ಲೋಕದರ್ಶನ
ವರದಿ
ಧಾರವಾಡ
30: ಮಕ್ಕಳಲ್ಲಿ ಅಡಗಿರುವ ಕಲೆಯನ್ನು ಗುರುತಿಸಬೇಕಾದರೆ ಇಂತಹ ಶಿಬಿರಗಳ ಅವಶ್ಯಕತೆ
ಇದ್ದು ಇನ್ನೂ ಅನೇಕ ಕಡೆ ಇಂತಹ
ತರಬೇತಿ ಶಿಬಿರಗಳು ನಡೆಯಬೇಕು ಎಂದು ಗುರು ಬಸಪ್ಪ
ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನಾಗಪ್ಪ ಬಿದಿರಿಯವರು ಹೇಳಿದರು.
ರಂಗಪಯಣ ಧಾರವಾಡ ಹಾಗೂ ಕನ್ನಡ ಮತ್ತು
ಸಂಸ್ಕೃತಿ ಇಲಾಖೆ ಧಾರವಾಡ ಇವುಗಳ ಸಂಯುಕ್ತ ಆಶ್ರಯದಲ್ಲಿ ತಕ್ಷಶಿಲ ಆಂಗ್ಲ ಮಾಧ್ಯಮ ಶಾಲೆ ತಾರಿಹಾಳದಲ್ಲಿ ಮಧ್ಯಾಂತರ
ರಜಾ ಕಾಲದಲ್ಲಿ ಜರುಗಿದ 15 ದಿನಗಳ ಮಕ್ಕಳ ಹಕ್ಕು ಹಾಗೂ ರಂಗ ತರಬೇತಿ
ಶಿಬಿರದ ಮುಕ್ತಾಯ ಸಮಾರಂಭ ಹಾಗೂ ಪರಿವರ್ತನೆ ಎಂಬ
ಮಕ್ಕಳ ನಾಟಕ ಉದ್ಘಾಟಿಸಿ ಮಾತನಾಡಿ
ನಾಟಕಕ್ಕೆ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾದ ಮಹಾದೇವ ದೊಡ್ಡಮನಿ ಮಾತನಾಡಿ ಕೃಷಿಕರ ಮತ್ತು ಕಾಮರ್ಿಕರ ಮಕ್ಕಳು ಹೆಚ್ಚಾಗಿ ಈ ಶಾಲೆಯಲ್ಲಿ ಇರುವುದರಿಂದ
ಅಂತಹ ಮಕ್ಕಳಿಗೆ ಇಂತಹ ತರಬೇತಿ ಅವಶ್ಯವಾಗಿದ್ದು
ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕನ್ನಡ ಕಂಪು ಬೆಳಗಿಸುವ ಕಾರ್ಯ
ಶ್ಲಾಘನೀಯವಾದದ್ದು. ಈ ಕಾರ್ಯಗಳಗೆ ಸರಕಾರ
ಮತ್ತು ಬಾಲವಿಕಾಸ ಅಕಾಡೆಮಿಗಳು ಹೆಚ್ಚು ಒತ್ತುಕೊಟ್ಟು ಅಂತಹ ಮಕ್ಕಳಲ್ಲಿ ಅಡಗಿರುವ
ಅನೇಕ ಕಲೆಗಳನ್ನು ನಾಡಿಗೆ ಪರಿಚಯಿಸಬೇಕಾದ ಅವಶ್ಯಕತೆ ಇದ್ದು, ಆ ನಿಟ್ಟಿನಲ್ಲಿ ಬಾಲ
ವಿಕಾಸ ಅಕಾಡೆಮಿ ಇದೆಯಾ? ಎನ್ನುವಂತಾಗಿದೆ ಎಂದು ವಿಷಾದಿಸಿದರು.
ಅಧ್ಯಕ್ಷತೆಯನ್ನು ದ್ರಾಕ್ಷಾಯಣಿ ಬಸವರಾಜ ವಹಿಸಿದ್ದರು. ಪರಿವರ್ತನೆ ಎಂಬ ಮಕ್ಕಳ ನಾಟಕ
ಗ್ರಾಮ ಸ್ವಚ್ಛತೆ ಹಾಗೂ ಸರ್ವಜನಾಂಗ ಒಂದೇ
ಮತ್ತು ಪರಿಸರ ಬಗ್ಗೆ ಕಾಳಜಿಯನ್ನು ಇಟ್ಟುಕೊಂಡು ಎನ್. ರಾಜೇಶ್ವರಿ ಸುಳ್ಯ
ಇವರ ನಿದರ್ೇಶನದಲ್ಲಿ ಎನ್. ಶ್ರೀನಿವಾಸ ಉಡುಪಾ
ರಚನೆಯ ನಾಟಕವನ್ನು ತಕ್ಷಶಿಲ ಆಂಗ್ಲ ಮಾಧ್ಯಮ ಶಾಲೆಯ ಎಲ್.ಕೆ.ಜಿ.ಯಿಂದ 10ನೇ ತರಗತಿಯವರೆಗಿನ ಮಕ್ಕಳು
ಮನಮುಟ್ಟುವಂತೆ ನಟಿಸಿದರು.
ವೇದಿಕೆಯ ಮೇಲೆ ಚಂದ್ರಶೇಖರ ಜಿಗಜಿನ್ನಿ,
ವಿಠಲ ಕೊಪ್ಪದ, ಮಲ್ಲಪ್ಪ ಹೊಂಗಲ, ಉಪಸ್ಥಿತರಿದ್ದರು. ಶಾಲೆಯ ಮಕ್ಕಳು ಪ್ರಾಥರ್ಿಸಿದರು. ಯೋಗೇಶ ಪಾಟೀಲ ನಿರೂಪಿಸಿದರು. ರೂಪಾ ವಿಂಗೋಲಿ ವಂದಿಸಿದರು.
ಸಂಗೀತದಲ್ಲಿ ಬಾವಾಖಾನ, ಯಮನೂರ ಜಾಧವ, ಪ್ರಸಾಧನ ವೈಭವ ಎನ್. ಸಹಕರಿಸಿದರು.