ಚಿಕಾಗೋ, ಫೆ 11, ನಗರದಲ್ಲಿ ಶುಕ್ರವಾರ ಹಾಗೂ ಭಾನುವಾರದ ನಡುವೆ ನಡೆದಿರುವ ಗುಂಡಿನ ದಾಳಿ ಪ್ರಕರಣಗಳಲ್ಲಿ ಒಟ್ಟು 9 ಜನರು ಸಾವನ್ನಪ್ಪಿದ್ದು, 14 ಮಂದಿ ಗಾಯಗೊಂಡಿರುವ ವರದಿಯಾಗಿದೆ ನಗರದ ವಾರಾಂತ್ಯದ ಮೊದಲ ಮಾರಣಾಂತಿಕ ಶೂಟಿಂಗ್‌ನಲ್ಲಿ, ವೆಸ್ಟ್ ಮನ್ರೋದ 3300 ಬ್ಲಾಕ್‌ನಲ್ಲಿ ಶುಕ್ರವಾರ ರಾತ್ರಿ 39 ವರ್ಷದ ವ್ಯಕ್ತಿಯನ್ನು ಗುಂಡಿಕ್ಕಿ ಕೊಲ್ಲಲಾಯಿತು. ವಾಹನವೊಂದರಲ್ಲಿ ಕುಳಿತಿದ್ದ ಈತನ ಮೇಲೆ ಗುಂಡಿನ ಸುರಿಮಳೆಯಾಗಿದೆ. ಚಿಕಾಗೋದ ದಕ್ಷಿಣ ಭಾಗದಲ್ಲಿರುವ ಚೈನಾಟೌನ್‌ನಲ್ಲಿ ಭಾನುವಾರ ಮುಂಜಾನೆ ನಡೆದ ದರೋಡೆ ಸಂದರ್ಭದಲ್ಲಿ ಇಬ್ಬರು ವ್ಯಕ್ತಿಗಳನ್ನು ಗುಂಡಿಕ್ಕಿ ಕೊಂದಿದ್ದಾರೆ. ವ್ಯಕ್ತಿಯೊಬ್ಬ ದರೋಡೆಗೆ ಯತ್ನಿಸಿದಾಗ ಅದನ್ನು ತಡೆದ ಸಂದರ್ಭದಲ್ಲಿ ಈ ಘಟನೆ ಡೆದಿದೆ.
2019 ರ ಇದೇ ಅವಧಿಗೆ ಹೋಲಿಸಿದರೆ ಈ ವರ್ಷ 50 ನರಹತ್ಯೆಗಳು ನಡೆದಿವೆ, ಮತ್ತು 225 ಗುಂಡಿನ ದಾಳಿಯಿಂದ ಸಂತ್ರಸ್ತರಾಗಿದ್ದಾರೆ. ಈ ವರ್ಷದ ಬಲಿಪಶುಗಳಲ್ಲಿ 31 ಮಂದಿ ಮಕ್ಕಳು ಸೇರಿದ್ದರೆ, ಕಳೆದ ವರ್ಷ ಇದೇ ಅವಧಿಯಲ್ಲಿ 13 ಮಕ್ಕಳು ಬಲಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ಅಮೆರಿಕದ ಮೂರನೇ ಅತಿದೊಡ್ಡ ನಗರವಾದ ಚಿಕಾಗೊ, ಇತ್ತೀಚಿನ ವರ್ಷಗಳಲ್ಲಿ ನ್ಯೂಯಾರ್ಕ್ ಮತ್ತು ಲಾಸ್ ಏಂಜಲೀಸ್ ಹೆಚ್ಚು ಬಂದೂಕು ಸಂಬಂಧಿತ ಹಿಂಸಾಚಾರವನ್ನು ಕಂಡಿದೆ. ಹಿಂಸಾಚಾರವನ್ನು ನಿಯಂತ್ರಿಸಲು ನಗರವು ಎಲ್ಲ ಪ್ರಯತ್ನಗಳನ್ನು ಮಾಡಲು ಪ್ರಾರಂಭಿಸಿದ ನಂತರ 2017 ರಿಂದ ಪರಿಸ್ಥಿತಿ ಸುಧಾರಿಸಿದೆ.