ಅಯೋಧ್ಯೆಯ ಹನುಮಾನ್ ಗರ್ಹಿ ದೇಗಲದಲ್ಲಿ ಪೂಜೆ ಸಲ್ಲಿಸಿದ ಚಿನ್ಮಯಾನಂದ

ಆಯೋಧ್ಯಾ, ಫೆ 8, ಕಾನೂನು ವಿದ್ಯಾರ್ಥಿನಿಯೊಬ್ಬಳ ಮೇಲೆ   ಲೈಂಗಿಕ  ದೌರ್ಜನ್ಯ  ಎಸಗಿದ್ದ  ಪ್ರಕರಣದ  ಆರೋಪಿಯಾಗಿ,  ಜಾಮೀನಿನ ಮೇಲೆ  ಬಿಡುಗಡೆ ಹೊಂದಿರುವ  ಮಾಜಿ ಕೇಂದ್ರ ಸಚಿವ  ಸ್ವಾಮಿ ಚಿನ್ಮಯಾನಂದ   ಶನಿವಾರ  ಹನುಮಾನ್ ಗರ್ಹಿ ದೇಗುಲಕ್ಕೆ ಭೇಟಿ   ವಿಶೇಷ ಪೂಜೆ ಸಲ್ಲಿಸಿದರು.ಸ್ವಾಮಿ ಚಿನ್ಮಯಾನಂದ  ಇಂದು ಬೆಳಗ್ಗೆ  ಇಲ್ಲಿಗೆ ಆಗಮಿಸಿ, ಹನುಮಾನ್ ಗರ್ಹಿ ದೇಗುಲಕ್ಕೆ ತೆರಳಿ  ಪೂಜೆ ಸಲ್ಲಿಸಿದ ನಂತರ  ಲಕ್ನೋಗೆ ತೆರಳಿದರು.ದೇಗುಲದ ಬಳಿ ಮಾಧ್ಯಮ  ಪ್ರತಿನಿಧಿಗಳನ್ನು   ಭೇಟಿಯಾಗಲು   ನಿರಾಕರಿಸಿದ   ಮಾಜಿ ಕೇಂದ್ರ ಸಚಿವರು, ಯಾವುದೇ ಪ್ರತಿಕ್ರಿಯೆ ನೀಡದೆ  ಅಲ್ಲಿಂದ ತೆರಳಿದರು. ಅತ್ಯಾಚಾರ ಪ್ರಕರಣದಲ್ಲಿ  ಕಳೆದ ಐದು  ತಿಂಗಳುಗಳಿಂದ   ಜೈಲಿನಲ್ಲಿದ್ದ   ಮಾಜಿ ಕೇಂದ್ರ ಸಚಿವರಿಗೆ  ಗುರುವಾರ  ಅಲಹಾಬಾದ್  ಹೈಕೋರ್ಟ್   ಜಾಮೀನು ಮಂಜೂರು ಮಾಡಿತ್ತು ಜೈಲಿನಿಂದ ಬಿಡುಗಡೆಯ ನಂತರ   ಸ್ವಾಮಿ ಚಿನ್ಮಯಾನಂದ  ಶಹಜಾನ್ ಪುರದಲ್ಲಿರುವ  ತಮ್ಮ  ಆಶ್ರಮದಲ್ಲಿ     ಅತಿ ದೊಡ್ಡ  ಧಾರ್ಮಿಕ ಕಾರ್ಯಕ್ರಮ ಆಯೋಜಿಸಿ, ಸಾವಿರಾರು ಮಂದಿಗೆ ಪ್ರಸಾದ  ವಿತರಿಸಿದ್ದರು.