ಪೌರತ್ವ ತಿದ್ದುಪಡಿ ಮಸೂದೆ: ಸಂವಿಧಾನದ ಮೇಲಿನ ದೊಡ್ಡ ಆಕ್ರಮಣ

ನವದೆಹಲಿ, ಡಿ 11:     ಪೌರತ್ವತಿದ್ದುಪಡಿ ಮಸೂದೆ ಸಂವಿಧಾನದ ಮೇಲಿನ ದೊಡ್ಡ ಆಕ್ರಮಣ ಎಂದು ಕಾಂಗ್ರೆಸ್  ಆಕ್ರೋಶ  ವ್ಯಕ್ತಪಡಿಸಿದೆ.  

ಭಾರತವನ್ನು ಜಾತಿ ಧರ್ಮದ ಆಧಾರದ  ಮೇಲೆ ವಿಭಜನೆ ಮಾಡಲು  ಹೊರಟಿದೆ ಎಂದು ಪ್ರತಿಪಕ್ಷಗಳು ದೂರಿವೆ. 

ರಾಜ್ಯಸಭೆಯಲ್ಲಿ ಮಸೂದೆಯ ಬಗ್ಗೆ  ಅಸಮಾಧಾನ ಹೊರಹಾಕಿದ  ಕಾಂಗ್ರೆಸ್ ಉಪನಾಯಕ ಆನಂದ್ ಶರ್ಮಾ ಅವರು, ಮಸೂದೆಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿದೆ ಅವುಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಬೇಕು ಎಂದು ಅಗ್ರಹಪಡಿಸಿದರು. 

ಸರ್ಕಾರ ಏಕೆ ಇಷ್ಟು ಅವಸರದಲ್ಲಿದೆ? ಇದನ್ನೂ  ಸಂಸದೀಯ ಸಮಿತಿ ಪರಶೀಲನೆಗೆ  ಕಳುಹಿಸಬಹುದಿತ್ತು, ಆಗ ಈ ಮಸೂದೆಯನ್ನೂ ಸಂಸತ್ತಿನ ಮುಂದಿನ ಅಧಿವೇಶನದಲ್ಲಿ ಮಂಡನೆ ಮಾಡಬಹುದಿತ್ತು  ಈ ಮಸೂದೆ ಅಂಗೀಕಾರವಾಗದಿದ್ದಲ್ಲಿ, ದೇಶ, ಆಕಾಶವೇನು    ಕಳಚಿ ಬೀಳುತ್ತಿರಲಿಲ್ಲವಲ್ಲ ಎಂದು   ತೀವ್ರವಾಗಿ ಸರ್ಕಾರದ  ನಡೆಯನ್ನೂ ಅವರು ಬಲವಾಗಿ  ತರಾಟೆಗೆ ತೆಗೆದುಕೊಂಡರು.  

ನಾವು  ಈ ಮಸೂದೆಯನ್ನು ಬೆಂಬಲಿಸದಿರಲು ಮುಖ್ಯ ಕಾರಣ  ರಾಜಕೀಯವಲ್ಲ, ಬದಲಿಗೆ ಸಾಂವಿಧಾನಿಕ ಮತ್ತು ನೈತಿಕತೆ ಎಂದು ಶರ್ಮಾ ಹೇಳಿದರು.