ರೋಗ ನಿಯಂತ್ರಣಕ್ಕೆ ಸಹಕರಿಸಿ, ಉತ್ತಮ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿ: ಡಾ.ಎನ್.ಬಸರೆಡ್ಡಿ

ಲೋಕದರ್ಶನ ವರದಿ

ಬಳ್ಳಾರಿ 29: ಸಾರ್ವಜನಿಕರು ಡೆಂಗ್ಯು ಸೇರಿದಂತೆ ಇತರೆ ಮಾರಾಂಣತಿಕ ರೋಗಗಳನ್ನು ನಿಯಂತ್ರಣಕ್ಕೆ ಸಹಕರಿಸಿ, ಉತ್ತಮ ಸಮಾಜ ನಿರ್ಮಾ ಣಕ್ಕೆ ಕೈಜೋಡಿಸಬೇಕು ಎಂದು ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ.ಎನ್.ಬಸರೆಡ್ಡಿ ಅವರು ಕರೆ ನೀಡಿದರು. ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾ ಕಚೇರಿಯ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಡೆಂಗ್ಯು ದಿನಾಚರಣೆ ಅಂಗವಾಗಿ ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಛೇರಿ ಆವರಣದಲ್ಲಿ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದರು. 

ಡೆಂಗ್ಯು ಮತ್ತು ಚಿಕುಂಗುನ್ಯ ಜ್ವರ ಇದರ ನಿಯಂತ್ರಣ ನಿಮ್ಮ ಕೈಯಲ್ಲಿದೆ. ಡೆಂಗ್ಯು ಜ್ವರ ವೈರಸ್ನಿಂದ ಉಂಟಾಗುವ ಖಾಯಿಲೆ ಆಗಿದ್ದು, ಇದು ಸೋಂಕು ಹೊಂದಿದ ಈಡೀಸ್ ಈಜಿಪ್ಟೈ ಸೊಳ್ಳೆಯ ಕಚ್ಚುವಿಕೆಯಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಇದನ್ನು ತಡೆಗಟ್ಟಲು ನೀರು ಶೇಖರಣಾ ತೊಟ್ಟಿಗಳನ್ನು ನೀರಿನ ಸಿಮೆಂಟ್ ತೊಟ್ಟಿ (ಸಂಪ್), ಬ್ಯಾರಲ್, ಡ್ರಮ್, ಮಡಿಕೆ, ಮನೆ ಮೇಲಿನ ಟ್ಯಾಂಕಿ ಇವುಗಳಲ್ಲಿ ಸೊಳ್ಳೆಗಳು ನುಸುಳದಂತೆ ಭದ್ರವಾಗಿ ಮುಚ್ಚಿಡಿ. ಸೊಳ್ಳೆ ಕಚ್ಚದಂತೆ ಸೊಳ್ಳೆ ಪರದೆ, ಸೊಳ್ಳೆಬತ್ತಿ, ಮುಲಾಮು ಇತ್ಯಾದಿ ಉಪಯೋಗಿಸಿ. ಮನೆಯ ಮೇಲೆ ಮತ್ತು ಸುತ್ತ-ಮುತ್ತ ಬಿಸಾಡಿದ ಟೈರು, ತೆಂಗಿನಚಿಪ್ಪು, ಡಬ್ಬಿ, ಪ್ಲಾಸ್ಟಿಕ್ಗ್ಲಾಸ್ / ಕಪ್ ಇತ್ಯಾದಿಗಳಲ್ಲಿ ಮಳೆ ನೀರು ಸಂಗ್ರಹವಾಗದಂತೆ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಿ.  ಮನೆಯ ಸುತ್ತ ಮನೆಯ ಮೇಲ್ಛಾವಣಿಯಲ್ಲಿ ಮಳೆ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು ಎಂದರು. ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳಾದ ಡಾ. ಆರ್.ಅನಿಲ್ ಕುಮಾರ್ ಇವರು ಮಾತನಾಡಿ,  ಜನರ ಸಹಕಾರದಿಂದ ಡೆಂಗಿ ಜ್ವರವನ್ನು ತಡೆಗಟ್ಟಬಹುದು. ತೀವ್ರ ಜ್ವರ, ವಿಪರೀತ ತಲೆನೋವು, ಕಣ್ಣು ಹಿಂಭಾಗದಲ್ಲಿ ನೋವು, ಮಾಂಸಖಂಡ ಮತ್ತು ಕೀಲುಗಳಲ್ಲಿ ವಿಪರೀತ ನೋವು ಇವು ಡೆಂಗಿ ರೋಗದ ಲಕ್ಷಣಗಳಾಗಿದ್ದು, ಇಂತಹ ಲಕ್ಷಣಗಳು ಕಂಡಬಂದಲ್ಲಿ ಕೂಡಲೇ ವೈದ್ಯಾಧೀಕಾರಿಗಳನ್ನು ಸಂಪಕರ್ಿಸಿ ಉಚಿತ ಚಿಕಿತ್ಸೆಯನ್ನು ಪಡೆಯಿರಿ ಎಂದರು. 

ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಡಾ.ಚೌಹಾಣ್, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಹೆಚ್.ನಿಜಾಮುದ್ದೀನ್, ಜಿಲ್ಲಾ ಆರ್.ಸಿ.ಹೆಚ್.ಅಧಿಕಾರಿ ಡಾ.ರವೀಂದ್ರನಾಥ್, ಹೆಚ್.ಎಂ, ಜಿಲ್ಲಾ ಸವರ್ೇಕ್ಷಣಾಧಿಕಾರಿಗಳಾದ ಡಾ.ಅನಿಲ್ ಕುಮಾರ್ ಆರ್, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿಗಳಾದ ಡಾ.ರಾಜಶೇಖರ್ರೆಡ್ಡಿ., ಸಹಾಯಕ ಕೀಟತಜ್ಞರಾದ ಶ್ರೀಮತಿ ನಂದಾ ಕಡಿ, ಡಾ.ಲಕ್ಷ್ಮಿಕಾಂತ, ದುರುಗೇಶ್ ಮಾಚನೂರು, ಜಿಲ್ಲಾ ಆರೋಗ್ಯ ಶಿಕ್ಷ್ಷಣಾಧಿಕಾರಿಗಳಾದ ಈಶ್ವರ ದಾಸಪ್ಪನವರ ಮತ್ತು ಕೃಷ್ಣಾನಾಯಕ್, ವಿಬಿಡಿಸಿ ಕನ್ಸಲ್ಟೆಂಟ್ ಹೆಚ್.ಪ್ರತಾಪ್, ಪ್ರ.ಶಾ.ತಂತ್ರಜ್ಞರಾದ ಮಹಮ್ಮದ್ ಮಕ್ಸೂದ್ ಅಲಿ, ಆಶಾ ಜಹಗೀರ್ದಾರ್, ನಂದಿನಿ, ಶಕುಂತಲ, ಹಿರಿಯ ಆರೋಗ್ಯ ಸಹಾಯಕರುಗಳಾದ ಬಸವರಾಜ.ಯು, ಶಕುಂತಲಾ ಮ್ಯಾಳಿ, ಕಿರಿಯ ಆರೋಗ್ಯ ಸಹಾಯಕರುಗಳಾದ ಶಕೀಲ್ ಅಹ್ಮದ್, ಮುಸ್ತಾಕ್ ಅಹ್ಮದ್, ಚಿದಾನಂದ, ಮರಿಬಸವನ ಗೌಡ ಚಾನಾಳ್, ಹಾಗೂ ಜಿಲ್ಲಾ ವಿಬಿಡಿಸಿ ಸಿಬ್ಬಂದಿ ವರ್ಗದವರು ಇದ್ದರು. ಜಾಥಾವು ಜಿಲ್ಲಾ ಆಸ್ಪತ್ರೆಯಿಂದ ಪ್ರಾರಂಭವಾಗಿ ನಗರದ ವಿವಿಧ ಪ್ರಮುಖ   ರಸ್ತೆಗಳಲ್ಲಿ ಸಂಚರಿಸಿತು. ಈ ಜಾಥಾದಲ್ಲಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ತರಬೇತಿ ಕೇಂದ್ರದ ಪ್ರೇಮಾ ಹಾಗೂ ಎಲ್ಲಾ ಪ್ರಶಿಕ್ಷ್ಷಣಾಥರ್ಿಗಳು, ಜಿ.ಎನ್.ಎಂ ವಿದ್ಯಾಥರ್ಿಗಳು, ನಗರ ಆರೋಗ್ಯ ಕೇಂದ್ರದ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆ ಯರು ಭಾಗವಹಿಸಿದ್ದರು.