ಇತಿಹಾಸದ ದೇವಾಲಯಗಳ ಸ್ವಚ್ಛತೆ

ಲೋಕದರ್ಶನವರದಿ

ರಾಣೇಬೆನ್ನೂರು:  ತಾಲೂಕಿನ ಹಳೇ ಹೊನ್ನತ್ತಿ ಗ್ರಾಮದಲ್ಲಿರುವ 12ನೇ ಶತಮಾನದ ಇತಿಹಾಸ ಪರಂಪರೆಯ ಪುರಾತನ ಕಾಲದ ದೇವಾಲಯಗಳನ್ನು ರವಿವಾರ ಸ್ಥಳೀಯ ಸ್ವತಂತ್ರ ಜನಸೇವಾ ಟ್ರಸ್ಟ್ನ ತಂಡವು ಸ್ವಚ್ಛತೆಗೊಳಿಸಿ ಗ್ರಾಮೀಣ ಜನರ ಗಮನ ಸೆಳೆದರು. ಸ್ವಚ್ಚತಾ ಕಾರ್ಯದಲ್ಲಿ ಸಂಸ್ಥೆ ಅಧ್ಯಕ್ಷ ವಿಶ್ವನಾಥ ನೀಲಗುಂದ ಪದಾಧಿಕಾರಿಗಳಾದ ಭೀಮರಾಜ ಕರಿಭೀಮಪ್ಪನವರ, ಚಂದ್ರು ಗುಬ್ಬಿ, ಸತೀಷ್ ಪಾಣಿಭಾತೆ, ಚಂದ್ರ ಹಳ್ಳಳ್ಳಿ ಸೇರಿದಂತೆ ಇನ್ನಿತರೆ ಸದಸ್ಯರು ಪಾಲ್ಗೊಂಡಿದ್ದರು.