ಚಿಕ್ಕೋಡಿ ಬಂದ್ ಸಂಪೂರ್ಣ ಯಶಸ್ವಿ

ಚಿಕ್ಕೋಡಿ 14: ಚಿಕ್ಕೋಡಿ ಜಿಲ್ಲೆಯಾಗಬೇಕೆಂಬ ಆಗ್ರಹ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಶುಕ್ರವಾರ ಜಿಲ್ಲಾ ಹೋರಾಟ ಸಮಿತಿ ವಿವಿಧ ಸಂಘಟಣೆಗಳಿಂದ ಕರೆ ನೀಡಿದ ಚಿಕ್ಕೋಡಿ ಬಂದ್ ಸಂಪೂರ್ಣ ಯಶಸ್ವಿಯಾಗಿದೆ.

ಪಟ್ಟಣದ ಬಸವ ಸರ್ಕಲದಲ್ಲಿ ಸಂಕೇಶ್ವರ-ವಿಜಯಪೂರ, ನಿಪ್ಪಾಣಿ-ಮಹಾಲಿಂಗಪೂರ ರಾಜ್ಯ ಹೆದ್ದಾರಿಯನ್ನು ಸುಮಾರು ಮೂರು ಗಂಟೆಗಳ ಕಾಲ ಬಂದ್ ಮಾಡಿ ಬೃಹತ್ ಪ್ರತಿಭಟನೆ ನಡೆಸುವ ಮೂಲಕ ರಾಜ್ಯ ಸಕರ್ಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಮುಖಂಡ ಜಗದೀಶ ಕವಟಗಿಮಠ ಮಾತನಾಡಿ, ಚಿಕ್ಕೋಡಿ ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕೆಂದು ಕಳೆದ 21 ವರ್ಷಗಳಿಂದ ನಿರಂತರ ಹೋರಾಟ ಮಾಡಲಾಗುತ್ತಿದೆ. ಆದರೂ ಸಹ ರಾಜ್ಯ ಸಕರ್ಾರ ಜಿಲ್ಲೆಯನ್ನಾಗಿ ಘೋಷಣೆ ಮಾಡದೇ ಇರುವುದು ದುರದೃಷ್ಟಕರ. ಇಲ್ಲಿಯವರಿಗೆ ಶಾಂತಿಯುತ ಹೋರಾಟ ನಡೆಸಿ ಮನವಿ ಸಲ್ಲಿಸಲಾಗಿತ್ತು. ಆದರೆ ಇನ್ನ ಮೇಲೆ ಉಗ್ರ ಹೋರಾಟ ಮಾಡುವ ನಿಧರ್ಾರ ತೆಗೆದುಕೊಳ್ಳುವ ಮುನ್ನವೆ ಸಕರ್ಾರ ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕೆಂದು ಒತ್ತಾಯಿಸಿದರು.

ಜಿಲ್ಲಾ ಹೋರಾಟ ಸಮಿತಿ ಮುಖಂಡ ಬಿ.ಆರ್.ಸಂಗಪ್ಪಗೋಳ ಮಾತನಾಡಿ, ಚಿಕ್ಕೋಡಿಯನ್ನು ಜಿಲ್ಲೆಯನ್ನಾಗಿ ಮಾಡಲು ಹಿಂದಿನ ಮುಖ್ಯಮಂತ್ರಿ ಒಲುವು ವ್ಯಕ್ತಪಡಿಸಿದ್ದರು. ಆದರೆ ನಮ್ಮ ಭಾಗದ ನಾಯಕರು  ಸಮರ್ಥವಾಗಿ ಬಳಕೆ ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದು, ಈಗಲಾದರೂ ಮುಖ್ಯಮಂತ್ರಿ ಜೊತೆ ಮಾತುಕತೆ ನಡೆಸಿ ಜಿಲ್ಲಾ ಘೋಷಣೆ ಮಾಡಬೇಕೆಂದು ಅಕ್ರೋಶ ವ್ಯಕ್ತಪಡಿಸಿದರು.

ಮಾಜಿ ಶಾಸಕ ಬಾಳಾಸಾಹೇಬ ವಡ್ಡರ ಮಾತನಾಡಿ, ಚಿಕ್ಕೋಡಿ ಪ್ರತ್ಯೇಕ ಜಿಲ್ಲೆ ರಚನೆ ಹೋರಾಟಕ್ಕೆ ಕಳೆದ 21 ವರ್ಷಗಳಿಂದ ಜೀವಂತವಾಗಿದೆ. ಈ ಹಿಂದೆ ಜೆ.ಎಚ್.ಪಟೇಲ್ ಅವರು ಚಿಕ್ಕೋಡಿ ಮತ್ತು ಗೋಕಾಕ ಜಿಲ್ಲೆಗಳ ರಚನೆಗೆ ನಿಧರ್ಾರ ತೆಗೆದುಕೊಂಡರು. ಆದರೆ, ಕೊನೆಕ್ಷಣದಲ್ಲಿ ಚಿಕ್ಕೋಡಿ ಜಿಲ್ಲೆ ಘೋಷಣೆ ಕೈ ಬಿಟ್ಟಿದ್ದರು. ಅಂದಿನಿಂದ ಇಂದಿನವರಿಗೂ ಹೋರಾಟ ಅಚಲವಿದ್ದು, ಈ ಹಿಂದೆ ಹೋರಾಟ ಮಾಡುವ ವೇಳೆಯಲ್ಲಿ ನಾನು ಐದು ದಿನ ಉಪವಾಸ ಮಾಡಿ ಸಕರ್ಾರದ ವಿರುದ್ಧ ಆಗ್ರಹಿಸಲಾಗಿತ್ತು. ಈಗಲಾದರೂ ಸಂಸದರು ಜಿಲ್ಲಾ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದರು.

 ಚಿಂಚಣಿ ಅಲ್ಲಮಪ್ರಭು ಸ್ವಾಮೀಜಿ, ಚರಮೂತರ್ಿಮಠದ ಸಂಪಾದನ ಸ್ವಾಮೀಜಿ, ಬಸವಪ್ರಸಾದ ಜೊಲ್ಲೆ, ಕನರ್ಾಟಕ ರಸ್ತೆ ಅಭಿವೃದ್ಧಿ ನಿಗಮ ಮಾಜಿ ಉಪಾಧ್ಯಕ್ಷ ಮಹಾವೀರ ಮೋಹಿತೆ, ಜಿಲ್ಲಾ ಹೋರಾಟ ಸಮಿತಿ ಉಪಾಧ್ಯಕ್ಷ ಸಂಜು ಬಡಿಗೇರ, ಮಾಜಿ ಶಾಸಕ ದತ್ತು ಹಕ್ಯಾಗೋಳ, ರೈತ ಮುಖಂಡ ತ್ಯಾಗರಾಜ ಕದಂ, ಸತೀಶ ಅಪ್ಪಾಜಿಗೋಳ, ಪ್ರೊ,ಎಸ್.ವೈ.ಹಂಜಿ, ಬಿ.ಎಂ. ಸಂಗ್ರೊಳ್ಳೆ, ರಾಮಾ ಮಾನೆ, ಸಂಜು ಕವಟಗಿಮಠ, ಚಂದ್ರಕಾಂತ ಹುಕ್ಕೇರಿ, ನರೇಂದ್ರ ನೇಲರ್ೆಕರ, ಮಲ್ಲಿಕಾಜರ್ುನ ಪಾಟೀಲ, ಬಿ.ಎ.ಪಾಟೀಲ, ಶ್ರೀನಾಥ ಘಟ್ಟಿ, ಮುಂತಾದವರು ಉಪಸ್ಥಿತರಿದ್ದರು.

ಸಂಚಾರ ಸಂಪೂರ್ಣ ಬಂದ್:  ಜಿಲ್ಲಾ ಹೋರಾಟ ಸಮಿತಿ ಜಿಲ್ಲಾ ಘೋಷನೆಗೆ ಕರೆ ನೀಡಿದ್ದ ಚಿಕ್ಕೋಡಿ ಬಂದ್ ಹಿನ್ನಲೆಯಲ್ಲಿ ಬಸ್, ಟೆಂಪು, ಲಾರಿ ಮುಂತಾದ ವಾಹನಗಳ ಸಂಚಾರ ಸಂಪೂರ್ಣ ಬಂದ ಇದ್ದವು. ಪ್ರತಿದಿನ ರಸ್ತೆಗಳೆಲ್ಲ ವಾಹನಗಳ ಸಂಚಾರದಿಂದ ಗಿಜುಗುಡುತ್ತಿದ್ದವು. ಆದರೆ ಶುಕ್ರವಾರ ರಸ್ತೆಗಳಲ್ಲಿ ವಾಹನಗಳು ಇಲ್ಲದೆ ಬಿಕೋ ಎನ್ನುತ್ತಿತ್ತು. ಬೇರೆ ಬೇರೆ ಗ್ರಾಮಗಳಿಗೆ ತೆರಳಬೇಕಿದ್ದ ಪ್ರಯಾಣಿಕರು ಬಸ್ ಇಲ್ಲದೆ ಪರದಾಟ ಆರಂಭಿಸಿದರು.