ಲೋಕದರ್ಶನವರದಿ
ಕಾಗವಾಡ೦೭: ಉಗಾರ ಖುರ್ದ ಪಟ್ಟಣಕ್ಕೆ ಸಂಪಕರ್ಿಸುವ ಲೋಕೋಪಯೋಗಿ ಇಲಾಖೆಯ ರಸ್ತೆ ಬದಿ ಕಳೆದ ಅನೇಕ ದಿನಗಳಿಂದ ಅನಧಿಕೃತವಾಗಿ ಡಬ್ಬಾ ಅಂಗಡಿಗಳು ಹಾಕಿಕೊಂಡು ರಸ್ತೆ ಅಗಲಿಕರಣಕ್ಕೆ ಆಗುತ್ತಿರುವ ತೊಂದರೆ ಕಂಡು ಅಥಣಿ ನ್ಯಾಯಾಲಯದ ನ್ಯಾಯಾಧೀಶರು ಅತಿಕ್ರಮಣ ತೆರವುಗೊಳಿಸಲು ಆದೇಶಿಸಿದ್ದರಿಂದ 72 ಡಬ್ಬಾ ಅಂಗಡಿಗಳು ಇಲಾಖೆ ಅಧಿಕಾರಿಗಳು ತೆರವುಗೊಳಿಸಿದರು.
ಶುಕ್ರವಾರರಂದು ಕಾಗವಾಡ ತಹಸೀಲ್ದಾರ ಪ್ರಮೀಳಾ ದೇಶಪಾಂಡೆ, ಉಗಾರ ಪುರಸಭೆ ಮುಖ್ಯಾಧಿಕಾರಿ ಕಮಲವ್ವಾ ಭಾಗೋಜಿ, ಅಥಣಿ ಸಿಪಿಐ ಶಂಕರಗೌಡಾ ಬಸನಗೌಡರ, ಲೋಕೊಪಯೋಗಿ ಇಲಾಖೆಯ ಅಧಿಕಾರಿಗಳು, ಕಾಗವಾಡ ಪಿಎಸ್ಐ ಹನುಮಂತ ಶಿರಹಟ್ಟಿ, ಇವರು ನೇತೃತ್ವ ವಹಿಸಿ 72 ಅಂಗಡಿಗಳು ತೆರವುಗೊಳಿಸಿದರು.
ಪ್ರಾರಂಭದಲ್ಲಿ ಅಂಗಡಿ ಮಾಲೀಕರು ಅಧಿಕಾರಿಗಳೊಂದಿಗೆ ವಾದವಿವಾದಕ್ಕೆ ಇಳಿದರು.ಈ ಮೊದಲು ಯಾವುದೇ ನೋಟಿಸ್ ನೀಡದೆ ಆಕಸ್ಮಿಕವಾಗಿ ತೆರವುಗೊಳಿಸುತ್ತಿದ್ದಿರಿ. ನಮ್ಮ ಮೇಲೆ ಒಂದು ರೀತಿ ಅನ್ಯಾಯವಾಗುತ್ತಿದೆ. ಪಯರ್ಾಯ್ ವ್ಯವಸ್ಥೆವಾಗುವರೆಗೆ ನಮ್ಮ ಅಂಗಡಿಗಳು ತೆರವುಗೊಳಿಸಬೇಡಿ ಎಂದು ಡಬ್ಬಾ ಅಂಗಡಿ ಸಂಘಟನೆಯ ಅಧ್ಯಕ್ಷ ಶಿವಶಂಕರ ಹಿರೇಮಠ, ಪ್ರಕಾಶ ಶಿಂದೆ ವಾದ ಮಾಡಿದರು.
ತಹಸೀಲ್ದಾರ ಪ್ರಮೀಳಾ ದೇಶಪಾಂಡೆ ಇವರು ಇದು ನ್ಯಾಯಲಯ ಆದೇಶವಿದೆ. ಇದರ ಪಾಲನೆ ಎಲ್ಲರು ಮಾಡಬೇಕು. ಪಯರ್ಾಯ್ ಸ್ಥಳದ ಬಗ್ಗೆ ಪುರಸಭೆ ಮೇಲಾಧಿಕಾರಿಗಳು, ರಾಜಕೀಯ ಪ್ರಮುಖರು ನೋಡಿಕೊಳ್ಳುತ್ತಾರೆ. ಈಗ ಕೈಗೊಂಡ ತೆರವು ಕಾಯರ್ಾಚರಣಕ್ಕೆ ಅಡ್ಡಿಯಾಗದೆ ಸಹಕರಿಸಿರಿ.ಇದೇ ಸ್ಥಳದಲ್ಲಿ ರಸ್ತೆ ಅಗಲಿಕರಣವಾಗಲಿದೆ ಎಂದು ಹೇಳಿದರು.
ಕೆಲ ಅಂಗಡಿಧಾರಕರು ತಮ್ಮ ಅಂಗಡಿಯಲ್ಲಿಅನೇಕ ಸಾಹಿತ್ತಿಗಳು ಬಿಟ್ಟಿದ್ದರು.ಅದನ್ನು ತೆಗೆದುಕೊಳ್ಳಲು ಅವರ ಕುಟುಂಬದವರು ಹರಸಾಹಸ ಮಾಡುತ್ತಿರುವದನ್ನು ಕಂಡು ಬಂತು.
ಡಬ್ಬಾ ಅಂಗಡಿಧಾರಕರಾದ ಶಿವಶಂಕರ ಹಿರೇಮಠ, ಚಿದಾನಂದ ಹಡಪದ್, ಶಿವಾನಂದ ಹಡಪದ್, ಅಪ್ಪಾಸಾಹೇಬ ಹಳಜೋಳ, ಪ್ರಕಾಶ ಶಿಂದೆ, ದತ್ತಾ ಹೋನಕಾಂಬಳೆ, ರಾಮಪ್ಪಾಒಟ್ಟನ್ನವರ, ಗೌಸಲಾಜಂ ಮುಲ್ಲಾ, ಮಲಿಕ್ ನದಾಫ, ಸುಶೀಲಾ ಶಿಂದೆ, ಅಶೋಕ ಜಾಧವ, ದಸ್ತಗೀರ ಭಾಗವಾನ್, ನಾಮದೇವ ಹೋನಕಾಂಬಳೆ, ನೂರಜಾನ ಸೈಯದ್ಇವರಿಗೆಗ್ರಾಮ ಪಂಚಾಯತಿ ಆಡಳಿತ ಇದ್ದಾಗ, ಈ ಅಂಗಡಿಗೆಕರ ವಸೂಲಾತಿ ಮಾಡುವದೊಂದಿಗೆ ಕೆಲವರಿಗೆ ಹಕ್ಕುಪತ್ರ ಮತ್ತು ವಿದ್ಯುತ್ ಸಂಪರ್ಕ ನೀಡಿದ್ದಾರೆ. ಇದರ ಆಧಾರ ತೆಗೆದುಕೊಂಡು ನ್ಯಾಯಾಲಯ ಮೊರೆ ಹೋಗಿದ್ದಾಗ ತೆರವುಗೊಳಿಸಲು ಸ್ಥಗೀತ ನೀಡಿದ್ದರು.ಇಲಾಖೆ ಅಧಿಕಾರಿಗಳು ನ್ಯಾಯಾಲಯಕ್ಕೆ ಮನವರಿಕೆ ಮಾಡಿ, ಲೋಕೊಪಯೋಗಿಇಲಾಖೆಯ ಸ್ಥಳದಲ್ಲಿ ಅನಧಿಕೃತವಾಗಿ ಡಬ್ಬಾ ಅಂಗಡಿಗಳು ಇಟ್ಟುಕೊಂಡಿದ್ದಾರೆ.ಇದನ್ನು ಮನವರಿಕೆ ಮಾಡಿದ್ದರಿಂದ ನ್ಯಾಯಾಲಯ ತೆರವುಗೊಳಿಸಲು ಆದೇಶ ನೀಡಿದೆ. ಇದ್ದರಿಂದ ಎಲ್ಲ ಇಲಾಖೆ ಅಧಿಕಾರಿಗಳು ಒಂದುಗುಡಿ ತೆರವುಗೊಳಿಸಿದ್ದಾರೆ.