ಕರಾವಳಿ ಭೀಮೋತ್ಸವ ಎ. 10 ರಿಂದ ಐದು ದಿನ ಆಚರಣೆ
ಕಾರವಾರ 20: ಸಂವಿದಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನ ರಾಮ ಜಯಂತಿಯ ಅಂಗವಾಗಿ 5 ದಿನ ಕರಾವಳಿ ಬೀಮೋತ್ಸವ ಕಾರ್ಯಕ್ರಮವನ್ನು ಮಯೂರವರ್ಮ ವೇದಿಕೆಯಲ್ಲಿ ಆಚರಿಸಲಾಗುವುದು ಎಂದು ಡಿ.ಎಸ್.ಎಸ್. ಮುಖಂಡ ದೀಪಕ್ ಕುಡಾಳಕರ್ ಹೇಳಿದರು.ಕಾರವಾರದ ಪತ್ರಿಕಾಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರುಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರರವರ 134 ನೇ ಜಯಂತಿ ಮತ್ತು ಡಾ. ಬಾಬು ಜಗಜೀವನ ರಾಮರವರ 117ನೇ ಜಯಂತಿಯ ಅಂಗವಾಗಿ ಜಿಲ್ಲಾ ಕೇಂದ್ರ ಸ್ಥಾನವಾದ ಕಾರವಾರ ನಗರದ ಮಯೂರ ವರ್ಮ ವೇದಿಕೆಯಲ್ಲಿ ಕರಾವಳಿ ಭೀಮೋತ್ಸವ ವನ್ನು ಎಪ್ರಿಲ್ 10 ರಿಂದ ರ. 14 ವರೆಗೆ ಐದು ದಿನದ ವರೆಗೆ ನಡೆಸಲಾಗುವುದು. ಉತ್ತರ ಕನ್ನಡ ಜಿಲ್ಲೆಯ ಪ್ರತಿಭಾವಂತ ಕಲಾವಿದರಿಂದ ಕಾರ್ಯಕ್ರಮ ಮತ್ತು ರಾಜ್ಯದ ವಿವಿಧ ಜಿಲ್ಲೆಯವರಿಂದ ಕಾರ್ಯಕ್ರಮ ಗಳು ನಡೆಯಲಿವೆ .ಉತ್ತರ ಕನ್ನಡದಲ್ಲಿನ ರಾಜ್ಯ ಮತ್ತು ಕೇಂದ್ರ ಮಟ್ಟದಲ್ಲಿ ಪ್ರಶಸ್ತಿ ಪಡೆದವರಿಗೆ ಸನ್ಮಾನ ಹಾಗೂ ಬುಡಕಟ್ಟು ಜನಾಂಗ, ಹಿಂದುಳಿದ ವರ್ಗ, ಪರಿಷಿಷ್ಟ ಜಾತಿ ಮತ್ತು ಪರಿಷಿಷ್ಟ ಪಂಗಡದವರಿಗೆ ರಾಜ್ಯ ಮಟ್ಟದಲ್ಲಿ ಮತ್ತು ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನಿಸಲಾಗುವುದು ಎಂದರು. ಹಾಗೂ ಸಂವಿಧಾನದ ಪ್ರಚಾರ ಕಾರ್ಯಕ್ರಮ ಸಹ ನಡೆಯಲಿದೆ. ಇದೇ ಐದು ದಿನಗಳಲ್ಲಿ ಬೆಳಿಗ್ಗೆ ವಾಲಿಬಾಲ್ ಟೂರ್ನಾಮೆಂಟ್, ಮ್ಯಾರಥಾನ್, ಸೈಕಲಿಂಗ್ ಹೀಗೆ ವಿವಿಧ ಸ್ಪರ್ದೆಯನ್ನು ಎರಿ್ಡಸಲಾಗುವುದು. ಭಾಗವಹಿಸುವವರು ಮೊ. ಸಂಖ್ಯೆ : 9448628953ಗೆ ಸಂಪರ್ಕಿಸಬೇಕು . ಸಮಸ್ತ ನಾಗರಿಕರು ಸೇರಿ ಕಾರ್ಯಕ್ರಮಕ್ಕೆ ಸಹಕರಿಸಬೇಕಾಗಿ ದೀಪಕ್ ವಿನಂತಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಚಿನ್ ಬೋರಕರ, ಅಬ್ಬಾಸ, ರಾಜೇಂದ್ರ ಮಾದರ, ಪ್ರಶಾಂತ ಗಡಕರ,ಗಾರು ಮಾಂಗ್ರೆ, ಅಶೋಕ ತೋಲಾರ,ರೋಹನ ಕುಡಾಳಕರ ಉಪಸ್ಥಿತರಿದ್ದರು.