ಬೀಜಿಂಗ್, ಅ 6: ಮೊದಲನೇ ಸೆಟ್‌ನಲ್ಲಿ ಸೋಲು ಅನುಭವಿಸಿದರೂ ನಂತರ ಪುಟಿದೆದ್ದ ಜಪಾನ್‌ನ ನವೋಮಿ ಒಸಾಕ ಅವರು ಫೈನಲ್
ಹಣಾಹಣಿಯಲ್ಲಿ ವಿಶ್ವ ಅಗ್ರ ಶ್ರೇಯಾಂಕಿತೆ ಆ್ಯಶ್ಲೆೆ ಬಾರ್ಟಿ ವಿರುದ್ಧ ಗೆದ್ದು ಚೀನಾ ಓಪನ್ ಮುಡಿಗೇರಿಸಿಕೊಂಡರು.
ಭಾನುವಾರ 110 ನಿಮಿಷಗಳ ಕಾಲ ನಡೆದ ಮಹಿಳೆಯರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಕಠಿಣ ಹೋರಾಟ ನಡೆಸಿದ ನವೋಮಿ ಒಸಾಕ ಅವರು 3-6, 6-3, 6-2 ಅಂತರದಲ್ಲಿ ಆಸ್ಟ್ರೇಲಿಯಾದ ಆ್ಯಶ್ಲೆೆ ಬಾರ್ಟಿ ಅವರನ್ನು ಮಣಿಸಿ ಚೀನಾ ಓಪನ್ ಚಾಂಪಿಯನ್ ಆದರು.
ಪಂದ್ಯದ ಮೊದಲ ಸೆಟ್‌ನಲ್ಲಿ ಒಸಾಕ ಹಾಗೂ ಬಾರ್ಟಿ ಅವರ ವಿರುದ್ಧ ಭಾರಿ ಪೈಪೋಟಿ ನಡೆದಿತ್ತು. ಆದರೆ, ಅಂತಿಮವಾಗಿ ಬಾರ್ಟಿ 6-3 ಅಂತರಲ್ಲಿ ಒಸಾಕ ಅವರನ್ನು ಮಣಿಸಿದರು. ನಂತರ, ಎಚ್ಚೆೆತ್ತುಕೊಂಡ ಒಸಾಕ ಅವರು ಮೊದಲನೇ ಸೆಟ್‌ನಲ್ಲಿ ಮಾಡಿದ ತಪ್ಪುಗಳನ್ನು ತಿದ್ದಿಕೊಂಡು ಆಡಿದರು. ಇದರ ಫಲವಾಗಿ ಎರಡನೇ ಸೆಟ್ ಅನ್ನು 6-3 ಅಂತರದಲ್ಲಿ ಜಪಾನ್ ಆಟಗಾರ್ತಿ ಗೆದ್ದರು. ತೀವ್ರ ಕುತೂಹಲ ಕೆರಳಿಸಿದ ಮೂರನೇ ಹಾಗೂ ಅಂತಿ ಸೆಟ್‌ನಲ್ಲಿ ಅದೇ ಲಯ ಮುಂದುವರಿಸಿದ 21ರ ಪ್ರಾಯದ ಒಸಾಕ 6-2 ಅಂತರದಲ್ಲಿ ಗೆದ್ದು ಚೀನಾ ಓಪನ್ ಪ್ರಶಸ್ತಿಗೆ ಚುಂಬಿಸಿದರು.
ಚೀನಾ ಓಪನ್ ಗೆಲ್ಲುವ ಮೂಲಕ ಒಸಾಕ ಅವರು 2019ರ ಆವೃತ್ತಿಯಲ್ಲಿ ಮುರನೇ ಪ್ರಶಸ್ತಿ ಹಾಗೂ ವೃತ್ತಿ ಜೀವನದ ಐದನೇ ಗರಿ ಇದಾಯಿತು.