ರೈತರ ಹೆಸರಿನಲ್ಲಿ ಪ್ರಮಾಣ ಮಾಡಿದ ಮುಖ್ಯಮಂತ್ರಿಗಳು, ರೈತರ ಹಿತಕಾಪಾಡಿ

ಲೋಕದರ್ಶನವರದಿ

ರಾಣೆಬೆನ್ನೂರ30: ರಾಜ್ಯ ಸಕರ್ಾರವು 1961-79,ಎ,ಬಿ ಭೂ ಕಾಯ್ದೆಯನ್ನು ತಿದ್ದುಪಡಿ ತರಲು ಹೊರಟಿರುವುದನ್ನು ಖಂಡಿಸಿದ ಉತ್ತರ ಕನರ್ಾಟಕ ಪ್ರದೇಶ ರೈತ ಹಾಗೂ ರೈತ ಕಾಮರ್ಿಕರ ಸಂಘಟನೆಯ ನೂರಾರು ರೈತರು ಸೋಮವಾರ ನಗರದಲ್ಲಿ ಭಾರಿ ಪ್ರತಿಭಟನೆ ನಡೆಸಿ ತಹಶೀಲ್ದಾರ ಮೂಲಕ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಮನವಿ ಸಲ್ಲಿಸಿ ಈ ಕಾಯ್ದೆ ಜಾರಿಗೆ ತರಲು ಕ್ರಮ ಕೈಗೊಳ್ಳಬಾರದು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯಧ್ಯಕ್ಷ ಬಸವರಾಜ ಬೇವಿನಹಳ್ಳಿ ಅವರು ಮುಖ್ಯಮಂತ್ರಿಗಳು ಈ ನಾಡಿನ ಅನ್ನದಾತರ ಹೆಸರಿನಲ್ಲಿ ಪ್ರಮಾಣ ಮಾಡಿ ಅಧಿಕಾರವನ್ನು ಏರಿದ್ದಾರೆ.   ಆದರೆ, ರೈತರ ಭೂಮಿಯನ್ನು ಕಾಯ್ದೆಗೊಳಪಡಿಸಿ ತಿದ್ದುಪಡಿ ಮಾಡಲು ಹೊರಟಿದ್ದಾರೆ.  ಇದು ಅನ್ನದಾತರಿಗೆ ಮಾಡುವ ಬಹುದೊಡ್ಡ ಅಘಾತವಾಗುತ್ತದೆ.   ನಿಜವಾದ ರೈತರ ಮಗ ಮುಖ್ಯಮಂತ್ರಿಗಳು ರೈತರಿಗೆ ಅನ್ಯಾಯ ಮಾಡಿದರೆ, ಪ್ರಮಾಣ ವಚನ ಸ್ವೀಕರಿಸಿದ್ದಕ್ಕೆ ಬೆಲೆ ಇದೆಯೇ ಎಂದು ಬಲವಾಗಿ ಪ್ರಶ್ನಿಸಿದ ಬೇವಿನಹಳ್ಳಿ ಅವರು ಕೂಡಲೇ ಈ ಕಾಯ್ದೆಯನ್ನು ಜಾರಿಗೆ ತರುವುದನ್ನು ತಡೆಹಿಡಿಯಬೇಕು ಎಂದು ಆಗ್ರಹಿಸಿದರು.

ಪ್ರಸ್ತುತ ಜಾರಿಗೆ ತರಲು ಹೊರಟಿರುವ ಕಾಯ್ದೆಯಿಂದಾಗಿ ತಲ-ತಲಾಂತರದಿಂದ ಈ ನಾಡಿನ ಮತ್ತು ದೇಶದ ಪ್ರತಿಯೊಬ್ಬ ನಾಗರೀಕರಿಗೂ ಅನ್ನ ನೀಡಿದ ಈ ಭೂಮಿ ಬಲಾಡ್ಯವುಳ್ಳವರ ಪಾಲಾದರೆ ಆಹಾರ ಭದ್ರತೆಗೆ ಸಂಪೂರ್ಣ ಧಕ್ಕೆಯಾಗಲಿದೆ ಹಣವುಳ್ಳವರ ಕೈಗೆ ಭೂಮಿ ಸಿಕ್ಕು ಅದು ಲಾಭದ ಮಾರಾಟದ ವಸ್ತುವಾಗಿ ಜನಸಾಮಾನ್ಯರ ಬದುಕಿಗೆ ಮಾರಕವಾಗಲಿದೆ ಎಂದ ಅವರು ಇದರಿಂದ ಸಣ್ಣ ರೈತರಿಗೆ ವ್ಯವಸಾಯ ಮಾಡಲು ಯಾವುದೇ ಭೂಮಿ ಇರುವುದಿಲ್ಲ.   ಬಂಡವಾಳ ಶಾಹಿಗಳ ಕೈ ಪಾಲಾಗುವುದನ್ನು ತಪ್ಪಿಸಿ ರೈತರ ಹಿತಾಶಕ್ತಿಯನ್ನು ಕಾಯಲು ಮುಂದಾಗಬೇಕು ಎಂದು ಮನವಿ ಮಾಡಿದರು.

ತಾಲೂಕಾಧ್ಯಕ್ಷ ಕೃಷ್ಣಮೂತರ್ಿ ಲಮಾಣಿ ಮಾತನಾಡಿ ಈ ಕಾಯ್ದೆ ಜಾರಿಯಾದರೆ ಬಂಡವಾಳ ಶಾಹಿಗಳಿಗೆ ಮುಕ್ತ ಮಾರುಕಟ್ಟೆ ಅವಕಾಶ ಮಾಡಿಕೊಟ್ಟಂತಾಗುತ್ತದೆ.  ಸಣ್ಣ ರೈತರು ದುಡಿಯುವ ಕೂಲಿಕಾಮರ್ಿಕರು ಮತ್ತು ಕೃಷಿ ಕಾಮರ್ಿಕರಿಗೆ ಬಹಳಷ್ಟು ತೊಂದರೆಯಾಗುತ್ತಲಿದೆ. ಆಹಾರ ಉತ್ಪಾದನೆ ಕಡಿಮೆಯಾಗಿ ಅನ್ನ ನೀರಿಗೆ ಹಾಹಾಕಾರ ಎದುರಿಸಬೇಕಾಗುತ್ತದೆ ಸಮಸ್ಯೆಯಾಗುವ ಮುನ್ನ ಎಚ್ಚೆತ್ತುಕೊಂಡು ಸಕರ್ಾರ ಈ ಕಾಯ್ದೆ ಜಾರಿಗೆ ತರದಂತೆ ಜಾಗೃತೆ ವಹಿಸಿ ರೈತರ ಬದುಕನ್ನು ಕಟ್ಟಿಕೊಡಬೇಕು ಎಂದ ಅವರು ಜಮೀನು ಕೃಷಿ ಉದ್ದೇಶಕ್ಕಾಗಿಯೇ ಇರಬೇಕೇ ಹೊರತು ವ್ಯಾಪಾರಕ್ಕಲ್ಲ ಎನ್ನುವುದನ್ನು ಮುಖ್ಯಮಂತ್ರಿಗಳು ಕಾನೂನಿನ ಆಶಯಗಳನ್ನು ಅರ್ಥಮಾಡಿಕೊಳ್ಳಬೇಕು ಎಂದರು.

1961ರ ನಂತರ  70ವರ್ಷಗಳ ಹೋರಾಟದ ಮೂಲಕ ಕಾನೂನು ರೂಪಿಸಿರುವುದನ್ನು ಎಲ್ಲಾ ಒಳಿತುಗಳನ್ನು  ನಾಶ ಮಾಡಿದಂತಾಗುತ್ತದೆ.   ಭೂ ಸುಧಾರಣಾ ಕಾಯ್ದೆಯ 79(ಎ) ಮತ್ತು 79(ಬಿ) ಸೆಕ್ಷನ್ಗಳು ಇಲ್ಲವಾದರೆ, ಯಾವ ರಕ್ಷಣೆಯೂ ಉಳಿಯುವುದಿಲ್ಲ.  ಮೊದಲು ಕೃಷಿಯೇ ಆಗಿ ಉಳಿಯುವುದಿಲ್ಲ.  ಅದು ಉದ್ಯಮವಾಗುತ್ತದೆ.  

ಕೈಯಲ್ಲಿ ಇದ್ದದ್ದನ್ನು ಕಳೆದುಕೊಳ್ಳುವ ಸ್ಥಾನದಲ್ಲಿ  ಕೃಷಿಕ ನಿಂತಿರುತ್ತಾನೆ.  ರೈತರ ಒಪ್ಪಿಗೆ ಇದ್ದರೇ ಮಾತ್ರ ಭೂಮಿ ಖರೀದಿಗೆ ಅನುಮತಿ ನೀಡಬೇಕು.  ಖರೀದಿಸಿದವನು ಕಡ್ಡಾಯವಾಗಿ ಕೃಷಿ ಮಾಡಲೇಬೇಕು.  ಕೃಷಿ ಸಚಿವರು ಸ್ವತ: ರೈತರಾಗಿದ್ದು, ಕಾಯ್ದೆಯಿಂದಾಗುವ ಲಾಭ ನಷ್ಟಗಳೇನು ಎನ್ನುವುದನ್ನು ಅರ್ಥಮಾಡಿಕೊಂಡು ಮುಖ್ಯಮಂತ್ರಿಗಳೊಂದಿಗೆ ಸಮಾಲೋಚಿಸಿ ರದ್ದುಗೊಳಿಸಬೇಕು ಎಂದು ಕೃಷ್ಣಮೂತರ್ಿ ಒತ್ತಾಯಿಸಿದರು. 

ಮನವಿ ಸಲ್ಲಿಕೆ ಮುಂಚೂಣಿಯಲ್ಲಿ ರೈತಮುಖಂಡರಾದ ಕೃಷ್ಣಪ್ಪ ಭೀಮಪ್ಪ ಚವ್ಹಾಣ್, ಚಂದ್ರಪ್ಪ ಕಾಳಪ್ಪನವರ, ದಯಾಲಾಲ್ ಸಂಘವಿ, ಪ್ರಶಾಂತ ಬಿಸಲಹಳ್ಳಿ, ಹರಳಹಳ್ಳಿ, ಲೀಲಾವತಿ ಹೊಸಹಳ್ಳಿ, ದೇವರಾಜ ಚವ್ಹಾಣ, ಶಿವಾನಂದ ಹೊಸಮನಿ, ರಮೇಶ್ ಹಿರೇತನದ, ಎಚ್.ಟಿ.ಅರಳಿಕಟ್ಟಿ, ಜೆ.ಎಸ್.ನಗಾವತ್, ವೀರೂಪಾಕ್ಷಪ್ಪ ಮೇಡ್ಲೇರಿ, ನಾಗರಾಜ ಚಳಗೇರಿ, ವೆಂಕಟೇಶ್ ಹೊಸಮನಿ, ಬಿ.ನಾಗರಾಜ, ಮಂಜಣ್ಣ ವಡ್ಡರ ಸೇರಿದಂತೆ ತಾಲೂಕಿನ ಮತ್ತು ಜಿಲ್ಲೆಯ ಗ್ರಾಮಾಂತರ ಪ್ರದೇಶದ ನೂರಾರು ರೈತರು, ಮುಖಂಡರು ಪಾಲ್ಗೊಂಡಿದ್ದರು.