ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಬಾಲ್ಯ ವಿವಾಹ ತಡೆ

ಧಾರವಾಡ 27: ಶುಕ್ರವಾರ ರಂದು ತಡ ರಾತ್ರಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಬಂದ ಮಾಹಿತಿಯ ಮೇರೆಗೆ ಏಪ್ರಿಲ್ 27 ರಂದು ಧಾರವಾಡ ತಾಲೂಕಿನ ಮನಸೂರ ಗ್ರಾಮದ ಕುರುಬರ ಕುಟುಂಬಕ್ಕೆ ಸೇರಿದ ಯುವಕನೊಂದಿಗೆ ನುಗ್ಗಿಕೇರಿ ಗ್ರಾಮದ ಅಪ್ರಾಪ್ತ ಬಾಲಕಿಯ ಬಾಲ್ಯ ವಿವಾಹವನ್ನು ಯುವಕನ ಮನೆಯ ಮುಂದೆ ನಿಶ್ಚಯಿಸಿದ್ದರ ಬಗ್ಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಬಂದ ಮಾಹಿತಿಯ ಮೇರೆಗೆ ಧಾರವಾಡ ಗ್ರಾಮೀಣದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ, ಧಾರವಾಡ ಗ್ರಾಮೀಣದ ಪೊಲೀಸ್ ಠಾಣೆಯ ಮಕ್ಕಳ ಕಲ್ಯಾಣ ಅಧಿಕಾರಿಗಳಿಗೆ ಬಾಲ್ಯ ವಿವಾಹ ನಾಳೆ ನಡೆಯುತ್ತಿರುವ ಕುರಿತು ಮಾಹಿತಿ ನೀಡಿ, ಬೆಳಿಗ್ಗೆ ಎಲ್ಲಾ ಇಲಾಖೆಯ ತಂಡದವರೊಂದಿಗೆ ಯುವಕನೊಂದಿಗೆ ನಿಶ್ಚಯಿಸಿದ ಬಾಲ್ಯ ವಿವಾಹ ಮಾಡುತ್ತಿದ್ದ ಯುವಕನ ಸ್ವಗೃಹಕ್ಕೆ ಭೇಟಿ ನೀಡಿ ಬಾಲ್ಯ ವಿವಾಹ ನಿಷೇಧ ಹಾಗೂ ಕನರ್ಾಟಕ ತಿದ್ದುಪಡೆ ಕಾಯ್ದೆ-2016 ರ ಕುರಿತು ನೆರೆದಿದ್ದ ಗ್ರಾಮದ ಹಿರಿಯರಿಗೆ ಮತ್ತು ಅಪ್ರಾಪ್ತ ಬಾಲಕಿಯ ತಂದೆ-ತಾಯಿಯರಿಗೆ ಮತ್ತು ಯುವಕನ ಕುಟುಂಬದವರಿಗೆ ಬಾಲ್ಯ ವಿವಾಹ ನಿಷೇಧ ಕಾಯ್ದೆಯ ಕುರಿತು ತಿಳಿಸಿ. ನಡೆಯುತ್ತಿದ್ದ ಬಾಲ್ಯ ವಿವಾಹವನ್ನು ತಡೆ ಹಿಡಿದು ಅವರಿಂದ ಬಾಲ್ಯ ವಿವಾಹ ಮಾಡುವುದಿಲ್ಲವೆಂದು ಮುಚ್ಚಳಿಕೆ ಪಡೆದು, ನಂತರ ದಿ.30 ರಂದು ಬಾಲಕರ ಸಕರ್ಾರಿ ಬಾಲಮಂದಿರ ಉಣಕಲ್, ಹುಬ್ಬಳ್ಳಿ ಸಂಸ್ಥೆಯಲ್ಲಿ ನಡೆಯುವ ಮಕ್ಕಳ ಕಲ್ಯಾಣ ಸಮಿತಿ ಸಭೆಗೆ ಹಾಜರಾಗಲು ನೋಟಿಸ್ ಜಾರಿ ಮಾಡಲಾಯಿತು. ಕಾಯರ್ಾಚರಣೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ ಅನ್ನಪೂರ್ಣ ಸಂಗಳದ,  ಸಿಬ್ಬಂದಿಗಳಾದ  ನೂರಜಹಾನ ಕಿಲ್ಲೇದಾರ, ಶ್ವೇತಾ ಕಿಲ್ಲೇದಾರ ಹಾಗೂ ಸಮಾಜಿಕ ಕಾರ್ಯಕರ್ತರಾದ ಕರೆಪ್ಪ ಕೌಜಲಗಿ, ಮಹಮ್ಮದ ಅಲಿ ತಹಶೀಲ್ದಾರ, ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸರು ಹಾಗೂ ಧಾರವಾಡ ಗ್ರಾಮೀಣದ ಶಿಶುಅಭಿವೃದ್ಧಿ ಯೋಜನಾಧಿಕಾರಿಗಳಾದ ಎನ್.ಎ ಪುಟ್ಟಪ್ಪನವರ ಹಾಗೂ ಶಿಶುಅಭಿವೃದ್ಧಿ ಯೋಜನೆಯ ಮೇಲ್ವಿಚಾರಕಿಯಾದ ರೇಣುಕಾ ಅಸುಂಡಿ, ಬನಶಂಕರಿ ಹಾಗೂ ಮನಸೂರ ಗ್ರಾಮ ಪಂಚಾಯತಿಯ ಪಿ.ಡಿ.ಓ ಅನಿತಾ ಹಿರೇಮಠ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.