ಸಾಲ ಮರುಪಾವತಿ ಯಾದರೆ ಸಹಕಾರ ಸಂಘ ಬೆಳೆಯುತ್ತವೆ: ಕೋಳಿವಾಡ
ರಾಣಿಬೆನ್ನೂರ 21: ಸಾಲ ಮರುಪಾವತಿ ಯಾದರೆ ಸಹಕಾರ ಸಂಘ ಬೆಳೆಯುತ್ತವೆ. ಕೃಷಿಯನ್ನು ಸಹಕಾರ ರೂಪದಲ್ಲಿ ಮಾಡಬೇಕು. ಕೃಷಿಯನ್ನು ಉದ್ದಿಮೆಯ ರೀತಿಯಲ್ಲಿ ಮಾಡಲು ಪ್ರಾಯೋಗಿಕವಾಗು ಗುಡಗೂರ ಗ್ರಾಮದಲ್ಲಿ ಆರಂಭಿಸಲಾಗುವುದು ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.
ಸೋಮವಾರ ತಾಲೂಕಿನ ಇಟಗಿ ಗ್ರಾಮದ ವಿವಿದೋದ್ದೇಶ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಸದಸ್ಯರಿಗೆ ರೈತರಿಂದ ಹಮ್ಮಿಕಳ್ಳಲಾಗಿದ್ದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಹಕಾರ ಎಂದರೆ ಎಲ್ಲರೂ ಕೈಜೋಡಿಸಬೇಕು. ಇಂದು ಯುವಕರು ನಗರದ ಪ್ರದೇಶದ ಕಡೆಗೆ ಮುಖಮಾಡಿದ್ದಾರೆ. ಅವರನ್ನು ಮರಳಿ ಕೃಷಿಗೆ ಮರಳುವಂತಾಗಲು ಪ್ರೋತ್ಸಾಹಿಸಿದಾಗ ಮಾತ್ರ ಕೃಷಿಗೆ ಹೆಚ್ಚಿನ ಪ್ರಾತ್ಯನಿತ್ಯ ಬರಲಿದೆ ಎಂದರು. ತಾಲೂಕಾ ಗ್ಯಾಂಟಿ ಯೋಜನೆಗಳ ಅನಷ್ಠಾನಾ ಸಮಿತಿ ಅಧ್ಯಕ್ಷ ಮಂಜನಗೌಡ ಪಾಟೀಲ ಮಾತನಾಡಿ, ಹೆಚ್ಚಿನ ಪ್ರಮಾಣದಲ್ಲಿ ವ್ಯವಹಾರ ಮಾಡುವುದರಿಂದ ಸಹಕಾರ ಸಂಘ ಬೆಳೆಯಲು ಕಾರಣವಾಗುತ್ತದೆ. ಈ ದಿಶೆಯಲ್ಲಿ ರೈತರಿಗೆ, ಸದಸ್ಯರಿಗೆ ಉತ್ತಮ ರೀತಿಯ ಸೇವೆ ನೀಡುವ ಮೂಲಕ ಅಭಿವೃದ್ಧಿ ಸಾಧಿಸಬೇಕು ಎಂದರು. ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷರು ಮತ್ತು ಸದಸ್ಯರನ್ನು ಇಟಗಿ ಹಾಗೂ ಸುತ್ತಮುತ್ತಲ ಗ್ರಾಮದ ರೈತರು ಸ್ನ್ಮಾಸಿ ಅಭಿನಂದಿಸಿದರು,
ಸಹಕಾರಿ ಸಂಘದ ಅಧ್ಯಕ್ಷ ಮಾರುತಿ ಗುಡಿಯವರ, ಸದಸ್ಯರಾದ ಲೋಕಪ್ಪ ದೇಸಗತ್ತಿ, ಕಾಂತೇಶ ದೇಶಾಯಿ, ಶೇಖರಯ್ಯ ಮಠದ, ತಿಮ್ಮರೆಡ್ಡಿ ಗೋವಿಂದರಡ್ಡರ, ಚನ್ನಬಸಪ್ಪ ಹುರಕಡ್ಲಿ, ಕೃಷ್ಣರಡ್ಡಿ ಹನುಮರಡ್ಡೇರ, ಮಂಜಪ್ಪ ಬಸೇನಾಯ್ಕರ, ಭರಮಪ್ಪ ಕುರವತ್ತೇರ, ಸುಧಾ ಗುತ್ತಲ, ಲಲಿತವ್ವ ರಾಮಲಿಂಗಣ್ಣನವರ, ರತ್ನಾ ಬಡಪ್ಪನವರ, ನಿಂಗನಗೌಡ ರಾಮಲಿಂಗಣ್ಣನವರ, ಬಸವರಾಜ ಯಲ್ಲಕ್ಕನವರ, ರೈತ ಮುಖಂಡ ರವಿಂದ್ರಗೌಡ ಪಾಟೀಲ, ಗ್ಪಣಗಾಧರಬಣಕಾರ, ಸಣದ್ರಣ್ಣ ಬೇಡರ, ಯಲ್ಲಪ್ಪ ರಡ್ಡೇರ, ನೇತ್ರಾ ಉಕ್ಕುಂದ, ತಿರುಪತಿ ಅಜ್ಜನವರಮ ಇದ್ದರು.
ಫೋಟೊ:21ಆರ್‌ಎನ್‌ಆರ್10ರಾಣಿಬೆನ್ನೂರ: ತಾಲೂಕಿನ ಇಟಗಿ ಗ್ರಾಮದ ವಿವಿದೋದ್ದೇಶ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಸದಸ್ಯರಿಗೆ ರೈತರಿಂದ ಹಮ್ಮಿಕಳ್ಳಲಾಗಿದ್ದ ಅಭಿನಂದನಾ ಸಮಾರಂಭವನ್ನು ಶಾಸಕ ಪ್ರಕಾಶ ಕೋಳಿವಾಡ ಉದ್ಘಾಟಿಸಿಸಿದರು.