ಹಾವೇರಿ06: : ಜಿಲ್ಲೆಯ ಹಿರೇಕೆರೂರು ಹಾಗೂ ರಟ್ಟೀಹಳ್ಳಿ ತಾಲೂಕಿನ ಕೆರೆ ತುಂಬಿಸುವ ಯೋಜನೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಶಂಕುಸ್ಥಾಪನೆ ಹಾಗೂ ವಿವಿಧ ದೂದಿಹಳ್ಳಿ ಮೊರಾಜರ್ಿ ದೇಸಾಯಿ ನೂತನ ಕಟ್ಟಡದ ಲೋಕಾರ್ಪಣೆ ಸೇರಿದಂತೆ 330.94 ಕೋಟಿ ರೂ.ಗಳ ವಿವಿಧ ಕಾಮಗಾರಿಗಳಿಗೆ ಮಾ. 7 ರಂದು ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಶನಿವಾರ ಮಧ್ಯಾಹ್ನ 1 ಗಂಟೆಗೆ ಹಿರೇಕೆರೂರು ತಾಲೂಕು ದೂದಿಹಳ್ಳಿಯ "ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಮೊರಾಜರ್ಿ ದೇಸಾಯಿ ವಸತಿ ಶಾಲೆಯ ಆವರಣದಲ್ಲಿ ಮುಖ್ಯಮಂತ್ರಿಗಳಿಗೆ ನಡೆಯಲಿರುವ ಬೃಹತ್ ಸಮಾರಂಭದಲ್ಲಿ ತುಂಗಾ ಮೇಲ್ದಂಡೆ ರಟ್ಟೀಹಳ್ಳಿ ನೀರಾವರಿ ಇಲಾಖೆಯ ಯೋಜನೆಯಡಿ ಹಿರೇಕೆರೂರ ಮತ್ತು ರಟ್ಟೀಹಳ್ಳಿ ಭಾಗದ ಕೆರೆಗಳಿಗೆ ನೀರು ತುಂಬಿಸುವ ಸರ್ವಜ್ಞ ಏತ ನೀರಾವರಿ ಯೋಜನೆಗೆ ಚಾಲನೆ ನೀಡಲಿದ್ದಾರೆ ಎಂದು ಕ್ಷೇತ್ರದ ಶಾಸಕರು ಹಾಗೂ ರಾಜ್ಯ ಕೃಷಿ ಸಚಿವಾರದ ಬಿ.ಸಿ.ಪಾಟೀಲ ಅವರು ತಿಳಿಸಿದ್ದಾರೆ.
ಸಮಾಜ ಕಲ್ಯಾಣ ಇಲಾಖೆಯ ರಟ್ಟೀಹಳ್ಳಿ ಗ್ರಾಮದ ಇಂದಿರಾಗಾಂಧಿ ವಸತಿ ಶಾಲೆಯ ಸಮುಚ್ಛಯ ನಿಮರ್ಾಣ ಕಾಮಗಾರಿ ಶಿಲಾನ್ಯಾಸ, ಹಿರೇಕೆರೂರ ಪಟ್ಟಣದ ಬಸವೇಶ್ವರರ ನಗರದಲ್ಲಿ ಸಕರ್ಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯ ಕಟ್ಟಡ ನಿಮರ್ಾಣ ಶಿಲಾನ್ಯಾಸ, ಪರಿಶಿಷ್ಟ ಜಾತಿಯ ಕಾಲೋನಿಗಳಿಗ ಹೈಮಾಸ್ಕ್ ದೀಪಗಳ ಅಳವಡಿಕೆ 40 ಗ್ರಾಮಗಳ ಶಿಲಾನ್ಯಾಸ(ಪ್ರತಿ ಘಟಕಕ್ಕೆ 2.50 ಲಕ್ಷ ರಂತೆ) ಕೆ.ಆರ್.ಐ.ಇ.ಎಸ್ ದೂದಿಹಳ್ಳಿ ಗ್ರಾಮದ ಸಮೀಪದಲ್ಲಿರುವ ಕಿತ್ತೂರ ಚನ್ನಮ್ಮ ವಸತಿ ಶಾಲೆ ಹಾಗೂ ಮೊರಾಜರ್ಿ ದೇಸಾಯಿ ನೂತನ ಕಟ್ಟಡ ಉದ್ಘಾಟನೆ, ಸಣ್ಣ ನೀರಾವರಿ ಇಲಾಖೆಯ ಹಾವೇರಿ ಜಿಲ್ಲೆ ಹಿರೇಕೆರೂರ ತಾಲೂಕಿನ ಕುಮದ್ವತಿ ನದಿಗೆ ಅಡ್ಡಲಾಗಿ ಮಾಸೂರ ಹಿರೇಮೊರಬ ರಟ್ಟಿಹಳ್ಳಿ ಗ್ರಾಮದ ಹತ್ತಿರ ಬ್ಯಾರೇಜ್ ಸಹಿತ ಸೇತುವೆ ನಿಮರ್ಾಣ ಮತ್ತು ಹಿರೇಮಾದಾಪುರ ಗ್ರಾಮದ ಹತ್ತಿರ ಬ್ಯಾರೇಜ್ ನಿಮರ್ಾಣ ಕಾಮಗಾರಿ ಶಿಲಾನ್ಯಾಸ,ಹೆಸ್ಕಾಂ ಹಿರೇಕೆರೂರ 1192ಫಲಾನುಭವಿಗಳಿಗೆ ಅಕ್ರಮ ಸಕ್ರಮ ಯೋಜನೆಯಡಿ ವಿದ್ಯುತ್ ಸಂಪರ್ಕ ಕಲ್ಪಿಸುವುದು, ಕೃಷಿ ಇಲಾಖೆಯ ಬರಗಾಲ ತಡೆಗಟ್ಟುವಿಕೆ ಕಾರ್ಯಕ್ರಮದಡಿ ರಾಜ್ಯ ಜಲಾನಯನ ಅಭಿವೃದ್ಧಿ ಅಡಿಯಲ್ಲಿ 8ಗ್ರಾಮ ಪಂಚಾಯತ್ಗಳ 13ಗ್ರಾಮಗಳ 3133ಹೆಕ್ಟರ್ ಪ್ರದೇಶ ಅಭಿವೃದ್ಧಿ ಕಾರ್ಯಕ್ರಮ ಶಿಲಾನ್ಯಾಸ, ಹಿರೇಕೆರೂರ ಹಿಂದುಳಿದ ವರ್ಗಗಳ ಕಲ್ಯಾಣ ಅಡಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ಹಿರೇಕೆರೂರ ಶಿಲಾನ್ಯಾಸ, ಶಿಕ್ಷಣ ಇಲಾಖೆಯ ಹಿರೇಕೆರೂರ ರಟ್ಟಿಹಳ್ಳಿ ತಾಲೂಕಿನ 35ಪ್ರಾಥಮಿಕ ಶಾಲೆಗಳ ಕೊಠಡಿಗಳ ಶಿಲಾನ್ಯಾಸ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಿರೇಕೆರೂರ ಕಡೂರ,ಹಳ್ಳೂರ,ಸೋಮನಹಳ್ಳಿ ಬಸರಿಹಳ್ಳಿ ಗ್ರಾಮಗಳಲ್ಲಿ ಕುಡಿಯುವ ನೀರಿನ ಓವರ್ ಹೆಡ್ ಟ್ಯಾಂಕ್ ನಿಮರ್ಾಣ ಕಾಮಗಾರಿ ಶಿಲಾನ್ಯಾಸ, ಕೆಆರ್ಐಡಿಎಲ್ ಬಸರೀಹಳ್ಳಿ ಬಳಿ ಹೆಲಿಪ್ಯಾಡ್ ನಿರ್ಮಾಣ ಕಾಮಗಾರಿ ಶಿಲಾನ್ಯಾಸ,ತೋಟಗಾರಿಕರ ಕಚೇರಿ ಕಟ್ಟಡ ಶಿಲಾನ್ಯಾಸ, ನಿಮರ್ಿತಿ ಕೇಂದ್ರದ ವಾಲ್ಮೀಕಿ ಭವನ ಹಂಸಭಾವಿ ಹಾಗೂ ಮಾಸೂರ ಶಿಲಾನ್ಯಾಸ, ಹಿರೇಕೆರೂರ ತಾಲೂಕ ದೂದಿಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಕೊಠಡಿ ನಿರ್ಮಾಣ ಕಾಮಗಾರಿ, ಮತ್ತಿಹಲ್ಳಿ 2ಅಂಗನವಾಡಿ ನಿಮರ್ಾಣ ಕಾಮಗಾರಿ, ನೂಲಗೆರಿ ಗ್ರಾಮದ ಪದವಿಪೂರ್ವ ಕಾಲೇಜು ನೂತನ ಕಟ್ಟೆ ಉದ್ಘಾಟನೆ, ಮಾವಿನತೋಪುವ2ಕೇಂದ್ತ ಶಿತೀಕೊಂಡ ಯಲವದಹಳ್ಳಿ 2ನೇ ಕೇಂದ್ರ ಚಿಕ್ಕಯಡಚಿ 1ನೇ ಕೇಂದ್ರ ಮತ್ತು ಮಿನಿ ಅಂಗನವಾಡಿ ಕೇಂದ್ರ 5 ಅಂಗನವಾಡಿ ನೂತನ ಕಟ್ಟಡಗಳ ಉದ್ಘಾಟನೆ ಸಹ ನೆರವೇರಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ವಿವಿಧ ಸಚಿವರು ಭಾಗಿ: ಸಮಾರಂಭದಲ್ಲಿ ಉಪ ಮುಖ್ಯಮಂತ್ರಿಗಳು, ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಗೋವಿಂದ ಎಂ.ಕಾರಜೋಳ, ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಪ್ರಲ್ಹಾದ ಜೋಶಿ, ಗೃಹ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಸವರಾಜ ಬೊಮ್ಮಾಯಿ ಹಾಗೂ ಸಣ್ಣ ನೀರವಾರಿ ಮತ್ತು ಅಂತರ್ಜಲ ಅಭಿವೃದ್ಧಿ ಹಾಗೂ ಕಾನೂನು ಸಂಸದೀಯ ವ್ಯವಹಾರ ಸಚಿವರಾದ ಜೆ.ಸಿ.ಮಾಧುಸ್ವಾಮಿ ಅವರ ಘನ ಉಪಸ್ಥಿತಿಯಲ್ಲಿ ಕೃಷಿ ಸಚಿವರಾದ ಬಿ.ಸಿ.ಪಾಟೀಲ ಅವರು ಅಧ್ಯಕ್ಷತೆ ವಹಿಸುವರು.
ಮುಖ್ಯ ಅತಿಥಿಗಳಾಗಿ ಕನರ್ಾಟಕ ರಾಜ್ಯ ಉಗ್ರಾಣ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಯು.ಬಿ. ಬಣಕಾರ, ಜಿ.ಪಂ.ಅಧ್ಯಕ್ಷ ಬಸವನಗೌಡ ದೇಸಾಯಿ, ಲೋಕಸಭಾ ಸದಸ್ಯರಾದ ಶಿವಕುಮಾರ ಉದಾಸಿ, ವಿಧಾನ ಪರಿಷತ್ನ ಶಾಸಕರಾದ ಬಸವರಾಜ ಹೊರಟ್ಟಿ, ಶ್ರೀನಿವಾಸ ಮಾನೆ, ವಿಧಾನಸಭೆ ಶಾಸಕರಾದ ಸಿ.ಎಂ.ಉದಾಸಿ, ವಿಧಾನ ಪರಿಷತ್ನ ಶಾಸಕರಾದ ಎಸ್.ವಿ.ಸಂಕನೂರು, ಪ್ರದೀಪ ಶೆಟ್ಟರ್, ಶಾಸಕರಾದ ವಿರುಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಗುತ್ತೂರು(ಪೂಜಾರ), ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಗಿರಿಜಮ್ಮ ಬ್ಯಾಲದಹಳ್ಳಿ, ಹಿರೇಕೆರೂರು ತಾ.ಪಂ.ಅಧ್ಯಕ್ಷ ರಾಜು ಬಣಕಾರ ಹಾಗೂ ಚನ್ನಳ್ಳಿ ಗ್ರಾ.ಪಂ.ಅಧ್ಯಕ್ಷೆ ಶ್ರೀಮತಿ ಸಿದ್ದವ್ವ ವಡ್ಡರ ಸೇರಿದಂತೆ ವಿವಿಧ ಜನಪ್ರತಿನಿಧಿಗಳು, ಗಣ್ಯರು ಭಾಗವಹಿಸಲಿದ್ದಾರೆ