ಕೊಪ್ಪಳ 23: ಇತ್ತೀಚೆಗೆ (ಸೆ.19) ನಡೆದ ಕೊಪ್ಪಳ ಜಿಲ್ಲಾ ಮಟ್ಟದ ಚದುರಂಗ ಸ್ಪಧರ್ೆಯಲ್ಲಿ ತಾಲ್ಲೂಕಿನ ಹನಕುಂಟಿ ಗ್ರಾಮದ ಹಿಂದುಳಿದ ವರ್ಗಗಳ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಒಂಬತ್ತು ವಿದ್ಯಾಥರ್ಿಗಳು ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಹಿಂದುಳಿದ ವರ್ಗಗಳ ಮೊರಾಜರ್ಿ ದೇಸಾಯಿ ವಸತಿ ಶಾಲೆ ಹನಕುಂಟಿ, ಈ ಶಾಲೆಯ ವಿದ್ಯಾಥರ್ಿಗಳಾದ ಪ್ರೌಢ ವಿಭಾಗದ ಪ್ರಭು ಪಲ್ಲೇದ, ಚಂದಾಲಿಂಗ, ಲಕ್ಷ್ಮೀ ಪಾಟೀಲ, ಭುವನೇಶ್ವರಿ, ಪವಿತ್ರ ಹಾಗೂ ಪ್ರಾಥಮಿಕ ವಿಭಾಗದ ಸಂತೋಷ, ವಿನೋದರೆಡ್ಡಿ, ಅಂಜಲಿ ಮತ್ತು ಶರಣಮ್ಮ, ಈ ವಿದ್ಯಾರ್ಥಿಗಳು ಜಿಲ್ಲಾಮಟ್ಟದ ಚದುರಂಗ ಸ್ಪಧರ್ೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಯೋಗಾಸನ ಸ್ಪಧರ್ೆಯಡಿ ಪ್ರಾಥಮಿಕ ವಿಭಾಗದಲ್ಲಿ ಪ್ರಿಯಾಂಕ ಹಾಗೂ ಭೂಮಿಕಾ ಎಂಬ ವಿದ್ಯಾಥರ್ಿನಿಯರು ಪ್ರಥಮ ಸ್ಥಾನ ಪಡೆದು ವಿಭಾಗಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾಥರ್ಿಗಳಿಗೆ ಈ ಸಾಧನೆಗೆ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಈರಪ್ಪ ಆಶಾಪುರ, ವಸತಿ ಶಾಲೆಯ ಪ್ರಾಂಶುಪಾಲರಾದ ಮಂಜುನಾಥ ಬೇಳೂರು, ದೈಹಿಕ ಶಿಕ್ಷಕ ಹಾಗೂ ಪ್ರಭಾರಿ ನಿಲಯ ಪಾಲಕ ಹನಮಂತಗೌಡ ಬಾದಾ ಸೇರಿದಂತೆ ಎಲ್ಲಾ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಅಭಿನಂಧಿಸಿ ಶುಭ ಹಾರಿಸಿದ್ದಾರೆ.