ಕ್ರಿಸ್ಮಸ್: ಜನತೆಗೆ ಶುಭಕೋರಿದ ಮೋದಿ

ನವದೆಹಲಿ, ಡಿಸೆಂಬರ್ 25, ಕ್ರಿಸ್‌ಮಸ್ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಬುಧವಾರ ಜನತೆಗೆ ಅಭಿನಂದನೆ, ಶುಭಹಾರೈಸಿದ್ದಾರೆ.  ದೇಶವಾಸಿಗಳಿಗೆ ನೀಡಿದ ಸಂದೇಶದಲ್ಲಿ, '' ಮೆರ್ರಿ ಕ್ರಿಸ್‌ಮಸ್! ಯೇಸುಕ್ರಿಸ್ತನ ಉದಾತ್ತ ಆಲೋಚನೆಗಳು ಪ್ರಸ್ತುತವಾಗಿದ್ದು ಅವುಗಳನ್ನು ಸದಾ  ನೆನೆಯಬೇಕಿದೆ ಎಂದು ಹೇಳಿದ್ದಾರೆ. ಅವರು ಸೇವೆಯ ಮನೋಭಾವ ಮತ್ತು ಸಹಾನುಭೂತಿಯಿಂದ ಜಗತ್ತಿನಲ್ಲಿ ಹೇಗೆ  ಬದುಕಬೇಕು ಎಂಬುದನ್ನು  ತೋರಿಸಿಕೊಟ್ಟಿದ್ದಾರೆ  ಮಾನವನ ಸಂಕಷ್ಟಗಳನ್ನು ನಿವಾರಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಅವರ ತತ್ವ, ಬೋಧನೆಗಳು ಪ್ರಪಂಚದಾದ್ಯಂತ ಲಕ್ಷಾಂತರ ಜನರನ್ನು ಪ್ರೇರೇಪಿಸುತ್ತವೆ.ಅವು ಇಂದಿಗೂ ಪ್ರಸ್ತುತವಾಗಿದೆ ಎಂದು ಪ್ರಧಾನಿ  ನರೇಂದ್ರ ಮೋದಿ ಅವರು ಒತ್ತಿ ಹೇಳಿದ್ದಾರೆ.