ಲೋಕದರ್ಶನವರದಿ
ಹಾವೇರಿ12: ಕೊರೋನಾ ಮಹಾಮಾರಿಯಿಂದ ಸಂಪೂರ್ಣ ಲಾಕ್ಡೌನ್ ಪರಿಣಾಮ ಲಾಕ್ಡೌನ್ ಪರಿಣಾಮ ಜಿಲ್ಲೆಯ ರೈತರ ಬೆಳೆದ ಹಣ್ಣು, ತರಕಾರಿ, ಮೆನಸಿನಕಾಯಿ, ಸೇರಿದಂತೆ ಇತರೆ ಅಲ್ಪಾವಧಿ ಬೆಳೆಗಳಿಗೆ ಬೆಲೆ ಸಿಗದೇ ದೊಡ್ಡ ಪ್ರಮಾಣದಲ್ಲಿ ನಷ್ಟ ಅನುಭವಿಸಿದ್ದಾರೆ. ಹಾನಿ ಅನುಭವಿಸಿದ ರೈತರಿಗೆ ರಾಜ್ಯ ಸರಕಾರ ಪರಿಹಾರ ಘೋಷಿಸಿದ್ದು, ಆದರೆ ಬೆಳೆ ಪರಿಹಾರ ಅರ್ಹ ರೈತರಿಗೆ ಸಿಗುತ್ತಿಲ್ಲ. ಇದನ್ನು ಸರಿಪಡಿಸಬೇಕೆಂದು ಉತ್ತರ ಕನರ್ಾಟಕ ರೈತ ಸಂಘ ಆಗ್ರಹಿಸಿದೆ.
ಈ ಕುರಿತು ಜಿಲ್ಲಾ ತೋಟಗಾರಿಗೆ ಇಲಾಖೆ ಸಹಾಯಕ ನಿದರ್ೇಶಕರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿರುವ ಸಂಘದ ಪದಾಧಿಕಾರಿಗಳು ಪರಿಹಾರ ಪಡೆಯಲು ರೈತರಿಂದ ಅಜರ್ಿ ಸಲ್ಲಿಸಲು ಹೇಳಿ ಅಜರ್ಿ ಸಲ್ಲಿಸಿದ ರೈತರಿಗೆ ಪರಿಹಾರ ನೀಡುವುದನ್ನು ಬಿಟ್ಟು ಲಾಕ್ಡೌನ ಹಿಂದಿನ ವರ್ಷದ ಬೆಳೆ ಸಮೀಕ್ಷೆ ವರದಿ ಇಟ್ಟುಕೊಂಡು ಪರಿಹಾರ ವಿತರಣೆಗೆ ಮುಂದಾಗಿರುವುದು ಸರಿಯಾದ ಕ್ರಮವಲ್ಲ. ಇದರಿಂದ ಹಾನಿ ಅನುಭವಿಸಿದ ಸಾವಿರಾರು ರೈತರಿಗೆ ಅನ್ಯಾಯವಾಗುತ್ತಿದ್ದು, ಅಜರ್ಿ ಸಲ್ಲಿಸಿದ ಎಲ್ಲ ರೈತರಿಗೆ ಬೆಳೆ ಆಧಾರದ ಮೇಲೆ ಪರಿಹಾರ ನೀಡಬೇಕು.
ರಾಜ್ಯ ಸರಕಾರ ಇಂತಹ ರೈತರಿಗಾಗಿ ಪರಿಹಾರ ಹಣ ಘೋಷಣೆ ಮಾಡಿದ್ದು, ಆದರೆ, ಹಾನಿಯಾದ ರೈತರ ಖಾತೆಗೆ ಹಣ ನೀಡಬೇಕಾದ ತೋಟಗಾರಿಕೆ ಇಲಾಖೆ ಹಿಂದಿನ ವರ್ಷದ ದ್ರೋಣ ಕ್ಯಾಮರಾ ಮೂಲಕ ಸೆರೆ ಹಿಡಿಯಲಾದ ಬೆಳೆ ಸಮೀಕ್ಷೆ ವರದಿಯ ಪಟ್ಟಿ ಹಿಡಿದುಕೊಂಡು ಅಂತಹ ರೈತರಿಗೆ ಬೆಳೆ ಪರಿಹಾರ ನೀಡಲು ಮುಂದಾಗಿದೆ. ಇದರಿಂದ ಜಿಲ್ಲೆಯ ಲಕ್ಷಾಂತರ ರೈತರು ಪರಿಹಾರದಿಂದ ವಂಚಿತರಾಗುತ್ತಿದ್ದಾರೆ. ಈ ತಾರತಮ್ಯ ನೀತಿಯನ್ನು ತಕ್ಷಣವೇ ನೀಲ್ಲಿಸಬೇಕು. ಹಾನಿಯೊಳಗಾದ ಎಲ್ಲಾ ರೈತರ ಬೆಳೆಗಳಿಗೆ ಕಡ್ಡಾಯವಾಗಿ ಯೋಗ್ಯ ಪರಿಹಾರ ನೀಡಬೇಕು.
ಹಣ್ಣು, ತರಕಾರಿ, ಮೆನಸಿನಕಾಯಿ, ಬೆಳೆ ಬೆಳೆದ ರೈತರಿಗೆ ಪತ್ರಿ ಹೆಕ್ಟೇರಗೆ 15 ಸಾವಿರ ಪರಿಹಾರ ಹಣ ಪ್ರತಿಯೊಬ್ಬ ರೈತರ ಖಾತೆಗೆ ನೀಡಬೇಕಾದ ತೋಟಗಾರಿಕೆ ಇಲಾಖೆ ಈಗ ಹೊಸ ರಾಗ ತಗೆದಿದೆ.ರೈತರಿಗೆ ದೊಡ್ಡ ಅನ್ಯಾಯವಾಗಲಿದೆ. ತಕ್ಷಣವೇ ರೈತರ ನೆರವಿಗೆ ಸರಕಾರ ಬರಬೇಕು. ಅಜರ್ಿ ಸಲ್ಲಿಸಲು ಅವಧಿ ವಿಸ್ತರಣೆ ಮಾಡಬೇಕು. ಹಾನಿಯಾದ ಎಲ್ಲ ರೈತರಿಗೂ ಪರಿಹಾರ ಕಲ್ಪಿಸಿಕೊಡಬೇಕು. ಸರಿಪಡಿಸದೇ ಹೋದರೇ ಜಿಲ್ಲಾ ಡಿಸಿ ಕಚೇರಿ ಮುಂದೆ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಆಗ್ರಹಿಸಲಾಗಿದೆ. ಈ ಸಂದರ್ಭದಲ್ಲಿ ಉತ್ತರ ಕನರ್ಾಟಕ ರೈತ ಸಂಘ ಹಾವೇರಿ ತಾಲೂಕಾಧ್ಯಕ್ಷ ಪಕ್ಕೀರಗೌಡ ಗಾಜೀಗೌಡ್ರ, ನಾಗಪ್ಪ ರಾಮಜ್ಜನವರ, ಬಸವರಾಜ ಬುಳ್ಳಮ್ಮನವರ ಇನ್ನು ಮುಂತಾದವರು ಹಾಜರಿದ್ದರು.