ತಿರುಮಲ, ಆಗಸ್ಟ್ 25 ಆಂಧ್ರಪ್ರದೇಶದ ಮುಖ್ಯ ಕಾರ್ಯದರ್ಶಿ ಎಲ್.ವಿ.ಸುಬ್ರಮಣ್ಯಂ ಅವರು ಭಾನುವಾರ ತಿಪರತಿ ವೆಂಕಟೇಶ್ವರ ಸ್ವಾಮಿಗೆ ಪ್ರಾರ್ಥನೆ, ಪೂಜೆ ಸಲ್ಲಿಸಿದರು. ನಂತರ ಅವರಿಗೆ ದೇವಾಲಯದ ಒಳಗಿನ ರಂಗನಾಯಕ ಮಂಟಪದಲ್ಲಿ ವೇದ ಪಂಡಿತರು ಆಶಿರ್ವಾದ ನೀಡಿದರು. ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಕಾರ್ಯನಿರ್ವಾಹಕ ಅಧಿಕಾರಿ ಅನಿಲ್ ಕುಮಾರ್ ಸಿಂಘಾಲ್ ಮತ್ತು ತಿರುಮಲ ವಿಶೇಷ ಅಧಿಕಾರಿ ಎ.ವಿ.ಧರ್ಮ ರೆಡ್ಡಿ ಅವರು ದೇವರ ಭಾವಚಿತ್ರ ಮತ್ತು ತೀರ್ಥ ಪ್ರಸಾದವನ್ನು ಸುಬ್ರಮಣ್ಯಂ ಅವರಿಗೆ ನೀಡಿದರು.