ಲೋಕದರ್ಶನ ವರದಿ
ತಾಂಬಾ 18: ಇಂದು ಸಮಾಜದಲ್ಲಿ ಭಾವೈಕ್ಯತೆ ಬೆಳೆಸಲು ಮಕ್ಕಳ ಮನದಾಳದಲ್ಲಿ ಮಾನವಿಯ ಮೌಲ್ಯ ಬಿತ್ತುವ ಅಗತ್ಯವಿದೆ ಎಂದು ಮುಳವಾಡದ ಮಕ್ಕಳ ಸಾಹಿತಿ ಪ.ಗು.ಸಿದ್ದಾಪೂರ ಹೇಳಿದರು,.
ಹೋನ್ನಳ್ಳಿ ಗ್ರಾಮದ ಶ್ರೀ ಶಿವಶರಣೆ ನಿಂಬೆಕ್ಕ ಪ್ರೌಡ ಶಾಲೆ ಹಾಗೂ ಶ್ರೀ ಡಿ,ಎಮ್, ಕುಮಾನಿ ಪದವಿ ಪೂರ್ವ ಮಹಾವಿದ್ಯಾಲಯಗಳ ಸಂಯುಕ್ತಾಶ್ರಯದಲ್ಲಿ ನಡೆದ ಸಾಹಿತಿಗಳ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಇಂದು ಸಮಾಜದಲ್ಲಿ ಭಾವೈಕ್ಯತೆ ಬೆಳೆಸಲು ಮಕ್ಕಳ ಮನದಾಳದಲ್ಲಿ ಮಾನವಿಯ ಮೌಲ್ಯ ಬಿತ್ತಬೇಕು ಮನು ಕುಲ ಎನ್ನುವದು ಒಂದೇ ಎಂದು ಅರಿತು ಬದುಕಿದರೆ ಬಾಳು ಬಂಗಾರವಾಗುವದು ಈ ಸಂಸ್ಥೆಯಲ್ಲಿ ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವದರ ಜೊತೆಗೆ ಸಾಹಿತಿಗಳು ಜಾನಪದ ಕಲಾಕಾರರು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವ್ಯಕ್ತಿಗಳನ್ನು ಸಂಸ್ಥೆಗೆ ಕರೆಹಿಸಿ ಪ್ರತಿವರ್ಷ ಸನ್ಮಾನ ಕಾರ್ಯಕ್ರಮ ಹಮ್ಮಿಕೋಳ್ಳುತ್ತಿರುವ ಸಂಸ್ಥೆಯ ಅಧ್ಯಕ್ಷ ಎಸ್.ಡಿ.ಕುಮಾನಿಯವರ ಕಾರ್ಯ ಶ್ಲಾಂಘನಿಯವಾದುದ್ದು ಎಂದರು.
ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಅಧ್ಯಕ್ಷರಾದ ಎಸ್.ಡಿ.ಕುಮಾನಿಯವರು ಮಾತನಾಡಿ ಸಾಹಿತ್ಯದಲ್ಲಿ ಸಾರ್ವಕಾಲಿಕ ಮೌಲ್ಯಗಳು ನೇಲೆಗೊಂಡಿವೆ ಹಂಚಿ ತಿನ್ನುವ ಸಂಸ್ಕೃತಿ ಜಾನಪದದಲ್ಲಿದೆ ಅದನ್ನು ಮುಂದಿನ ಪಿಳಿಗೆಗೆ ಕೋಂಡೋಯ್ಯಬೇಕಾದ ಜವಾಬ್ದಾರಿ ಪ್ರತಿಯೋಬ್ಬರ ಮೇಲಿದೆ ಸಾಹಿತ್ಯದ ಸೋಗಡು ಯುವಕರು ಅಳವಡಿಸಿಕೋಳ್ಳಬೇಕು ಎಂದ ಅವರು ನಾನು ಬಡತನದಲ್ಲಿ ಬೆಳೆದು ಬಂದಿದ್ದೆನೆ ಹೋನ್ನಳಿ ಗ್ರಾಮ ಕುಗ್ರಾಮವಾಗಿತ್ತು ನನ್ನ ನಾಲ್ಕು ಎಕರೆ ಜಮೀನನ್ನು ಸಂಸ್ಥೆಗೆ ಬಿಟ್ಟು ಸಂಸ್ಥೇಯಲ್ಲಿ ಯಾವ ಮಕ್ಕಳಿಂದ ಪೀಜ್ನ್ನು ವಸುಲಿ ಮಾಡದೇ ಉಚಿತ ಶಿಕ್ಷಣ ನೀಡಿ ಬಂಥನಾಳದ ಶಿಕ್ಷಣ ಕ್ರಾಂತಿ ಪುರುಷ ಶ್ರೀ ಸಂಗನಬಸವ ಶಿವಯೋಗಿಗಳ ಕನಸು ನನಸು ಮಾಡಿದ್ದೇನೆ ಅನ್ನುವ ತೃಪ್ತಿ ನನಗಿದೆ, ಶಿಕ್ಷಣ ಸಂಸ್ಥೆಗಳು ವ್ಯಾಪಾರಿಕರಣವಾಗದೆ ಮಕ್ಕಳಿಗೆ ಶಿಕ್ಷಣ ನೀಡುವ ಕೇಂದ್ರಗಳಾಗಬೇಕು ಎಂದರು, ಸಾಹಿತಿ ವ್ಹಿ.ಸಿ.ನಾಗಠಾಣ ಮಾತನಾಡಿದರು.
ಜಿ.ಡಿ.ಕೋಟ್ನಾಳ, ಭೀಮರಾಯ ತಳವಾರ, ಬಸವರಾಜ ಕುಮಾನಿ, ಅಶೋಕ ಕುಮಾನಿ, ರಾಮಗೋಂಡ ತೋನಶ್ಯಾಳ, ಪ್ರಾಚಾರ್ಯ ಎಸ್.ಎಮ್.ಮನಿಯಾರ ಸಿ.ಎಸ್. ಗೋಗಿ, ಬಿ.ಎಸ್.ಗರೇಬಾಳ, ಪಿ.ಎಸ್.ಕುಮಾನಿ ಉಪಸ್ಥಿತರಿದ್ದರು. ಜಿ.ಕೆ.ಜಾಗಿರದಾರ ಸ್ವಾಗತಿಸಿದರು ಎಚ್.ಪಿ.ದೇಶಪಾಂಡೆ ನಿರುಪಿಸಿದರು, ಬಿ.ಆರ್.ಲಾಳಿ ವಂದಿಸಿದರು