ಚಿಕ್ಕಮಗಳೂರು, ಮೇ 24,ಲಾಕ್ ಡೌನ್ ಹಿನ್ನಲೆಯಲ್ಲಿ ಕಾಫಿನಾಡು ಚಿಕ್ಕಮಗಳೂರಲ್ಲಿಂದು ಕೆಎಸ್ಆರ್ಟಿಸಿ ಆಟೋ, ಜನ ಸಂಚಾರ ಇಲ್ಲದೆ ಜಿಲ್ಲೆಯಲ್ಲಿ ಬಿಕೋ ಎಂಬ ವಾತವರಣ ಉಂಟಾಗಿದೆ.ಆಟೋಗಳು, ಟ್ಯಾಕ್ಸಿ ಸೇರಿದಂತೆ ಖಾಸಗಿ ವಾಹನಗಳು ಸಹ ರಸ್ತೆಗಿಳಿದಿಲ್ಲ. ಜನರ ಓಡಾಟವೂ ಗಣನೀಯ ಪ್ರಮಾಣದಲ್ಲಿ ತಗ್ಗಿದೆ. ಔಷಧ ಅಂಗಡಿ ಕೆಲವು ತರಕಾರಿ, ಹೂ, ದಿನಸಿ ಅಂಗಡಿಗಳು ತೆರೆದಿವೆ. ಹೋಟೆಲ್ ಗಳಲ್ಲಿ ಕೇವಲ ಪಾರ್ಸೆಲ್ ಗೆ ಮಾತ್ರ ಅವಕಾಶ ಮಾಡಿ ಕೊಡಲಾಗಿದೆ. ಚಿಕನ್, ಮಟನ್, ಫಿಶ್ ಮಾರ್ಕೆಟ್ ಮಾತ್ರ ಎಂದಿನಂತೆ ತೆರೆದಿವೆ.