ನವದೆಹಲಿ, ಡಿ 23, ಜಾರ್ಖಂಡ್
ಚುನಾವಣಾ ಇತಿಹಾಸದಲ್ಲಿ ಈವರೆಗೆ ಯಾವ ಮುಖ್ಯಮಂತ್ರಿಯೂ
ಎರಡನೇ ಭಾರಿ ಆಯ್ಕೆಯಾಗಿಲ್ಲ.ಈ ಹಿನ್ನೆಲೆಯಲ್ಲಿ ಹಾಲಿ ಮುಖ್ಯಮಂತ್ರಿ ರಘುಬರ್ ದಾಸ್ ಮತ್ತೆ ಆಯ್ಕೆಯಾಗುವ
ಮೂಲಕ ಹೊಸ ದಾಖಲೆ ಬರೆಯಲಿದ್ದಾರೆಯೇ? ಎಂಬುದು ಇನ್ನೂ ಕೆಲವೇ ಗಂಟೆಗಳ ಅವಧಿಯಲ್ಲಿ ಬಹಿರಂಗವಾಗಲಿದೆ. ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿಗೆ ಎರಡನೇ
ಬಾರಿ ಗದ್ದುಗೆ ಏರಲು ಮತದಾರರು ಅವಕಾಶ ಮಾಡಿಕೊಟ್ಟಿಲ್ಲ
. 2014ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ರಘುಬರ್ ದಾಸ್ ಜೇಮ್ ಷೆಡ್ ಪುರ್ ಪೂರ್ವ ವಿಧಾನಸಭಾ ಕ್ಷೇತ್ರದಲ್ಲಿ 70 ಸಾವಿರ ಮತಗಳ
ಅಂತರದಿಂದ ಗೆಲುವು ಸಾಧಿಸಿದ್ದರು.2000ನೇ ಸಾಲಿನಲ್ಲಿ
ಜಾರ್ಖಂಡ್ ಪ್ರತ್ಯೇಕ ರಾಜ್ಯವಾಗಿ ರೂಪುಗೊಂಡ ನಂತರ ಈವರೆಗೆ
ಮೂರು ವಿಧಾನಸಭಾ ಚುನಾವಣೆಗಳನ್ನು ಕಂಡಿದೆ. ಜಾರ್ಖಂಡ್ ರಾಜ್ಯ ರಾಜಕಾರಣದಲ್ಲಿ ಈವರೆಗೆ ಆರು
ಮಂದಿ ಮುಖ್ಯಮಂತ್ರಿಗಳಾಗಿದ್ದಾರೆ. ಬಾಬುಲಾಲ್ ಮರಾಂಡಿ, ಅರ್ಜುನ್ ಮುಂಡಾ, ಶಿಬು ಸೋರೆನ್, ಮಧು ಕೋಡಾ,
ಹೇಮಂತ್ ಸೋರೆನ್ ಹಾಗೂ ರಘಬರ್ ದಾಸ್ ಮುಖ್ಯಮಂತ್ರಿ ಗಾದಿಗೆ ಏರಿದ್ದಾರೆ. 2019ರಲ್ಲಿ ಜಾರ್ಖಂಡ್ ರಾಜ್ಯದಲ್ಲಿ
4ನೇ ವಿಧಾನಸಭಾ ಚುನಾವಣೆ ನಡೆಯುತ್ತಿದೆ. 2000ನೇ ನವೆಂಬರ್ 15ರಂದು ಬಿಹಾರ ರಾಜ್ಯದೊಳಗಿದ್ದ ಜಾರ್ಖಂಡ್ ಅನ್ನು ಪ್ರತ್ಯೇಕಿಸಿ ನೂತನ ರಾಜ್ಯವನ್ನಾಗಿ
ಮಾಡಲಾಗಿತ್ತು.2008ರ ಆಗಸ್ಟ್ 27ರಂದು ಮಧು ಕೋಡಾ ಜಾರ್ಖಂಡ್ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ
ನೀಡಿದ ನಂತರ ಜಾರ್ಖಂಡ್ ಮುಕ್ತಿ ಮೋರ್ಚಾದ ಮುಖ್ಯಸ್ಥ
ಶಿಬು ಸೋರೆನ್ ಮುಖ್ಯಮಂತ್ರಿಯಾಗಿದ್ದರು.