ಚೀನಾ ಓಪನ್ ಬ್ಯಾಡ್ಮಿಂಟನ್ ಟೂರ್ನಿ: ರಂಕಿರೆಡ್ಡಿ-ಪೊನ್ನಪ್ಪ ಮಿಶ್ರ ಜೋಡಿಗೆ ಶುಭಾರಂಭ

ನವದೆಹಲಿ, ಸೆ 17     ಸಾತ್ವಿಕ್ಸಾಯಿರಾಜ್ ರಂಕಿರೆಡ್ಡಿ ಹಾಗೂ ಅಶ್ವಿನಿ ಪೊನ್ನಪ್ಪ ಭಾರತದ ಮಿಶ್ರ ಡಬಲ್ಸ್ ಜೋಡಿಯು ಚೀನಾ ಓಪನ್ ಬ್ಯಾಡ್ಮಿಂಟನ್ ಟೂನರ್ಿಯ ಮೊದಲನೇ ಸುತ್ತಿನಲ್ಲೇ ಗೆದ್ದು ಶುಭಾರಂಭ ಮಾಡಿದೆ.  

ಮಂಗಳವಾರ ಬೆಳಗ್ಗೆ ಒಲಿಂಪಿಕ್ಸ್ ಸ್ಪೋಟ್ರ್ಸ ಸೆಂಟರ್ನಲ್ಲಿ 50 ನಿಮಿಷಗಳಿಗೂ ಹೆಚ್ಚಿನ ಅವಧಿವರೆಗೂ ನಡೆದ ಪಂದ್ಯದಲ್ಲಿ ಪಾರಮ್ಯ ಮೆರೆದ ಸಾತ್ವಿಕ್ಸಾಯಿರಾಜ್ ರಂಕಿರೆಡ್ಡಿ ಹಾಗೂ ಕನರ್ಾಟಕದ ಅಶ್ವಿನಿ ಪೊನ್ನಪ್ಪ ಜೋಡಿಯು ವಿಶ್ವದ ಏಳನೇ ಶ್ರೇಯಾಂಕದ ಪ್ರವೀಣ್ ಜೊಡರ್ಾನ್ ಮತ್ತು ಮೆಲತಿ ದೇವಾ ಒಕ್ಟಾವಿಯೆಂಟಿ ಇಂಡೋನೇಷ್ಯಾ ಜೋಡಿಯ ವಿರುದ್ಧ 22-20, 17-21, 21-17 ಅಂತರದಲ್ಲಿ ಗೆದ್ದು ಎರಡನೇ ಸುತ್ತಿಗೆ ಪ್ರವೇಶ ಮಾಡಿದೆ.  

ಮೊದಲನೇ ಸೆಟ್ನ ಆರಂಭದಲ್ಲಿ ಭಾರತದ ಜೋಡಿಯು 12-18 ಅಂತರದಲ್ಲಿ ಹಿನ್ನಡೆ ಅನುಭವಿಸಿತ್ತು. ಬಳಿಕ, ಪ್ರಬಲ ಪೈಪೋಟಿ ನೀಡಿ 22-20 ಅಂತರದಲ್ಲಿ ಇಂಡೋನೆಷ್ಯಾ ಜೋಡಿಯನ್ನು ಮಣಿಸಿತು. ಎರಡನೇ ಸೆಟ್ನಲ್ಲಿ ಪುಟಿದೆದ್ದ ಪ್ರವೀಣ್ ಹಾಗೂ ಒಕ್ಟಾವಿಯೆಂಟಿ ಜೋಡಿಯು ಭಾರತದ ಜೋಡಿ ಮೇಲೆ ಆಕ್ರಮಣಕಾರಿ ಪ್ರದರ್ಶನ ತೋರಿ 17-21 ಅಂತರದಲ್ಲಿ ಜಯ ಸಾಧಿಸಿತು. 

 ನಂತರ, ತೀವ್ರ ಕುತೂಹಲ ಕೆರಳಿಸಿದ ಮೂರನೇ ಹಾಗೂ ಅಂತಿಮ ಸೆಟ್ನಲ್ಲಿ ಎಚ್ಚೆತ್ತುಕೊಂಡು ಸಾತ್ವಿಕ್-ಅಶ್ವಿನಿ ಭಾರತದ ಮಿಶ್ರ ಜೋಡಿಯು 21-17 ಅಂತರದಲ್ಲಿ ಗೆದ್ದು ಪಂದ್ಯವನ್ನು ತನ್ನದಾಗಿಸಿಕೊಂಡಿತು.  

ರಂಕಿರೆಡ್ಡಿ ಅವರು ಚಿರಾಗ್ ಶೆಟ್ಟಿ ಅವರೊಂದಿಗೆ ಇಂದು ತಡವಾಗಿ ಪುರುಷರ ಡಬಲ್ಸ್ ಮೊದಲ ಸುತ್ತಿನ ಪಂದ್ಯದಲ್ಲಿ ಕೆನಡಾದ ಜೋಡಿಯ ವಿರುದ್ಧ ಸೆಣಸಲಿದ್ದಾರೆ.