ಫೆ.04ರಂದು ಚಿಕ್ಕೇನಕೊಪ್ಪ ಚನ್ನವೀರ ಶರಣರ ಪುಣ್ಯಸ್ಮರಣೆ- ವಿವಾಹ ಕಾರ್ಯಕ್ರಮ

Commemoration of Chickenakoppa Channaweera Sharan on February 04 - wedding program

ಫೆ.04ರಂದು ಚಿಕ್ಕೇನಕೊಪ್ಪ ಚನ್ನವೀರ ಶರಣರ ಪುಣ್ಯಸ್ಮರಣೆ- ವಿವಾಹ ಕಾರ್ಯಕ್ರಮ 

ಕಂಪ್ಲಿ 30: ಕಂಪ್ಲಿ ತಾಲ್ಲೂಕಿನ ನಂ.3 ಸಣಾಪುರ ಗ್ರಾಮದಲ್ಲಿ ಫೆ.04ರಂದು  ಮಂಗಳವಾರ ರಥಸಪ್ತಮಿಯಂದು ಮಹಾಮಹಿಮ ಮೌನತಪಸ್ವಿ ಪರಮಪೂಜ್ಯ ಶ್ರೀ ಚಿಕ್ಕೇನಕೊಪ್ಪ ಚನ್ನವೀರ ಶರಣರ 30ನೇ ವರ್ಷದ ಪುಣ್ಯಸ್ಮರಣೆ  ಹಾಗೂ ವಿವಾಹ ಕಾರ್ಯಕ್ರಮವನ್ನು ಏರಿ​‍್ಡಸಲಾಗಿದೆ. ಗ್ರಾಮದ ಪ್ರಮುಖ ಬೀದಿಗಳಲ್ಲಿ ಬೆಳಿಗ್ಗೆ ಕಳಸಕನ್ನಡಿ, ಮಂಗಳ ವಾದ್ಯ, ವಿವಿಧ ಜಾನಪದ ತಂಡಗಳೊಂದಿಗೆ ಚಿಕ್ಕೇನಕೊಪ್ಪ ಚನ್ನವೀರ ಶರಣರ ಭಾವಚಿತ್ರದ ಮೆರವಣಿಗೆ ಜರುಗಲಿದೆ. ನಂತರ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಸಾಮೂಹಿಕ ವಿವಾಹಗಳು ಬೆಳಿಗ್ಗೆ 10-50 ರಿಂದ 11-45 ಗಂಟೆಯ ಶುಭ ಮೂಹೂರ್ತದಲ್ಲಿ ಜರುಗಲಿವೆ. ಕಾರ್ಯಕ್ರಮದಲ್ಲಿ ಹೆಬ್ಬಾಳ ಬ್ರಹನ್ಮಠದ ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು,ಬಳಾಗನೂರಿನ ಶಿವಶಾಂತವೀರ ಶರಣರು, ಸಜ್ಜಲಗುಡ್ಡದ ದೊಡ್ಡ ಬಸವಾರ್ಯ ತಾತನವರು, ಸುಳೇಕಲ್ ಬ್ರಹನ್ಮಠದ ವೇ.ಮೂ. ಭುವನೇಶ್ವರಯ್ಯ ಸ್ವಾಮಿಗಳು,ಹರಳಳ್ಳಿಯ ಗವಿಸಿದ್ದೇಶ್ವರ ಮಹಾಸ್ವಾಮಿಗಳು,ಮುಷ್ಠೂರು ಗ್ರಾಮದ ಹಿರೇಮಠದ ಈಶ್ವರಯ್ಯ ತಾತನವರು ಹಾಗೂ ಶಾಸಕರು, ಸಂಸದರು, ಹಾಲಿ,ಮಾಜಿ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. 

ಫೆ.07ರಿಂದ ಪುರಾಣ ಪ್ರವಚನಃ- ಇದೇ ಗ್ರಾಮದಲ್ಲಿ ಲಿಂಗದಲ್ಲಿ ಉದ್ಬವಿಸಿರುವ ಶ್ರೀ ವೀರಭದ್ರೇಶ್ವರರ ಜಾತ್ರಾ ಮಹೋತ್ಸವದ ಅಂಗವಾಗಿ 48ನೇ ವರ್ಷದ ಮಹಾ ದಾಸೋಹಿ ಕಲಬುರಗಿ ಶರಣಬಸವೇಶ್ವರರ ಪುರಾಣ ಪ್ರವಚನ ಆರಂಭವಾಗಲಿದ್ದು, ಒಂದು ತಿಂಗಳ ಕಾಲ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಪುರಾಣ ಪ್ರವಚನ ನಡೆಯಲಿದ್ದು, ಮಾ.09 ರಂದು ಪುರಾಣ ಪ್ರವಚನ ಮಹಾಮಂಗಲಗೊಳ್ಳಲಿದ್ದು, ಅಂದು ಸಂಜೆ ಶ್ರೀ ವೀರಭದ್ರೇಶ್ವರರ ಮಹಾರಥೋತ್ಸವವು ವಿಜೃಂಭಣೆಯಿಂದ ಜರುಗಲಿದೆ. ಜ.001: ಕಂಪ್ಲಿ ತಾಲ್ಲೂಕು ಸಣಾಪುರ ಗ್ರಾಮದಲ್ಲಿ ಪ್ರತಿಷ್ಠಾಪಿಸಲಾದ ಬಳಗಾನೂರಿನ ಚನ್ನವೀರ ಶರಣ ಅಮೃತ ಶಿಲಾ ಪ್ರತಿಮೆ.