ಲೋಕದರ್ಶನ ವರದಿ
ಮುಗಳಖೋಡ: ಸುಕ್ಷೇತ್ರ ಮುಕ್ತಿಮಂದಿರ ಮುಗಳಖೋಡ ಶ್ರೀಮಠಕ್ಕೆ ಕನರ್ಾಟಕ ಸಕರ್ಾರದ ಘನತೆವೆತ್ತ ಮುಖ್ಯ ಮಂತ್ರಿಗಳಾದ ಬಿ. ಎಸ್ . ಯಡಿಯೂರಪ್ಪನವರು ಭೇಟಿ ನೀಡಿ ಸದ್ಗುರು ಯಲ್ಲಾಲಿಂಗ ಮಹಾಪ್ರಭುಗಳ ಕರ್ತೃ ಗದ್ದುಗೆಗೆ ನಮಸ್ಕರಿಸಿ ತದನಂತರ ಸಿದ್ಧರಾಮೇಶ್ವರ ಅನುಭವ ಮಂಟಪಕ್ಕೆ ತೆರಳಿ ಅನುಭವ ಮಂಟಪದಲ್ಲಿರುವ ಷಡಕ್ಷರಿ ಶಿವಯೋಗಿ ಸಿದ್ಧರಾಮೇಶ್ವರ ಮಹಾಸ್ವಾಮಿಗಳವರ ಮೂತರ್ಿಗೆ ಭಕ್ತಿ ಸಮಪರ್ಿಸಿ ಪರಮ ಪೂಜ್ಯ ಷ. ಶಿ. ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳವರಿಂದ ದಿವ್ಯ ಆಶೀವರ್ಾದ ಪಡೆದು ಈ ಸಂಧರ್ಭದಲ್ಲಿ ಮಾತನಾಡಿ ಪರಂ ಪೂಜ್ಯರ ದರ್ಶನ ದೊರೆತಿರುವುದು ನನ್ನ ಪುಣ್ಯ ಎಂದು ಭಾವಿಸಿದರು.
ಈ ಸಂಧರ್ಭದಲ್ಲಿ ಉಪ ಮುಖ್ಯಮಂತ್ರಿಗಳಾದ ಲಕ್ಷ್ಮಣ ಸವದಿ, ಗೋವಿಂದ ಕಾರಜೋಳ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾದ ಶಶಿಕಲಾ ಜೊಲ್ಲೆ, ಸಂಸದರಾದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಶಾಸಕರಾದ ಸನ್ಮಾನ್ಯ ಪಿ. ರಾಜೀವ, ಮಹದೇವಪ್ಪ ಯಾದವಾಡ, ದುಯರ್ೊಧನ ಐಹೊಳೆ ಉಪಸ್ತಿತರಿದ್ದರು.