ಲೋಕದರ್ಶನ ವರದಿ
ಪುರುಷ ಪ್ರಧಾನ ವ್ಯವಸ್ಥೆಯಿರುವ ತಮ್ಮ ಸ್ಥಾನಗಳನ್ನು ಭದ್ರಗೊಳಿಸುವ ನಿಟ್ಟಿನಲ್ಲಿ ಸಾಗುತ್ತಿರುವ ಮಹಿಳೆಯರ ಕಾರ್ಯ ಶ್ಲಾಘನಿಯ
ಧಾರವಾಡ 18: ಕರ್ನಾಟಕ ವಿದ್ಯಾವರ್ಧಕ ಸಂಘದ ರಾ.ಹ.ದೇಶಪಾಂಡೆ ಸಭಾಭವನದಲ್ಲಿ ದಿ. 17 ನಾವೀಕಾ ರಂಗಭೂಮಿ ಸಂಸ್ಥೆ ಧಾರವಾಡ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವುಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಾಹಿತ್ಯ, ಸಂಗೀತ, ಶಿಕ್ಷಣ, ಉದ್ಯಮ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಪುರುಷರಿಗೆ ಸರಿ ಸಮಾನವಾಗಿ ಅವಕಾಶಸಿಗದ ಸಂದರ್ಭದಲ್ಲೂ ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಮಹಿಳೆಯರು ಮೇಲುಗೈ ಸಾಧಿಸುತ್ತಿರುವುದು ಪ್ರಶಂಸನೀಯ. ಸಾಧನೆಯ ಶಿಖರವನ್ನೇರಲು ಪೂರಕವಾಗಿ ಸಹಕಾರಿಯಾಗುತ್ತಿರವ ನಾವೀಕಾ ರಂಗಭೂಮಿ ಸಂಸ್ಥೆ ಕಲ್ಪಿಸುವ ವೇದಿಕೆಗಳನ್ನು, ಮಹಿಳೆಯರು ಸದ್ಬಳಕೆ ಮಾಡಿಕೊಳ್ಳುವ ಮೂಲಕ ತಮ್ಮ ಸುಪ್ತ ಪ್ರತಿಭೆಗಳನ್ನು ಪ್ರದರ್ಶಿಸಲಿ ಎಂದರು.
ಅತಿಥಿಯಾಗಿ ರೂಪಾ ಪ್ರಶಾಂತ ಮಾತನಾಡಿ, ಸಹನೆಯ ಸಾಕಾರಮೂರ್ತಿಯದ ನಾರಿ, ನಾಡಿನ ಸಂಸ್ಕಾರ-ಸಂಸ್ಕೃತಿ ಉಳಿಸಿ, ಬೆಳೆಸುವುದರಲ್ಲಿ ಮಹತ್ವದ ಪಾತ್ರವಹಿಸಿದ್ದಾಳೆ. ತೊಟ್ಟಿಲುತೂಗುವ ಕೈ ಇಡೀಜಗತ್ತನೇತೂಗಬಲ್ಲದುಎಂಬುದಕ್ಕೇ ಮಾಜಿರಾಷ್ಟ್ರಪತಿ ಪ್ರತಿಭಾ ಪಾಟೀಲ್, ಸಮಾಜ ಸೇವೆಯಲ್ಲಿ ಮದರತೆರೇಸ, ಉದ್ಯಮಕ್ಷೇತ್ರದಲ್ಲಿ ಇನ್ಫೋಸಿಸ್‌ನ ಸುಧಾ ಮೂರ್ತಿ, ನಾಡಿನ ಸಂಸ್ಕೃತಿ ಬಿಂಬಿಸುವಲ್ಲಿಖ್ಯಾತಗಾಯಕಿ ಲತಾ ಮಂಗೇಶ್ಕರ ಹೀಗೆ ಹಲವಾರು ಕ್ಷೇತ್ರಗಳಲ್ಲಿ ನಿರಂತರ ಶ್ರಮ, ಛಲದಿಂದ ಸಾಧನೆಗೈದ ಸಾಧಕಿಯರೆಲ್ಲರೂ ನಮಗೆ ಮಾದರಿಯಾಗಿದ್ದಾರೆಎಂದರು.
ರಂಗಭೂಮಿ ನಟ ಮಕಬೂಲ್ ಹುಣಸಿಕಟ್ಟಿ ಮಾತನಾಡಿ, ಜೀವನವೇಒಂದು ನಾಟಕ ಶಾಲೆ. ನಾವೆಲ್ಲರೂ ಪಾತ್ರಧಾರಿಗಳು.ಜೀವನದಲ್ಲಿ ನಡೆದ, ನಡೆಯುವಅಥವಾ ನಡೆಯಲಿರುವಕಾಲ್ಪನಿಕ ಸನ್ನಿವೇಶಗಳನ್ನು ನಾಟಕದಲ್ಲಿಕಾಣುತ್ತೇವೆ. ರಂಗಭೂಮಿದೈಹಿಕ ಹಾಗೂ ಮಾನಸಿಕವಾಗಿ ನಮ್ಮನ್ನು ಸಧೃಡಗೊಳಿಸುತ್ತದೆ ಹಾಗೂ ಸಂಬಂಧವನ್ನು ಗಟ್ಟಿಗೊಳಿಸುತ್ತದೆ ಎಂದರು. ಹಾಗೆಯೇರಂಗಭೂಮಿಯೊಂದಿಗಿರುವತಮ್ಮಒಡನಾಟವನ್ನು ಹಂಚಿಕೊಂಡರು.
ನಂತರ, ಸಂಗೀತ, ನೃತ್ಯ ಹಾಗೂ ಲೋಹಿತ ನಾಯ್ಕರ್ ರಚಿಸಿದ, ಸಿ.ಡಿ.ಜಿಗಜಿನ್ನಿ ನಿರ್ದೇಶನದಲ್ಲಿ ನಾ ಬದುಕಲಿಕ್ಕೆಒಲ್ಲೆ ನಾಟಕ ಯಶಸ್ವಿಯಾಗಿ ಪ್ರದಶನಗೊಂಡಿತು.ರಂಗಭೂಮಿ ಹಿರಿಯಕಲಾವಿದೆಕ್ಷಮಾಆನಂದ ಹೊಸಕೇರಿಅವರನ್ನು ಸನ್ಮಾನಿಸಲಾಯಿತು. ಅಶ್ವಿನಿ ಹಿರೇಮಠಕಾರ್ಯಕ್ರಮ ನಿರೂಪಿಸಿದರೆ, ಆರತಿ ದೇವಶಿಖಾಮಣಿ ಸ್ವಾಗತಿಸಿದರು.ಪದ್ಮಾವತಿ ದೇವಶಿಖಾಮಣಿ, ಎನ್.ರಾಜೇಶ್ವರಿ ಸುಳ್ಯ, ಸುಮಿತ್ರಾ ಬಡಿಗೇರ, ಕಮಲ ಕಂಚಗಾರ ಸೇರಿದಂತೆ ಅನೇಕ ಕಲಾಸಕ್ತರುಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.