ಬಡ ರೋಗಿಗಳ ಉಚಿತ ಸೇವೆಗೆ ಬದ್ಧ : ಡಾ: ಕಮತಗಿ

Committed to providing free services to poor patients: Dr. Kamatagi

 ಗೋಕಾಕ 12: ತಾಲೂಕಿನ ಪ್ರತಿ ಗ್ರಾಮ ಹಾಗೂ ತಾಲೂಕಾ ಕೇಂದ್ರಗಳಲ್ಲಿ ಇರುವ ಬಡ ರೋಗಿಗಳ ಉಚಿತ  ಸೇವೆ ಮಾಡುವುದು ನಮ್ಮ ಸಂಸ್ಥೆಯ ಧ್ಯೇಯವಾಗಿದೆ ಎಂದು ಭಾರತೀಯ ಹ್ಯೂಮನ್ ರೈಟ್ಸ್‌ ಕೌನ್ಸಿಲ್ ಬೆಳಗಾವಿ ಜಿಲ್ಲಾ ಅಧ್ಯಕ್ಷರಾದ ಗೋಕಾಕ ಪಟ್ಟಣದ ಡಾಕ್ಟರ್ ಹನುಮಂತ ಕಮತಗಿ ಅವರು ಹೇಳಿದರು. 

ಭಾರತೀಯ ಹ್ಯೂಮನ್ ರೈಟ್ಸ್‌ ಕೌನ್ಸಿಲ್ ಆಶ್ರಯದಲ್ಲಿ ಸವದತ್ತಿ ತಾಲೂಕಿನ ಶಿರಸಂಗಿ ಗ್ರಾಮದಲ್ಲಿ ಜರುಗಿದ ಉಚಿತ ಆರೋಗ್ಯ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೆಹಲಿಯ ಭಾರತೀಯ ಹ್ಯೂಮನ್ ರೈಟ್ಸ್‌ ಕೌನ್ಸಿಲ್‌ದ ಆದೇಶದ ಮೇರೆಗೆ ಬಡ ಜನರಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಂಡು ಹಂತ ಹಂತವಾಗಿ ಕಾರ್ಯರೂಪಕ್ಕೆ ತರುವ ಗುರಿಯನ್ನು ಹೊಂದಿದ್ದೇವೆ. ನಿರ್ಗತಿಕರ ಏಳಿಗೆಗಾಗಿ ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರ ಸೇವೆಗೆ ಬದ್ಧರಾಗಿದ್ದೇವೆ ಎಂದು ಅವರು ಹೇಳಿದರು. 

ಆಯಾ ಜನರ ರೋಗದ ತಕ್ಕಂತೆ ಚಿಕಿತ್ಸೆ ಮಾಡಿ ಉಚಿತವಾಗಿ ಓಷಧ ಉಪಚಾರ ಸೇವೆ ಮಾಡುವುದಾಗಿ ಡಾ: ಕಮತಗಿ  ಹೇಳಿದರು. 

 ಜಿಲ್ಲಾ ಉಪಾಧ್ಯಕ್ಷರಾದ ಡಾಕ್ಟರ್ ಎಂ.ಕೆ.ನದಾಫ್ ಅವರು ಮಾತನಾಡಿ, ಮೂಲತಃ ದೆಹಲಿಯ ಸಂಸ್ಥೆಯಾದ ಭಾರತೀಯ ಹ್ಯೂಮನ್ ರೈಟ್ಸ್‌ ಕೌನ್ಸಿಲ್ ವತಿಯಿಂದ ಬಡವರ ಆರೋಗ್ಯದ ರಕ್ಷಣೆಗಾಗಿ ಉಚಿತ ಶಿಬಿರಗಳನ್ನು ಏರಿ​‍್ಡಸಲಾಗುತ್ತಿದೆ. ಈ ಶಿಬಿರಗಳ ಲಾಭವನ್ನು ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು. ಗ್ರಾಮಗಳಲ್ಲಿ ಸ್ವಚ್ಛತೆಯ ಬಗ್ಗೆ ಹಾಗೂ ಇತರ ಸಮಸ್ಯೆಗಳ ಕುರಿತು ಸಮಾಲೋಚಿಸಿ ಜನರಿಗೆ ತಿಳುವಳಿಕೆ ನೀಡಿ ಆಯಾ ಗ್ರಾಮಗಳ ಬಡಜನರ ಸಮಸ್ಯೆಗಳಿಗೆ ತಕ್ಕಂತೆ ಕಾರ್ಯಕ್ರಮ ರೂಪಿಸಿ ಸಮಸ್ಯೆ ಪರಿಹಾರಕ್ಕೆ ಶ್ರಮಿಸುವುದಾಗಿ ತಿಳಿದರು. ಈ ಶಿಬಿರದಲ್ಲಿ ಅನೇಕ ಜನರು ಆರೋಗ್ಯ ತಪಾಸಣೆ ಮಾಡಿಕೊಂಡು ತಮ್ಮ ವಯಕ್ತಿಕ ಸಮಸ್ಯೆಗಳನ್ನು ತೋಡಿಕೊಂಡರು.