ನಿರ್ಮಲ, ಆರೋಗ್ಯಕರ ಪಟ್ಟಣದ ರೂವಾರಿಗಳೇ ಪೌರಕಾರ್ಮಿಕರು: ಪ್ರವೀಣ ಪಾಟೀಲ

ರನ್ನ ಬೆಳಗಲಿ 13: ಪಟ್ಟಣ ಪಂಚಾಯತ ಕಾರ್ಯಾಲಯದ ಪೌರಕಾರ್ಮಿಕರಿಗೆ ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಸ್ಥಳೀಯ ಕಾಂಗ್ರೆಸ್ ಮುಖಂಡರ ಮತ್ತು ಕಾಂಗ್ರೆಸ್ ಪಟ್ಟಣ ಪಂಚಾಯತ ಸದಸ್ಯರ ಆಶ್ರಯದಲ್ಲಿ ಉಡುಗೊರೆಯ ವಿತರಣೆ ಹಾಗೂ ಸತ್ಕಾರ ಸಮಾರಂಭ ಜರಗಿತು. 

 ಕಾರ್ಯಕ್ರಮದ ನೇತೃತ್ವ ವಹಿಸಿದ ಪ್ರವೀಣ ಪಾಟೀಲ ಪಟ್ಟಣ ಪಂಚಾಯತ್ ಸದಸ್ಯರು, ಪಿ.ಕೆ.ಪಿ.ಎಸ್ ಅಧ್ಯಕ್ಷರು ರನ್ನ ಬೆಳಗಲಿ ಅವರು ನಿರ್ಮಲ, ಆರೋಗ್ಯಕರ ಪಟ್ಟಣದ ರೂವಾರಿಗಳೇ ಪೌರಕಾರ್ಮಿಕರು, ಪೌರಕಾರ್ಮಿಕರ ಸೇವೆಗೆ ಎಷ್ಟು ಗೌರವಿಸಿದರೂ ಕಡಿಮೆ. ಪ್ರಸ್ತುತ ದಿನಗಳಲ್ಲಿ ಯಾವುದೇ ರೀತಿಯ ಮಾರಣಾಂತಿಕ ಖಾಯಿಲೆಗಳಿಗೆ ಹೆದರದ ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಪಟ್ಟಣದ ಆರೋಗ್ಯಕ್ಕಾಗಿ ಸದಾಕಾಲ ಶ್ರಮಿಸುವ ಮಹನಿಯರೇ ಪೌರಕಾರ್ಮಿಕರು. ಆದ್ದರಿಂದ ದಸರಾ ಹಬ್ಬದ ಮತ್ತು ದೀಪಾವಳಿ ಹಬ್ಬದ ನಿಮಿತ್ಯವಾಗಿ ನಮ್ಮ ಕಾಂಗ್ರೆಸ್ ಮುಖಂಡರ ಮತ್ತು ಕಾಂಗ್ರೆಸ್ ಪಟ್ಟಣ ಪಂಚಾಯತ್ ಚುನಾಯಿತ ಸದಸ್ಯರ ಆಶ್ರಯದಲ್ಲಿ ಎಲ್ಲ ಪೌರಕಾರ್ಮಿಕರಿಗೆ ಗೌರವಿಸಿ ಸತ್ಕರಿಸುವ ಭಾಗ್ಯ ನಮ್ಮದಾಗಿದೆ ಎಂದು ತಿಳಿಸಿದರು. 

ಪಟ್ಟಣ ಪಂಚಾಯತ್ ಕಾಂಗ್ರೆಸ್ ಸದಸ್ಯ ನೀಲಕಂಠ ಸೈದಾಪುರ, ಮುಬಾರಕ್ ಅತ್ತಾರ, ಮುತ್ತು ಸಣ್ಣಟ್ಟಿ ಮತ್ತು ಮುತ್ತು ನಾಯಕ, ಕಾಂಗ್ರೆಸ್ ಪಕ್ಷದ ಮುಖಂಡರಾದ ಸಂಗಪ್ಪ ಅಮಾತಿ, ಈರ​‍್ಪ ಕಿತ್ತೂರ, ಸದಾಶಿವ ಕುಲಗೋಡ, ಮಲ್ಲಪ್ಪ ಮಲಾವಡಿ, ಸಿದ್ದು ಮಾಳಿ, ರಾಮನಗೌಡ ಪಾಟೀಲ, ಯಮನಪ್ಪ ದೊಡಮನಿ, ಯಮನಪ್ಪ ಪೂಜೇರಿ, ಮಲ್ಲು ಹೊಸಪೇಟಿ, ಪ್ರಕಾಶ ಕೊಣ್ಣೂರ, ಮುದಕಪ್ಪ ದೋಬಸಿ, ಚನ್ನಪ್ಪ ಜಾಲಿಕಟ್ಟಿ, ಲಕ್ಕಪ್ಪ ಹಂಚಿನಾಳ, ಬಸು ಗೌರಣ್ಣವರ, ಮಾರುತಿ ಜಾಲಿಕಟ್ಟಿ, ಮಹಾದೇವ ಹಾದಿಮನಿ, ಹಣಮಂತ ಹೊಸೂರ, ಸವಿತಾ ಚವಲಿ, ಪರಮಾನಂದ ಪೂಜೇರಿ, ಮುತ್ತಪ್ಪ ಸಂಕ್ರಟ್ಟಿ, ಚನ್ನಪ್ಪ ಸಾಲಿಮಠ, ಚೇತನ್ ಕಂಕಣವಾಡಿ, ಸುಭಾಸ್ ಪುರಾಣಿಕ ಸೇರಿದಂತೆ ಇನ್ನಿತರರು ಹಾಜರಿದ್ದರು.