ಕರಾವಳಿ ಉತ್ಸವ : ಫಲಪುಷ್ಪ ಪ್ರದರ್ಶನಕ್ಕೆ ನೇವಿ ಕಮಾಂಡರ್ ಕುಮಾರ್ ರಿಂದ ಚಾಲನೆ

ಕಾರವಾರ 08 : ಕರಾವಳಿ ಉತ್ಸವದ ಅಂಗವಾಗಿ  ಯುದ್ದ-ನೌಕೆ ಉದ್ಯಾವನದಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನಕ್ಕೆ ಕದಂಬ ನೌಕಾನೆಲೆ ಮುಖ್ಯಸ್ಥರಾದ ವೈಯ್ಸ್ ಅಡ್ಮಿರಲ್ ಕೆ.ಜೆ.ಕುಮಾರ ರಿಬ್ಬನ ಕತ್ತಿಸುವ ಮೂಲಕ ಫಲ-ಪುಷ್ಪ ಪ್ರದರ್ಶನಕ್ಕೆ, ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಸಮ್ಮುಖದಲ್ಲಿ ಚಾಲನೆ ನೀಡಿದರು. ಫಲಪುಷ್ಪ ಪ್ರದರ್ಶನದಲ್ಲಿ ಹೂವಿನಿಂದ ತಯಾರಿಸಿದ ಜೆಲ್ಲಿ ಫಿಷ್, ಅಕ್ಟೋಪಸ್, ಪೆಂಗವಿನ್ ಮೀನು ಮತ್ತು ಇತರೇ ಪ್ರಾಣಿ ಪಕ್ಷಿಗಳು ಗಮನಸೆಳದವು. ನಗರದ  ರವೀಂದ್ರನಾಥ ಕಡಲ ತೀರದಲ್ಲಿರುವ ವಾರ್ ಶಿಪ್ ಉದ್ಯಾವನದಲ್ಲಿ ಜಿಲ್ಲಾಡಳಿತ ಮತ್ತು ತೋಟಗಾರಿಕಾ ಇಲಾಖೆ ಸಹಯೋಗದಲ್ಲಿ ಕರಾವಳಿ ಉತ್ಸವದ ಅಂಗವಾಗಿ ಫಲಪುಷ್ಪ ಪ್ರದರ್ಶನ  ಆಯೋಜಿಸಲಾಗಿದ್ದು,  ಗುಲಾಬಿ, ಸೇವಂತಿ, ಕಾನರ್ೆಶನ್ ಹೂವು ಮತ್ತು ಅಸ್ಪಾರಗಸ್ ಹುಲ್ಲು ಹಾಗೂ ಕಲ್ಲಂಗಡಿ ಹಣ್ಣು, ಬಗೆ ಬಗೆಯ ತರಕಾರಿಗಳಿಂದ ವಿವಿಧ ಕಲಾಕೃತಿಗಳನ್ನು ರೂಪಿಸಲಾಗಿದೆ. 

ಪ್ರದರ್ಶನದಲ್ಲಿ ಸೇವಂತಿ, ಗುಲಾಬಿ ಮತ್ತು ವಿವಿಧ  ತರಹದ ಹೂವುಗಳಿಂದ ಮಾಡಿರುವ ಯಕ್ಷಗಾನ ಕೀರಿಟ, ಡೋಲು, ಬೇಬಿ ಡಾಲ್,  ರೇಸಿಂಗ ಕಾರು, ಚಾಹದ ಕಿಟ್ಟಲಿ, ಕಪ್ಪು, ಬಸಿ, ನಾಜೂಕಾದ ಗೋದಿ ಕಡ್ಡಿಯಿಂದ ತಯಾರಿಸಿರುವ ಲಂಡನ್ ಬ್ರಿಜ್, ಪೀಸಾ ಟಾವರ್, ಕಲ್ಲಂಗಡಿಯಲ್ಲಿ ಮೂಡಿಬಂದಿರುವ ಜ್ಞಾನಪೀಠ ಪುರಸ್ಕೃತರಾದ ಕುವೆಂಪು, ಬೇಂದ್ರ, ಮಾಸ್ತಿ, ಗೋಕಾಕ್,ಅನಂತಮೂತರ್ಿ,ಕಾನರ್ಾಡ, ಸಾಹಿತಿಗಳ ಕಲಾಕೃತಿಗಳು, ಕುಂಬಳಕಾಯಿ ಮತ್ತು ಸೌತೆಕಾಯಿಗಳಿಂದ ತಯಾರಿಸಿದ ಸಂಗೀತಗಾರರ ಗೊಂಬೆಗಳು ನೋಡುಗರ ಕಣ್ಮನ ಸೆಳೆಯುತ್ತಿವೆ. ಇವುಗಳೊಂದಿಗೆ ರಾಗಿ ಸಜ್ಜೆ, ನವಣೆಯಂತಹ ಸಿರಿಧಾನ್ಯಗಳಿಂದ ನಿಮರ್ಿಸಿರುವ ಸರ್ ಎಂ.ವಿಶ್ವೇಶ್ವರಯ್ಯಾ ಮತ್ತು ಸರದರ್ಾರ್ ವಲ್ಲಬಾಯಿ ಪಟೇಲ್ ಅವರ ಮೂತರ್ಿಗಳು ಎದ್ದು ಬರುವಂತಿವೆ. ಬೃಹತಾಕಾರದ ಹೂವಿನ ರಂಗೋಲಿ ಚಿತ್ತಾರ ಕೇಂದ್ರಬಿಂದುವಾಗಿದ್ದು,  ನಾರಿಕೆಳದ ಕೆತ್ತನನೆಗಳು, ಬೋನ್ಸಾಯ್ ಗಿಡ ಮರಗಳು, ಸ್ಥಳಿಯ ರೈತರು  ಹಸಿ ಶುಂಠಿ, ಸಿಟ್ರೋನೆಲ್ಲಾ, ಲಿಂಬೆ ಮತ್ತು ಎಲಕ್ಕಿಯಿಂದ  ತಯಾರಿಸಿದ ಸುಗಂದ ದ್ರವ್ಯಗಳು ಮತ್ತು ಜಿಲ್ಲೆಯ ಪ್ರಮುಖ  ಬೆಳೆಗಳಾದ ಬಾಳೆ, ಅಡಕೆ, ಕೋಕಮ್, ಗಜನಿಂಬೆ ಮತ್ತು ಇತರ ಬೆಳೆಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.  ಫಲಪುಷ್ಪ ಪ್ರದರ್ಶನದ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ್, ಅಡಿಸನಲ್ ಎಸ್ಪಿ ಗೋಪಾಲ ಬ್ಯಾಕೋಡ, ಜಿಲ್ಲಾ ತೋಟಗಾರಿಕಾ ಇಲಾಖೆ ಉಪನಿದರ್ೇಶಕ ಶಶಿಕಾಂತ ಕೋಟಿಮನೆ ಮತ್ತು ಇತರರು ಉಪಸ್ಥಿತರಿದ್ದರು.