ಲೋಕದರ್ಶನವರದಿ
ರಾಣೇಬೆನ್ನೂರು: ಏ.18: ವಿಶ್ವದ ಎಲ್ಲಾ ರಾಷ್ಟ್ರಗಳಲ್ಲಿ ಇಂದು ಕರೋನಾ ವೈರಸ್ ಸೋಂಕು ರೋಗವು ತನ್ನ ಕಬಂಧ ಬಾಹು ಚಾಚಿ ಲಕ್ಷಾಂತರ ಜನರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಲಿದೆ ಇದೆಲ್ಲವೂ ಆಯಾ ರಾಷ್ಟ್ರವು ಮುಂಜಾಗೃತ ಕ್ರಮವನ್ನು ವಹಿಸಿದೇ ಇರುವುದೇ ಕಾರಣವಾಗಿದೆ ಎಂದು ಜಿಲ್ಲಾ ಪೋಲೀಸ್ ಅಧಿಕ್ಷ ಕೆ.ಸಿ.ದೇವರಾಜ ಹೇಳಿದರು.
ಅವರು ಶನಿವಾರ ನಗರಠಾಣಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ, ಪೋಲೀಸ್ ಮಾಚರ್್ ಫಾಸ್ಟ್ ಜನಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಹಾವೇರಿ ಜಿಲ್ಲೆ ಸೋಂಕು ಪ್ರಕರಣವಿಲ್ಲದೇ, ಅತ್ಯಂತ ಶಾಂತಿ, ನೆಮ್ಮದಿಯಿಂದ ನಾಗರೀಕರು ಬದುಕುತ್ತಿದ್ದಾರೆ. ಇದೇ ರೀತಿ ಮುಂದುವರೆಯಬೇಕೆನ್ನುವುದೇ ಜಿಲ್ಲಾಡಳಿತದ ಆಪೇಕ್ಷೆಯಾಗಿದೆ. ಜನರ ಸಹಕಾರವಿದ್ದರೇ, ಎನ್ನನ್ನಾದರೂ ಸಾಧಿಸಬಹುದಾಗಿದೆ ಎನ್ನುವುದಕ್ಕೆ ನಮ್ಮ ಜಿಲ್ಲೆ ಸಾಕ್ಷಿಯಾಗಿ ನಿಂತಿದೆ. ಯಾರೂ ಅಧೈರ್ಯಗೊಳ್ಳಬೇಕಾದ ಅವಶ್ಯಕತೆಯಿಲ್ಲ. ಜಿಲ್ಲಾಡಳಿತ ಮತ್ತು ಪೋಲೀಸ್ ಇಲಾಖೆ ತಮ್ಮೊಂದಿಗೆ ಇದೆ. ಯಾರೂ ಅನಾವಶ್ಯಕವಾಗಿ ರಸ್ತೆಗಿಳಿಯಬಾರದು ಎಂದರು.
ಪ್ರತಿಯೊಬ್ಬ ನಾಗರೀಕರು ಕೇಂದ್ರ ಮತ್ತು ರಾಜ್ಯ ಸಕರ್ಾರಗಳು ನಿರ್ಭಂಧಿಸಿ ಜಾರಿಗೆ ತಂದಿರುವ ಕಾನೂನನ್ನು ಪರಿಪಾಲಿಸಬೇಕು. ಎದೆಲ್ಲವೂ ನಮ್ಮ ಕುಟುಂಬದ ರಕ್ಷಣೆಗಾಗಿ ಎನ್ನುವ ಸೂಕ್ಷ್ಮತೆ ಅರಿತುಕೊಂಡರೆ, ಯಾರೂ ಹೊರಗಡೆ ಬರಲು ಸಾಧ್ಯವಿಲ್ಲ ಎಂದ ಅವರು ಜಿಲ್ಲೆಯ ಜನರ ಜಾಗೃತಿಗಾಗಿ ಈಗಾಗಲೇ ಹಾನಗಲ್, ಶಿಗ್ಗಾಂವಿ, ಸವಣೂರ, ಬಂಕಾಪುರ, ಬ್ಯಾಡಗಿ ಮತ್ತು ಇಂದು ವಾಣಿಜ್ಯ ನಗರ ರಾಣೇಬೆನ್ನೂರಲ್ಲಿ ಕೊರೊನಾ ಜನಜಾಗೃತಿಗಾಗಿ ಪೋಲೀಸ್ ಇಲಾಖೆ ಮಾಚರ್್ಫಾಸ್ಟ್ ಆಯೋಜಿಸಿದೆ. ರವಿವಾರ ರಟ್ಟಿಹಳ್ಳಿ ಮತ್ತು ಹಿರೇಕೆರೂರು ಈ ಎರಡು ತಾಲೂಕಿನಲ್ಲಿ ಮಾಚರ್್ಫಾಸ್ಟ್ ನಡೆಯಲಿದೆ ಎಂದರು.
ಪ್ರಸ್ತಾವಿಕವಾಗಿ ಮಾತನಾಡಿದ ಪೋಲೀಸ್ ಉಪ-ಅಧೀಕ್ಷ ಟಿ.ವಿ.ಸುರೇಶ್ ಅವರು ವಾಣಿಜ್ಯ ನಗರ ಮತ್ತು ತಾಲೂಕಿನ ನಾಗರೀಕರು ಶಾಂತಿ ಪ್ರಿಯರು, ಯಾವುದೇ ಕಾನೂನನ್ನು ಉಲ್ಲಂಘಿಸಿ ನಡೆದುಕೊಂಡವರಲ್ಲ. ಇದೇ ರೀತಿ ತಾಲೂಕಿನ ನಾಗರೀಕರು ಮುಂದುವರೆಯಬೇಕು.
ನಗರದಲ್ಲಿ ಯಾವುದೇ ಕೊರೊನಾ ಸೋಂಕು ಪ್ರಕರಣ ಸಂಭವಿಸಿಲ್ಲ ಅದೇ ನಮ್ಮ ಅದೃಷ್ಠ. ಕೆಲವರು ಸಾಮಾಜಿಕ ಜಾಲತಾಣದಲ್ಲಿ ಕಪೋಲ-ಕಲ್ಪಿತವಾಗಿ ಸುಳ್ಳುಸುದ್ದಿಗಳನ್ನು ಹರಡಿಸುತ್ತಿದ್ದಾರೆ. ಇದೆಲ್ಲವೂ ನಂಬಬಾರದು. ಪೋಲೀಸರೊಂದಿಗೆ ಸೌಜನ್ಯದಿಂದ ವತರ್ಿಸಬೇಕು. ಕಾನೂನು ಉಲ್ಲಂಘಿಸಿದರೆ, ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.
ವಾಣಿಜ್ಯ ನಗರದಲ್ಲಿ ಅತ್ಯಂತ ಅಭೂತಪೂರ್ವವಾಗಿ ನಾಗರೀಕರ ಸ್ವಾಗತಾರ್ಹ ಕರತಾನಗಳ ಮಧ್ಯ ಪುಷ್ಪವೃಷ್ಠಿಯೊಂದಿಗೆ ಆಕರ್ಷಕವಾಗಿ ನಡೆದ ಜನಜಾಗೃತಿ ಮಾಚರ್್ಫಾಸ್ಟ್ ಪೋಲೀಸ್ರ ಬೈಕ್ ರ್ಯಾಲಿಯು ನಾಗರೀಕರಲ್ಲಿ ಪೋಲೀಸರು ತಮ್ಮೊಂದಿಗಿದ್ದಾರೆ ಎನ್ನುವ ಆತ್ಮವಿಶ್ವಾಸ ಮೂಡಿಸುವಲ್ಲಿ ಸಫಲವಾಯಿತು.
ಜನಜಾಗೃತಿ ಜಾಥಾದಲ್ಲಿ ಶಾಸಕರ ಅರುಣಕುಮಾರ ಪೂಜಾರ, ಹೆಚ್ಚುವರಿ ಅಧೀಕ್ಷಕರು ಮಲ್ಲಿಕಾಜರ್ುನ ಬಾಲದಂಡಿ, ನಗರ ಸಿಪಿಐ ಲಿಂಗನಗೌಡ ನೆಗಳೂರ, ಗ್ರಾಮೀಣ ಸಿಪಿಐ ಸುರೇಶ್ ಸಗರಿ, ನಗರಠಾಣಾ ಪಿಎಸ್ಐ ಪ್ರಭು ಕೆಳಗಿನಮನಿ, ಅಪರಾಧ ವಿಭಾಗದ ಎನ್.ಎನ್.ಉದಗಟ್ಟಿ, ಕೆಪಿಎಂ ಪಿಎಸ್ಐ ಅಣ್ಣಯ್ಯ, ಹಲಗೇರಿ ಮಂಜುನಾಥ ಕುಪ್ಪೇಲೂರ, ಗ್ರಾಮಾಂತರ ಪಿಎಸ್ಐ ಮೇಘರಾಜ, ಎಎಸ್ಐ ಕೆ.ಸಿ.ಕೋಮಲಾಚಾರ್, ಚೌಟಗಿ, ಸೇರಿದಂತೆ ಮತ್ತಿತರರೆ ಸಾವಿರಾರು ಪೋಲೀಸರು, ವಿವಿಧ ಠಾಣೆಗಳ ಅಧಿಕಾರಿಗಳು, ಸಿಬ್ಬಂದಿಗಳು ಪಾಲ್ಗೊಂಡಿದ್ದರು.