ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯಲ್ಲಿ ಸೀಳು ತುಟಿ, ಬಾಯಿಯ ಒಳ ಅಂಗಳದ ಶಸ್ತ್ರಚಿಕಿತ್ಸಾ ಶಿಬಿರದ ಸಮಾರೋಪ
Cleft lip and cleft palate surgery camp concludes at KLE Centenary Charitable Hospital
ಬೆಳಗಾವಿ 25: ಇಂದು ಜಗತ್ತಿನಲ್ಲಿ 4ಬಿಲಿಯನ್ ನಾಗರಿಕರಿಗೆ ಸಮಯೋಚಿತ ಶಸ್ತ್ರಚಿಕಿತ್ಸೆಗಳ ಲಭ್ಯವಿಲ್ಲದೇ ಪರದಾಡುವಂತಾಗಿದೆ. ಇದರ ಪ್ರಮಾಣ ಹೆಚ್‌ಐವಿ, ಕ್ಷಯರೋಗ, ಮಲೇರಿಯಾದಂತಹ ಮಾರಕ ರೋಗಗಳ ಮಾರಣಹೋಮಕ್ಕಿಂತ ಅಧಿಕವಾಗಿದೆ ಎಂದು ಕೆಎಲ್‌ಇ ವಿ ಕ ದಂತ ಮಹಾವಿದ್ಯಾಲಯದ ಓರಲ್ ಮ್ಯಾಕ್ಸಿಲ್ಲೋಪೆಸಿಯಲ್ ಶಸ್ತ್ರಚಿಕಿತ್ಸಜ್ಞ ಡಾ. ಶರದಿಂದೂ ಕೊಟ್ರಶೆಟ್ಟಿ ಹೇಳಿದರು. ಅವರು ನಿನ್ನೆ ಯಳ್ಳೂರ ರಸ್ತೆಯಲ್ಲಿನ ಕೆಎಲ್‌ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆ, ಕೆಎಲ್‌ಇ ವಿ ಕ ದಂತ ಮಹಾವಿದ್ಯಾಲಯ, ಇಂಗಾ ಹೆಲ್ಥ ಫೌಂಡೇಷನ್ ಇವರ ಸಂಯುಕ್ತಾಶ್ರಯದಲ್ಲಿ ಸತತ 7 ದಿನಗಳ ಕಾಲ ನಡೆದ ಉಚಿತ ಸೀಳುತುಟಿ ಹಾಗೂ ಬಾಯಿ ಒಳ ಅಂಗಳದ ಶಸ್ತ್ರಚಿಕಿತ್ಸಾ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಜಗತ್ತಿನಾದ್ಯಂತ ಇಂದು ಬಿಲಿಯನ್ ಗಟ್ಟಲೇ ಮಕ್ಕಳು ಸೀಳತುಟಿ, ಬಾಯಿಯ ಒಳಅಂಗಳದ ತೊಂದರೆಗೆ ಒಳಗಾಗಿದ್ದಾರೆ. ಇಂತಹ ರೋಗಿಗಳಿಗೆ ಇಲ್ಲಿ ಉಚಿತವಾಗಿ ಶಸ್ತ್ರಚಿಕಿತ್ಸೆಮಾಡಲಾಗಿದೆ. ಈ ದಿನಗಳಲ್ಲಿ ಕರ್ನಾಟಕ ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳ ವಿವಿಧ ಭಾಗಗಗಳಿಂದ ಬಂದ 97 ರೋಗಿಗಳಿಗೆ ಉಚಿತವಾಗಿ ತಪಾಸಣೆ ಮಾಡಲಾಯಿತು.
ಅವರಲ್ಲಿ 54 ಜನರಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆಯನ್ನು ಮಾಡಲಾಯಿತು. ಇದು ವಿಶ್ವ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ನಡೆದ ಕಾರ್ಯಕ್ರಮವಾಗಿದ್ದು, ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆ, ಕೆಎಲ್‌ಇ ವಿ ಕ ದಂತ ಮಹಾವಿದ್ಯಾಲಯ, ಇಂಗಾ ಹೆಲ್ಥ ಫೌಂಡೇಷನ್, ಒಪರೇಶನ್ ಸ್ಮೈಲ್ ಇವರ ಸಹಯೋಗದಲ್ಲಿ ಕೆ ಎಲ್ ಇ ಶತಮಾನೊತ್ಸವ ಚಾರಿಟೆಬಲ್ ಆಸ್ಪತ್ರೆಯಲ್ಲಿ ನಡೆಯಿತು ಎಂದು ಸಂತಸ ವ್ಯಕ್ತ ಪಡಿಸಿದರು.
ಕೆ ಎಲ್ ಇ ಶತಮಾನೊತ್ಸವ ಚಾರಿಟೆಬಲ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಸಂಜಯ ಕಂಬಾರ ಅವರು ಮಾತನಾಡುತ್ತ ವಿಶ್ವ ಸಂಸ್ಥೆಯ ಪಾಲುದಾರಿಕೆಯಲ್ಲಿ ನಡೆಯುತ್ತಿರುವ ಇಂತಹ ಅಭೂತಪೂರ್ವ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವದು ನಮಗೂ ಕೂಡ ಹೆಮ್ಮೆಯ ಸಂಗತಿಯೆನ್ನಿಸುತ್ತಿದೆ. ಸೀಳು ತುಟಿ ಮತ್ತು ಬಾಯಿ ಒಳ ಅಂಗಳದ ಬಗ್ಗೆ ಇನ್ನು ನಮ್ಮ ಸಮಾಜದಲ್ಲಿ ಅನೇಕ ರೀತಿಯ ಮೂಢನಂಬಿಕೆಗಳಿವೆ.
ಇನ್ನೂ ಕೆಲವು ಕಡೆ ಅಂತಹ ಮಕ್ಕಳನ್ನು ಕೀಳಾಗಿ ನೋಡುವ, ಅವರ ಕುಟುಂಬವನ್ನು ಹೀಗಳೆಯುವ ಅಂಧಪದ್ಧತಿ ಸಮಾಜದಲ್ಲುಂಟು. ಒಂದು ಸಣ್ಣ ಶಸ್ತ್ರಚಿಕಿತ್ಸೆಯಿಂದ ಸಮಾಜದ ದೃಷ್ಟಿಕೋನವನ್ನೇ ಬದಲಾಯಿಸಬಹುದಾಗಿದೆ. ಈ ಶಸ್ತ್ರಚಿಕಿತ್ಸೆಗಳಲ್ಲಿ ಶಸ್ತ್ರಚಿಕಿತ್ಸಕರು, ಅರವಳಿಕೆ ತಜ್ಞರು, ಮಕ್ಕಳ ತಜ್ಞರು, ದಂತ ವೈದ್ಯರು, ಸ್ಪೀಚ ಥೆರಪಿಸ್ಟಗಳು ಮತ್ತು ಮನೋಸಾಮಾಜಿಕ ಕಾರ್ಯಕರ್ತರ ಸಂಯುಕ್ತ ಕಾರ್ಯಕ್ರಮವಾಗಿದೆ. ಅದರಲ್ಲಿಯೂ ಭಾರತ ಸೇರಿದಂತೆ ಅಮೇರಿಕಾ, ಇಂಗ್ಲೆಂಡ, ಸ್ಪೇನ್, ಇಟಲಿ ಮುಂತಾದ ದೇಶ ವಿದೇಶಗಳಿಂದ ಸ್ವಯಂ ಸೇವಕರಾಗಿ ವೈದ್ಯರು, ಸಾಮಾಜಿಕ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಬಾಗವಹಿಸಿದ್ದರು” ಎಂದು ಕಾರ್ಯಕ್ರಮವನ್ನು ವಿಸ್ತಾರವಾಗಿ ತಿಳಿಸಿದರು.
ಇಂಗಾ ಹೆಲ್ಥ ಪೌಂಡೇಷನ್‌ನ ಮುಖ್ಯ ಕಾರ್ಯನಿರ್ವಹನಾಧಿಕಾರಿ ಅಭಿಷೇಕಸೇನ ಗುಪ್ತಾ ಅವರು ಮಾತನಾಡಿ 1982ರಲ್ಲಿ ಪ್ರಾರಂಭವಾದ ಆಪರೇಷನ್ ಸ್ಮೈಲ ಇದು 40 ವರ್ಷಗಳ ಇತಿಹಾಸವನ್ನು ಹೊಂದಿದ್ದು, ವಿಶ್ವದಾದ್ಯಂತ ಸಮಾಜದಲ್ಲಿ ಅತೀ ಹಿಂದುಳಿದ ವೈದ್ಯಕೀಯ ಸೇವೆಗಳಿಗೆ ನಿಲುಕದಂತಹ ಸಮುದಾಯಗಳಿಗೆ ಆರೋಗ್ಯ ಸೇವೆಗಳನ್ನು ಒದಗಿಸುವ ಗುರಿಯನ್ನು ಹೊಂದಿರುವ ಸಂಸ್ಥೆಯಾಗಿದೆ. 80 ದೇಶಗಳಲ್ಲಿ ಸ್ವಯಂ ಸೇವಕರನ್ನು ಹೊಂದಿರುವ ಈ ಸಂಸ್ಥೆಯು 2,40,000 ಮಕ್ಕಳು ಸೇರಿದಂತೆ ವಿವಿಧ ವಯೋವರ್ಗದವರ ನಗುವಿಗೆ ಕಾರಣವಾಗಿದೆ.
ಇದೇ ರೀತಿ ಇನ್ನೊಂದು ಸಂಸ್ಥೆಯಾದ ಇಂಗಾ ಹೆಲ್ಥ ಫೌಂಡೇಷನ್ (ಮೊದಲು ಮಾಯಾ ಎಂಬಹೆಸರಿನೊಂದಿಗೆ ಗುರುತಿಸಲ್ಪಟ್ಟಂತಹ ಸಂಸ್ಥೆ) ಇದು ಕೂಡ ಸುಮಾರು 17 ವರ್ಷಗಳ ಇತಿಹಾಸವನ್ನು ಹೊಂದಿದೆ. ಡಾ. ಕೃಷ್ಣ ಶಾಮ ರಾವ ಅವರಿಂದ ಸ್ತಾಪಿಸಲ್ಪಟ್ಟ ಈ ಸಂಸ್ಥೆಯು ಸೀಳು ತುಟಿ ಮತ್ತು ಬಾಯಿಯ ಒಳ ಅಂಗಳದ ಶಸ್ತ್ರಚಿಕಿತ್ಸೆಗಳಲ್ಲಿ ಮೂಂಚೂಣಿಯಲ್ಲಿದೆ. ಬೆಂಗಳೂರು ಮತ್ತು ಶ್ರೀನಗರ ಗಳಲ್ಲಿ ಮುಖ್ಯ ಕಚೇರಿಗಳನ್ನು ಹೊಂದಿರುವ ಈ ಸಂಸ್ಥೆಯು 16,500 ಶಸ್ತ್ರಚಿಕಿತೆಗಳನ್ನು ವಿವಿಧ ಕೇಂದ್ರಗಳಲ್ಲಿ ಯಶಸ್ವಿಯಾಗಿ ಮುಗಿಸಿದೆ ಎಂದ ಅಭಿಮಾನದಿಂದ ನುಡಿದರು.
ಈ ಎಲ್ಲ ವೈದ್ಯಕೀಯ ಹಾಗೂ ವೈದ್ಯಕೀಯೇತರರ ತಂಡವನ್ನು ಕೆ ಎಲ್ ಇ ಸಂಸ್ಥೆಯ ಗೌರವ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ಯು ಎಸ್ ಎಮ್ ಕೆ ಎಲ್ ಇ ನಿರ್ದೇಶಕ ಡಾ. ಹೆಚ್ ಬಿ ರಾಜಶೇಖರ ಅವರು ಅಭಿನಂದಿಸಿದ್ದಾರೆ. ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನವಿನ ಎನ್ ಅವರು ಹಾಗೂ ವೈದ್ಯಕೀಯ ಅಧೀಕ್ಷಕ ಡಾ. ಸಂಜಯ ಕಂಬಾರ ಅವರು ಅಭಿನಂದಿಸಿದ್ದಾರೆ.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 