ನವದೆಹಲಿ, ಡಿ 11 : ಪೌರತ್ವ ತಿದ್ದುಪಡಿ ಮಸೂದೆ,ಈಶಾನ್ಯಭಾಗದ ಜನರ ಶುದ್ದೀಕರಣದ ಯತ್ನ , ಕ್ರಿಮಿನಲ್ ದಾಳಿ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ಮಾಡಿದ್ದಾರೆ.
ಇದು ಮೋದಿ-ಷಾ ಸರ್ಕಾರವು ಈಶಾನ್ಯ ಭಾಗದ ಜನರ ಅಸ್ತಿತ್ವವನ್ನು ಮುಗಿಸಲು ಬೇರೆಯವರನ್ನು ಎತ್ತಿಕಟ್ಟುವ ತಂತ್ರವೂ ಆಗಿದೆ . ಇದು ಆ ಭಾಗದ ಜನರ ಮೇಲೆ ಸರ್ಕಾರ ನಡೆಸಿದ ದೊಡ್ಡ ಆಕ್ರಮಣ ಅವರ ಜೀವನ ವಿಧಾನ ಮತ್ತು ಭಾರತದ ಕಲ್ಪನೆಗೆ ಸಂಪೂರ್ಣ ವಿರುದ್ದ ವಾಗಿದೆ ನಾನು ಈಶಾನ್ಯ ಭಾರತದ ಜನರ ಒಗ್ಗಟ್ಟಿನ ಪರವಾಗಿ, ಅವರಿಗೆ ಸದಾ ಬೆಂಬಲವಾಗಿ ನಿಲ್ಲುತ್ತೇನೆ ಮತ್ತು ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಸೋಮವಾರ ಲೋಕಸಭೆಯಲ್ಲಿ ಅಂಗೀಕಾರವಾಗಿದ್ದ ಈ ಮಸೂದೆ ಈಗ ಪ್ರಸ್ತುತ ರಾಜ್ಯಸಭೆಯಲ್ಲಿ ಚರ್ಚಿಸಲಾಗುತ್ತಿದೆ.
ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ಬಂದ ಮುಸ್ಲಿಮೇತರ ನಿರಾಶ್ರಿತರಿಗೆ ಪೌರತ್ವ ನೀಡುವು ಸರ್ಕಾರದ ಗುರಿಯಾಗಿದೆ .
ಮಂಗಳವಾರ ರಾಹುಲ್ ಮಸೂದೆ ಸಂವಿಧಾನದ ಮೇಲಿನ ದಾಳಿ ಎಂದು ಬಣ್ಣಿಸಿದ್ದರು ಮಸೂದೆಯನ್ನು ಬೆಂಬಲಿಸುವವರು ಸಹ ಭಾರತದ ಅಡಿಪಾಯವನ್ನು ನಾಶಮಾಡುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ ಎಂದೂ ಹೇಳಿದ್ದರು
ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳು ಮಸೂದೆಯನ್ನು ತೀವ್ರವಾಗಿ ವಿರೋಧಿಸಿದ್ದು, ಇದು ತಾರತಮ್ಯ ಮತ್ತು ಸಂವಿಧಾನದ ಮೂಲ ಸಿದ್ಧಾಂತಗಳಿಗೆ ವಿರುದ್ಧವಾಗಿದೆ ಎಂದು ಆರೋಪಿಸಿವೆ. "
ಪೌರತ್ವದ ಆಧಾರವು ಧರ್ಮವಾದಾಗ, ಅದು ಭಾರತದ ಸಂವಿಧಾನದ ಮೂಲಆಶಯವನ್ನು ಇದು ಉಲ್ಲಂಘಿಸಲಿದೆ ಮೇಲಾಗಿ ಭಾರತ ಇನ್ನು ಮುಂದೆ ಎಂದು ಜಾತ್ಯತೀತ ಮತ್ತು ಏಕೀಕೃತ ದೇಶವಾಗಿ ಉಳಿಯಲು ಸಾಧ್ಯವೇ ಇಲ್ಲ ಎಂಬುದು ಜಗತ್ತಿಗೆ ಸಾರಾಸಗಟಾಗಿ ಬಹಿರಂಗ ಪಡಿಸಿದಂತಾಗುತ್ತದೆ ಎಂದೂ ಪಕ್ಷ ಟ್ವಿಟ್ಟರ್ ನಲ್ಲು ಕಟು ಟೀಕೆ ಮಾಡಿತ್ತು.