ಬಾಗಲಕೋಟೆ೦೭: ಸ್ವಚ್ಛ ಪಕ್ವಾಡ ಅಭಿಯಾನದಡಿ ಜಿಲ್ಲಾಡಳಿತ ಭವನದಲ್ಲಿ ಬಿದ್ದಿದ್ದ ಕಸ, ಕಡ್ಡಿ, ಕಾಗದಗಳನ್ನು ತೆಗೆದು ಹಾಕಿ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಆವರಣವನ್ನು ಶನಿವಾರ ಸ್ವಚ್ಛಗೊಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ರಾಜ್ಯ ಮಹಿಳಾ ಅಭಿವೃದ್ದಿ ನಿಗಮ, ಮಹಿಳಾ ಶಕ್ತಿ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಂಡ ಸ್ಚಚ್ಛತಾ ಕಾರ್ಯಕ್ರಮವನ್ನು ಜಿ.ಪಂ ಅಧ್ಯಕ್ಷೆ ಬಾಯಕ್ಕ ಮೇಟಿ, ಜಿ.ಪಂ ಸಿಇಓ ಗಂಗೂಬಾಯಿ ಮಾನಕರ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅವರ ನೇತೃತ್ವದಲ್ಲಿ ಎಲ್ಲ ಹಿರಿಯ, ಕಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇಡೀ ಆವರಣ ಹಾಗೂ ಜಿಲ್ಲಾಡಳಿತ ಭವನವನ್ನು ಸುತ್ತಾಡಿ ಎಲ್ಲೆಡೆ ಸ್ವಚ್ಛತಾ ಕಾರ್ಯ ಕೈಗೊಂಡರು.
ಸ್ವಚ್ಛ ಭಾರತ ಅಭಿಯಾನ ಜಾಗೃತಿ ಕಾರ್ಯಕ್ರಮದಡಿ ಮಾರ್ಚ 1 ರಿಂದ 15 ವರೆಗೆ ಸ್ವಚ್ಛ ಪಕ್ವಾಡ ಅಭಿಯಾನ ನಡೆಯಲಿದೆ ಎಂದು ಜಿ.ಪಂ ಸಿಇಓ ಗಂಗೂಬಾಯಿ ಮಾನಕರ ತಿಳಿಸಿದರು. ಸ್ವಚ್ಛತಾ ಕಾರ್ಯದಲ್ಲಿ ಜಿ.ಪಂ ಸದಸ್ಯರು, ಪ್ರೊಬೇಷನರಿ ಐ.ಎ.ಎಸ್ ಅಧಿಕಾರಿ ಗರಿಮಾ ಪನ್ವಾರ, ಜಿ.ಪಂ ಉಪಕಾರ್ಯದಶರ್ಿ ಎ.ಜಿ.ತೋಟದ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿದೇಶಕ ಮಲ್ಲಿಕಾಜರ್ುನ ರೆಡ್ಡಿ, ತೋಟಗಾರಿಕೆ ಉಪನಿದರ್ೇಶಕ ಪ್ರಭುರಾಜ ಹಿರೇಮಠ, ಅಂಗವಿಕಲರ ಕಲ್ಯಾಣಾಧಿಕಾರಿ ಸವಿತಾ ಕಾಳೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿದರ್ೇಶಕ ಬಸವರಾಜ ಶಿರೂರ ಸೇರಿದಂತೆ ಇತರೆ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.