ತಾಳಿಕೋಟಿ 11: ಪಟ್ಟಣದ ಪ್ರತಿಷ್ಠಿತ ಸಹಕಾರಿ ಕೋ- ಆಪರೇಟಿವ್ ಬ್ಯಾಂಕ್ ಇದರ ಆಡಳಿತ ಮಂಡಳಿ ನಿರ್ದೇಶಕರ 13 ಸ್ಥಾನಗಳಿಗೆ ಜನವರಿ 19ರಂದು ಜರಗುವ ಚುನಾವಣೆಗೆ ಓಲ್ಡ್ ಈಸ್ ಗೋಲ್ಡ್ ( ಹಳೆಯ)ಪೆನಲ್ ನ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಶನಿವಾರ(ಜ.11)ರಂದು ಪಟ್ಟಣದ ಶ್ರೀ ಖಾಸ್ಗತೇಶ್ವರ ಮಠಕ್ಕೆ ತಮ್ಮ ಅಪಾರ ಬೆಂಬಲಿಗರೊಂದಿಗೆ ಭೇಟಿ ನೀಡಿ ಲಿಂಗೈಕ್ಯ ಉಭಯ ಶ್ರೀಗಳ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದ 13 ಜನ ಅಭ್ಯರ್ಥಿಗಳು ಯಾವ ಕಾರಣಕ್ಕೂ ಚುನಾವಣೆಯಲ್ಲಿ ವ್ಯಕ್ತಿಗತವಾಗಿ ಮತಯಾಚನೆ ಮಾಡದೆ ಪೆನೆಲ್ ದಿಂದ ಮತಯಾಚನೆ ಮಾಡುತ್ತೇವೆ ಎಂದು ಪ್ರಮಾಣ ಮಾಡಿದರು. ನಂತರ ಅಲ್ಲಿಂದ ತಮ್ಮ ನೂರಾರು ಬೆಂಬಲಿಗರೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೃಹತ್ ಮೆರವಣಿಗೆಯನ್ನು ನಡೆಸಿ ಪಟಾಕಿ ಸಿಡಿಸಿ ತಮ್ಮ ಪೆನಲ್ ಗೆ ಗೆಲ್ಲಿಸಲು ಮತಯಾಚನೆ ಮಾಡುತ್ತಾ ಬ್ಯಾಂಕಿನ ಕಛೇರಿಗೆ ತಲುಪಿ ಅಲ್ಲಿ ಚುನಾವಣಾ ಧಿಕಾರಿ ಚೇತನ ಭಾವಿಕಟ್ಟಿ ಇವರಿಗೆ ತಮ್ಮ ನಾಮಪತ್ರ ಸಲ್ಲಿಸಿದರು. ನಂತರ ಮಾತನಾಡಿದ ಹಳೆಯ ಪೆನಲ್ ನ ಅಭ್ಯರ್ಥಿ ಕಾಶಿನಾಥ ಸಜ್ಜನ ಅವರು ನಾವು ಕಳೆದ ಕೆಲವು ಅವಧಿಗಳಿಂದ ಬ್ಯಾಂಕಿನ ಏಳಿಗೆಗಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇವೆ, ನಮ್ಮ ಹಿರಿಯರಾದ ದಿವಂಗತ ಸುಬ್ಬಣ್ಣ ಶೆಟ್ರು ಹಾಗೂ ವಿಠಲಸಿಂಗ್ ದಾದಾ ಅವರ ಬಗ್ಗೆಮಾರ್ಗದರ್ಶನ ಹಾಗೂ ಶೇರುದಾರರ ಸಹಕಾರದೊಂದಿಗೆ ನಾವೆಲ್ಲರೂ ಕರ್ತವ್ಯ ನಿಷ್ಟೆಯಿಂದ ಕೆಲಸ ಮಾಡಿದ್ದೇವೆ. ಈ ಬ್ಯಾಂಕು ಇಂದು ನಾಲ್ಕು ಶಾಖೆಗಳನ್ನು ಹೊಂದಿ, ಕೋಟಿಗಟ್ಟಲೆ ವ್ಯವಹಾರವನ್ನು ಮಾಡುತ್ತಿದೆ. ಈ ಬ್ಯಾಂಕನ್ನು ಇನ್ನಷ್ಟು ಅಭಿವೃದ್ಧಿ ಕಡೆಗೆ ತೆಗೆದುಕೊಂಡು ಹೋಗಲು ಶೇರುದಾರ ಬಾಂಧವರು ನಮಗೆ ಈ ಚುನಾವಣೆಯಲ್ಲಿ ಮತ್ತೇ ಆಶೀರ್ವಾದ ಮಾಡಬೇಕು ಎಂದರು.
ಈ ಸಮಯದಲ್ಲಿ ಪೆನಲ್ ನ ಅಭ್ಯರ್ಥಿಗಳಾದ ಡಿ.ಎಸ್.ಹೆಬಸೂರ, ಕೆ.ಸಿ.ಸಜ್ಜನ, ಐ.ಬಿ. ಬಿಳೇಭಾವಿ,ಎಂ. ಎಸ್.ಸರಶೆಟ್ಟಿ, ಸಿ.ಎಸ್.ಯಾಳಗಿ ಎನ್.ಆಯ್.ಚಿನಗುಡಿ, ಡಿ.ಕೆ. ಪಾಟೀಲ, ಎ.ವಿ.ಹಜೇರಿ, ಎಸ್.ಸಿ. ಪಾಟೀಲ, ಜಿ.ಬಿ.ಕೊಡಗಾನೂರ, ಎಸ್.ವಿ.ಬಡದಾಳಿ,ಆರಿ್ಬ. ಕಟ್ಟಿಮನಿ, ಎಸ್.ವಾಯ್.ಬರದೇನಾಳ ಶ್ರೀಖಾಸ್ಗತೇಶ್ವರ ಮಠ ಆಡಳಿತಾಧಿಕಾರಿ ವೇ.ಮೂ.ಮುರಗೇಶ ವಿರಕ್ತಮಠ,ವಿ.ವಿ.ಸಂಘ ಅಧ್ಯಕ್ಷ ವಿ.ಸಿ.ಹಿರೇಮಠ,ಕಾರ್ಯದರ್ಶಿ ಕಾಶಿನಾಥ ಮುರಾಳ,ಮಾಸೂಮ ಕೆಂಭಾವಿ, ಚಿನ್ನಪ್ಪ ಮಾಳಿ, ಪ್ರಕಾಶ ಹಜೇರಿ,ವಾಸುದೇವ ಹೆಬಸೂರ,ಸಂಗಯ್ಯ ಕೊಡಗಾನೂರ, ಗವಿಸಂಗಯ್ಯ ಪಂಚಗಲ್ಲ,ಸಂಭಾಜಿ ವಾಡ್ಕರ,ಮಾನಸಿಂಗ್ ಕೊಕಟನೂರ, ಮಹಾಂತೇಶ ಮುರಾಳ, ಪ್ರಭು ಬಿಳೇಭಾವಿ, ಈಶ್ವರ ಹೂಗಾರ,ಜಗದೀಶ ಬೆಳೆಭಾವಿ, ರಮೇಶ ಸಾಲಂಕಿ, ರಾಮನಗೌಡ ಮಿಣಜಗಿ, ಗೀತಾ ಬಡದಾಳಿ, ಭಾರತಿ ಸುಣದಲ್ಲಿ, ಭಾಗ್ಯಶ್ರೀ ಬಡದಾಳಿ, ಶಿಲ್ಪಾ ಹಿರೇಮಠ ಕೆಸರಸಿಂಗ ದೇವಿ, ಕಿಶನ್ ಸಿಂಗ ದೇವಿ, ರಮೇಶ ಗೌಡಗೇರಿ, ರಘುರಾಮಸಿಂಗ್ ಹಜೇರಿ, ಮೆಹಬೂಬ್ ಕೆಂಭಾವಿ, ಶ್ರೀಶೈಲ್ ಸಜ್ಜನ, ಚನ್ನಮಲ್ಲು ಕತ್ತಿ, ಸಹಾಯಕ ಚುನಾವಣಾಧಿಕಾರಿ ಆರ್.ಬಿ.ಧಮ್ಮೂರಮಠ, ವ್ಯವಸ್ಥಾಪಕಿ ಮಣೂರ ಹಾಗೂ ಬ್ಯಾಂಕಿನ ಸಿಬ್ಬಂದಿಗಳು ಇದ್ದರು.