ಆಕರ್ಷಕ ಪಥ ಸಂಚಲನ ಕಾರ್ಯಕ್ರಮದ ಸಮಾರೋಪ ಸಮಾರಂಭ

ಲೋಕದರ್ಶನ ವರದಿ

ಇಂಡಿ 22: ಕಳೆದ 93 ವರ್ಷಗಳಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಿಂದೂ ಧರ್ಮದ ಅಭ್ಯುದಯಕ್ಕಾಗಿ ಅನೇಕ ಕಾರ್ಯ ಚಟುವಟಿಕೆಗಳನ್ನು ದೇಶದಲ್ಲಿ ಹಮ್ಮಿಕೊಳ್ಳುತ್ತಾ ಬಂದಿದೆ ಎಂದು ಕನರ್ಾಟಕ ಉತ್ತರ ಪ್ರಾಂತದ ಬೌದ್ಧಿಕ ಪ್ರಮುಖ ಕೃಷ್ಣ ಜೋಶಿ ಹೇಳಿದರು.

                ಪಟ್ಟಣದ ಸಿಂದಗಿ ರಸ್ತೆಯ ಜಿಆರ್ಜಿ ಕಲಾ ಹಾಗೂ ವೈಎಪಿ ಕಾಮಸರ್್ ಕಾಲೇಜು ಆವರಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕರಿಂದ ನಡೆದ ಆಕರ್ಷಕ ಪಥ ಸಂಚಲನ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

                ಜಗತ್ತಿನಲ್ಲಿಯೇ ಅತೀ ದೊಡ್ಡ ಸಂಘಟನೆಯಾಗಿರುವ ಸ್ವಯಂ ಸೇವಕ ಸಂಘ ರಾಷ್ಟ್ರಭಕ್ತಿ, ಸಂಸ್ಕಾರ, ಯೋಗ್ಯ ವ್ಯಕ್ತಿತ್ವ ಶಾರೀರಿಕ ದೃಢತೆ, ಗೋ ಸಂರಕ್ಷಣೆ, ಸಂವರ್ಧನೆ, ಧರ್ಮ ಜಾಗರಣೆ, ಗ್ರಾಮ ವಿಕಾಸದಂತಹ ಅಭಿವೃದ್ಧಿ ಚಟುವಟಿಕೆಗಳನ್ನು ದೇಶದ 60 ಸಾವಿರ ಗ್ರಾಮಗಳಲ್ಲಿ ಒಂದು ಲಕ್ಷ 70 ಸಾವಿರ ಸೇವಾ ಚಟುವಟಿಕೆಗಳನ್ನ ಮಾಡುತ್ತಾ ಇದೆ. ಸಂಘ ಸಂಸ್ಕೃತಿ, ಯೋಗ್ಯ ವ್ಯಕ್ತಿತ್ವ ನಿಮರ್ಾಣ, ಸಮಾಜ ಹಿತ ಕಾಯುವ ಕಾರ್ಯ ಜೊತೆಯಲ್ಲಿ 5 ಆಯಾಮಗಳ ಮೂಲಕ ಧರ್ಮ ಜಾಗರಣಾ ಕಾರ್ಯ ಮಾಡುತ್ತಿದೆ ಎಂದರು.ದೇಶದಲ್ಲಿ ಭಯೋತ್ಪಾದಕರಿಗೆ ನೆಲೆ ನೀಡುವಂತಹ ಕಾರ್ಯಗಳನ್ನು ಕೆಲ ವಿದ್ವಾಂಸಕಾರಿ ವ್ಯಕ್ತಿಗಳು ಆಶ್ರಯ ನೀಡುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ದೇಶದ  ಯುವಕರು ಜಾಗೃತರಾಗಬೇಕುಪ್ರತೀ ವರ್ಷ ಲವ್ ಜಿಹಾದ್ ನಂತಹ ಪ್ರಕರಣಗಳು ಹೆಚ್ಚಾಗುತ್ತಿದ್ದು ಯುವತಿಯರನ್ನು ಜಾಲಕ್ಕೆ ಬೀಳಿಸಿ ವೈಶ್ಯಾವಾಟಿಕೆಗೆ ತಳ್ಳುವಂತಹ ಕಾರ್ಯ ನಡೆಯುತ್ತಿದೆ. ಅಲ್ಲದೆ ಸಾಮೂಹಿಕ ಅತ್ಯಾಚಾರದಂತಹ ಪ್ರಕರಣಗಳು ನಡೆಯುತ್ತಿವೆ ಆದ್ದರಿಂದ ಯುವತಿಯರು ಎಚ್ಚರವಾಗಿರಬೇಕು. ದುಶ್ಕೃತ್ಯ, ದುರಾಚಾರ, ಅತ್ಯಾಚಾರ, ಮಾಡುವವರ ಬಗ್ಗೆ ಸಮಾಜ ಎಚ್ಚರದಿಂದಿರಬೇಕು.

                ಅಂತಹ ಕೃತ್ಯಗಳನ್ನು ತಡೆಯಲು ಮನೆಯಿಂದಲೆ ಒಳ್ಳೆಯ ಸಂಸ್ಕಾರ ಆಚಾರ ವಿಚಾರಗಳನ್ನು ಬೆಳೆಸಬೇಕು ಎಂದು ಕರೆ ನೀಡಿದರು.

                ದೇಶದ ಯುವಕರಲ್ಲಿ ರಾಷ್ಟ್ರಭಕ್ತ, ಮಹಾಪುರುಷರ ಜೀವನ ಚರಿತ್ರೆ, ಹಾಗೂ ಸಂಸ್ಕಾರಗಳನ್ನು ಶಿಬಿರದಲ್ಲಿ ಹೇಳಿಕೊಡಲಾಗಿದ್ದು 143 ಶಿಬಿರಾಥರ್ಿಗಳು ಶಿಬಿರದಲ್ಲಿ ಪಾಲ್ಗೊಂಡು ಉತ್ತಮ ಸಂಸ್ಕಾರ, ಆಚಾರ, ವಿಚಾರ ಪಡೆದುಕೊಂಡು ತಮ್ಮ ಕ್ಷೇತ್ರಗಳಲ್ಲಿ ಹಿಂದೂ ಸಮಾಜವನ್ನು ಗಟ್ಟಿಗೊಳಿಸುವ ಕೆಲಸ, ವ್ಯಕ್ತಿತ್ವ ವಿಕಾಸ, ಶರೀರ ಗಟ್ಟಿಗೊಳಿಸುವ ಜೊತೆಗೆ ಬೌಧ್ಧಿಕ ವಿಕಾಸ ನೀಡುವ ಕಾರ್ಯ ಯಶಸ್ವಿಯಾಗಿದೆ. ಡಾ. ಹೆಗಡೆವಾರ್ 1925 ವಿಜಯ ದಶಮಿಯಂದು ಹುಟ್ಟು ಹಾಕಿದ ಸಂಸ್ಥೆ ಇಂದಿಗೂ ನಿರಂತರ ಹಿಂದೂ ಧರ್ಮದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಲಿದೆ. ಕೆಲ ರಾಷ್ಟ್ರ ನಾಯಕರು ಸಂಘಟನೆಯ ಬಗ್ಗೆ ಅಪಸ್ವರ ಹೇಳಿದ್ದರೂ ಸಹ ಸಂಘದ ನೇತಾರ ಹೆಗಡೆವಾರ್ ನನಗೆ ದೇಶಾಭಿಮಾನದ ಹುಚ್ಚಿದೆ. ಅದಕ್ಕಾಗಿ ನಾನು ಸಂಘಟನೆ ಮಾಡುತ್ತಿದ್ದೇನೆ ಎಂದು ಮಾಮರ್ಿಕವಾಗಿ ನುಡಿದಿದ್ದರು ಎಂದರು.

                ದೇಶದ ಗಡಿಯಲ್ಲಿ ಸದಾ ಒಳನುಸುಳುವಿಕೆ ಉಗ್ರರ ದುಶ್ಕೃತ್ಯೆಯ ಬಗ್ಗೆ ಸದಾ ಎಚ್ಚರದಿಂದರಬೇಕು. ಯುವಕರು ದೇಶದ ರಕ್ಷಣೆಗೆ ಸದಾ ಕಂಕಣ ಬಧ್ಧರಾಗಿ ದುಡಿಯಬೇಕು ಎಂದರು. ಆರಂಭದಲ್ಲಿ ಗಣವೇಶಧಾರಿಗಳಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಆಕರ್ಷಕ ಪಥ ಸಂಚಲನ ಜರುಗಿತು. ದೈಹಿಕ ಚಟುವಟಿಕೆಗಳು ಪ್ರದಶರ್ಿಸಲಾಯಿತು.

                ಆರಂಭದಲ್ಲಿ ಸ್ವಯಂ ಸೇವಕ ಪ್ರಕಾಶ ಕಟ್ಟೀಮನಿ ಸ್ವಾಗತಿಸಿದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಉಧ್ಯಮಿ ಬಾಹುಬಲಿ ಮುತ್ತಿನ್, ಗೋವಿಂದ ಹಿಬಾರೆ, ಡಾ. ಸತೀಶ ಜಿಗಜಿನ್ನಿ ಇದ್ದರು.

ವಿವೇಕಾನಂದ ಹಂಜಗಿ ವರದಿ ವಾಚನ ಮಾಡಿದರು.

                ಹಿರಿಯರಾದ ಡಿ.ಆರ್. ಶಹಾ, ಸಿದ್ದಲಿಂಗ ಹಂಜಗಿ, ಪ್ರಭಾಕರ ಬಗಲಿ, ದಯಾನಂದ ಸುರಪೂರ, ಕಾಸುಗೌಡ ಬಿರಾದಾರ, ಸಂಕೇತ ಬಗಲಿ, ಮಲ್ಲಯ್ಯ ಪತ್ರೀಮಠ, ಅನೀಲ ಜಮಾದಾರ, ವಿರಾಜ ಪಾಟೀಲ, ಡಾ. ಶಹಾ, ಜಗದೀಶ ಕ್ಷತ್ರಿ, ದಯಾನಂದ ಸುರಪೂರ, ಶ್ರೇಣಿಕ್ ಪಾಟೀಲ, ಪ್ರಶಾಂತ ಗವಳಿ, ಶೀಲವಂತ ಉಮರಾಣಿ, ಶ್ರೀಶೈಲಗೌಡ ಬಿರಾದಾರ, ಕಿರಣ ಕ್ಷತ್ರಿ, ಸೋಮು ನಿಂಬರಗಿಮಠ, ಕಿರಣ ಕ್ಷತ್ರಿ ಮತ್ತಿತರರು ಸಂದರ್ಭದಲ್ಲಿ ಉಪಸ್ಥಿತರಿದ್ದರು.