ವಿಶೇಷ ಮಕ್ಕಳಿಗೆ ಮಕ್ಕಳೋತ್ಸವ ಕಾರ್ಯಕ್ರಮ

ಬೆಳಗಾವಿ, 19 : ವಿಶೇಷ ಮಕ್ಕಳಿಗೆ ಪ್ರೋತ್ಸಾಹ ನೀಡಲು ಸರಕಾರ ಪ್ರತಿ ವರ್ಷ ಮಕ್ಕಳಿಗೆ ಪ್ರತಿಭೆಯನ್ನು ಪ್ರದರ್ಶಿ ಸಲು ವೇದಿಕೆಯನ್ನು ಕಲ್ಪಿಸಿಕೊಟ್ಟಿದೆ. ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಸರಕಾರಿ ಶಾಲೆಗಳು ಇಂತಹ ಮಕ್ಕಳ ಪಾಲನೆ-ಪೋಷಣೆಯಲ್ಲಿ ತೊಡಗಿದ್ದು, ಸ್ತುತಾರ್ಹ ಮತ್ತು ಪ್ರಶಂಸನೀಯ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿಗಳಾದ ಶ್ರೀಶೈಲ ಹಂಜಿ ಅವರು ಹೇಳಿದರು.

ಇಂದು (ಸೆ.19) ಕನರ್ಾಟಕ ಸರಕಾರ ಬಾಲಭವನ ಸೊಸೈಟಿ ಬೆಂಗಳೂರು ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ ಬೆಳಗಾವಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಜಿಲ್ಲಾ ಬಾಲಭವನ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಮಹೇಶ್ವರಿ ಅಂಧ ಮಕ್ಕಳ ಸಭಾಂಗಣದಲ್ಲಿ ವಿಶೇಷ ಮಕ್ಕಳಿಗೆ ಒಂದು ದಿನದ ಮಕ್ಕಳೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 

ಪ್ರತಿಯೊಂದು ಮಗುವಿನಲ್ಲಿ ಅಡಗಿರುವ ಸೂಕ್ತ ಪ್ರತಿಭೆಯನ್ನು ಪ್ರದಶರ್ಿಸಲು ಕ್ರೀಡೆ ಹಾಗೂ ಮಕ್ಕಳ ವೇಷ-ಭೂಷಣ ಸ್ಪರ್ಧೆ , ಚಿತ್ರಕಲೆ ಹಾಗೂ ಗ್ರಾಮೀಣ ಆಟಗಳನ್ನು ಏರ್ಪಡಿಸಿ ಎಂದು ಕೆರೆ ನೀಡಿದರು.

ಅಧ್ಯಕ್ಷತೆಯನ್ನು ಜಿಲ್ಲಾ ಅಂಧರ ಸಂಸ್ಥೆಯ ಅಧ್ಯಕ್ಷರಾದ ಚಂದ್ರಶೇಖರ ಬೆಂಬಳಗಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸರಕಾರಿ ಕಿವುಡ ಮತ್ತು ಮೂಗ ಶಾಲೆಯ ಅಧೀಕ್ಷಕರಾದ ಆರ್ ಬಿ ಬನಶಂಕರಿ, ಆರಾಧನಾ ಬುದ್ದಿ ಮಾಂಧ್ಯ ಮಕ್ಕಳ ಶಾಲೆಯ ಮತ್ತು ಮಹೇಶ್ವರಿ ಅಂಧ ಮಕ್ಕಳ ಶಾಲೆಯ ಮುಖ್ಯೋಪಾಧ್ಯಾಯರು ಹಾಜರಿದ್ದರು.

ಮಕ್ಕಳ ಅಭಿವೃದ್ಧಿ ಅಧಿಕಾರಿಗಳಾದ ಅರುಣ ನೀರಗಟ್ಟಿ ಇವರು ಸ್ವಾಗತಿಸಿದರು. ಕಾರ್ಯಕ್ರಮವನ್ನು ಉಪನಿದರ್ೇಶಕರ ಕಛೇರಿ ಮೇಲ್ವಿಚಾರಕಿ ಪಾರ್ವತಿ ಹೊನವಾಡ ನಿರೂಪಿಸಿದರು.  ಮಹಿಳಾ ಮತ್ತು. ಬಾಲಭವನ ಸಂಯೋಜಕರಾದ ಶ್ರೀಮತಿ ದ್ರಾಕ್ಷಾಯಿಣಿ ವಂದಿಸಿದರು.