ಚಿಕ್ಕೋಡಿ ಜಿಲ್ಲಾಮಟ್ಟದ ಟೇಕ್ವಾಂಡೊ ಸ್ಪರ್ಧೆಗೆ ಚಾಲನೆ

ರಾಯಬಾಗ 06: ಮಕ್ಕಳು ದೈಹಿಕ ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ದೈಹಿಕ ಮತ್ತು ಮಾನಸಿಕವಾಗಿ ಸದೃಢವಾಗಲು ಸಾಧ್ಯವೆಂದು ಶಾಸಕ ಡಿ.ಎಮ್‌.ಐಹೊಳೆ ಹೇಳಿದರು.  

ಭಾನುವಾರ ಪಟ್ಟಣದ ಡಾ.ಬಾಬು ಜಗಜ್ಜೀವನ್‌ರಾಮ ಸಭಾಂಗಣದಲ್ಲಿ ಶಿಕ್ಷಣ ಇಲಾಖೆ ಮತ್ತು ಕರ್ನಾಟಕ ಟೇಕ್ವಾಂಡೋ ಅಸೋಸಿಯೇಶನ್ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 2024-25ನೇ ಸಾಲಿನ 14/17 ವಯೋಮಿತಿಯೋಳಗಿನ ಬಾಲಕ ಮತ್ತು ಬಾಲಕಿಯರ ಚಿಕ್ಕೋಡಿ ಜಿಲ್ಲಾಮಟ್ಟದ ಟೇಕ್ವಾಂಡೊ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದ ಅವರು, ಇಲ್ಲಿ ಭಾಗವಹಿಸುವ ಕ್ರೀಡಾಪಟುಗಳು ರಾಜ್ಯ ಮತ್ತ ರಾಷ್ಟ್ರ ಮಟ್ಟದಲ್ಲಿ ಗೆಲುವಿನೊಂದಿಗೆ ಚಿಕ್ಕೋಡಿ ಜಿಲ್ಲೆಗೆ ಕೀರ್ತಿ ತರಬೇಕೆಂದು ಹಾರೈಸಿದರು.  

ಚಿಕ್ಕೋಡಿ ಜಿಲ್ಲಾ ಟೇಕ್ವಾಂಡೊ ಅಸೋಸಿಯೇಷನ್ ಅಧ್ಯಕ್ಷ ವಿಜಯ ಭಜಂತ್ರಿ, ಬಬನ ನಿರ್ಮಳೆ, ಪ್ರಭಾಕರ ಶೇಡಬಾಳೆ, ಜಯದೀಪ ದೇಸಾಯಿ, ಮಹೇಶ ಫರಾಡೇಕರ, ವೈ.ಬಿ.ಹಂಪಿ, ವಿ.ಡಿ.ಉಪಾಧ್ಯೆ, ಸದಾಶಿವ ಘೋರೆ​‍್ಡ, ಸಚೀನ ನಾಯಿಕವಾಡಿ, ಗುರುರಾಜ ನಾಯಿಕವಾಡಿ, ಎಮ್‌.ಎಮ್‌.ಕಾಂಬಳೆ, ಎಮ್‌.ವಿ.ಬಂಡಗರ, ಯುವರಾಜ ನಾಯಿಕವಾಡಿ, ಪುನೀತ ನಾಯಿಕವಾಡಿ ಸೇರಿ ಕ್ರೀಡಾಪಟುಗಳು ಇದ್ದರು.