ಒಂದು ವಾದ ಅಥವಾ ವಿವಾದ ಹುಟ್ಟುವುದು ಎಲ್ಲಿಂದ. ಚಚರ್ೆ ಎನ್ನುವದು ಆದಾಗ. ಒಬ್ಬ ಮನುಷ್ಯನ ಹೇಳಿಕೆಯನ್ನು ಇನ್ನೊಬ್ಬ ಗಂಭೀರವಾಗಿ ತೆಗೆದುಕೊಂಡು ಅದರ ಬಗ್ಗೆ ವಿಶ್ಲೇಷಣೆಯನ್ನೋ ಅಥವಾ ಅದರಲ್ಲಿಯ ಅಪವಾದಗಳನ್ನೋ ಹುಡುಕಿ ತೆಗೆದು ಮತ್ತೆ ಎದುರಿಗಿಡಬೇಕು. ಅದು ವಿಷಯ ಸಮಂಜಸವೇ ಅಲ್ಲವೇ ಎನ್ನುವುದನ್ನು ಮತ್ತೊಬ್ಬ ಅಥವಾ ಮೊದಲು ಹೇಳಿಕೆಯನ್ನು ನೀಡಿದವನೇ ನಿರ್ಧರಿಸಲು ತೊಡಗುವುದು. ಹೀಗೆ ಎರಡು ಮುಖಗಳು ಎದುರು ಬದುರಾಗಿ ತಮ್ಮತಮ್ಮ ನಿಲುವನ್ನು ಬಿಟ್ಟುಕೊಡದೇ ಮಾತನಾಡುವುದು ವಾದ. ಆ ವಾದವೂ ಇನ್ನಷ್ಟು ರೆಕ್ಕೆ ಪುಕ್ಕ ಸೇರಿ ತಾರಕಕ್ಕೆ ಹೋಗುವುದು ವಿವಾದ.
ಪ್ರತಿಯೊಬ್ಬನಿಗೂ ತನ್ನ ಊರು, ತನ್ನ ಜನ, ತನ್ನ ಭಾಷೆ, ತನ್ನ ದೇಶ, ತನ್ನ ಸಂಸ್ಕೃತಿ ಹೀಗೆ ಎಲ್ಲದರಲ್ಲೂ ಒಂದು ಅಭಿಮಾನವಿರುತ್ತದೆ. ಆ ಅಭಿಮಾನಕ್ಕೆ ಪೆಟ್ಟು ತಗುಲಿದಾಗ ವಾದ, ಚಚರ್ೆ, ಭಿನ್ನಭಿಪ್ರಾಯದ ಜಗಳಗಳು ನಡೆಯುವುದು. ವಾದ ಅಥವಾ ಚಚರ್ೆ ನಡೆಸುವುದು ತಪ್ಪಲ್ಲ. ಅದೆಷ್ಟೋ ವಿಚಾರಗಳು ಇಂಥಹ ಸಂದರ್ಭದಲ್ಲಿ ಹೊರ ಬೀಳುವುದು. ಜ್ಞಾನ ಲಭಿಸುವುದೂ ಇದೆ. ಆ ವಾದ ಮಂಡನೆ ಸೌಹಾರ್ದಯುತವಾಗಿದ್ದಾಗ ಅಲ್ಲಿರುವ ವಾತಾವರಣ ಸಹಜವೇ ಎನ್ನಿಸುವುದು. ಹಾಗಾಗಿ ಒಂದು ಒಳ್ಳೆಯ ಚಚರ್ೆಗಳು ಆಗಾಗ ನಡೆಯುತ್ತಿರಬೇಕು.
ಆದರೆ ಇತ್ತಿತ್ತಲಾಗಿ ಈ ಚಚರ್ೆ ಎನ್ನುವದು ಒಂದು ರೀತಿ ಜಗಳವೇ ಆಗಿ ಬಿಡುತ್ತಿದೆ. ಒಟ್ಟಿನಲ್ಲಿ ತಾನೇ ಗೆಲ್ಲಬೇಕು ಎನ್ನುವ ಹಠ ಒಂದು ಕಡೆ. ತಾನು ಸೋತರೆ ತಾನು ವಹಿಸಿದ ವಿಷಯವೂ ಸೋತಂತೆ ಎಂದುಕೊಂಡಿದ್ದು ಒಂದು ಕಡೆ. ಹಾಗಾಗಿ ಯಾವುದೇ ವಾದ ವಿವಾದಗಳ ಚಚರ್ೆಯಾಗಲಿ ಅಲ್ಲಿ ಧರ್ಮ, ಜಾತಿ, ಹಣ, ರಾಜಕೀಯ ಇಂಥವುಗಳು ನುಸುಳಿ ಅದು ಜಗಳಕ್ಕೆ ತಿರುಗುವುದು ಕಾಣಿಸುತ್ತಿದೆ. ಇಂಥಹ ವಾದವು ಜಗಳವಾಗಿ ತಾತ್ಕಾಲಿಕವಾಗಿ ಗೆದ್ದು ಬಿಡಬಹುದು. ಆದರೆ ಅದೇ ಸತ್ಯವಾಗಿರುತ್ತದೆ ಎಂದು ಹೇಳಲು ಸಾಧ್ಯವಿಲ್ಲ.
ತಾನು ಗೆಲ್ಲಲೇ ಬೇಕು ಎನ್ನುವ ಹಠಕ್ಕೆ ಬಿದ್ದವರು ಮಾತಿನ ಹಿಡಿತವನ್ನು ತಪ್ಪಿ ಬಿಡುತ್ತಾರೆ. ಮಾತು ಅಶುದ್ಧವಾಗಿ ಕೈಕೈ ಮಿಲಾಯಿಸುವಲ್ಲಿಗೆ ಮುಟ್ಟುವುದಿದೆ. ಆಗೆಲ್ಲ ಅಲ್ಲಿ ಪಂಥಗಳು, ಪಂಗಡಗಳು ಹುಟ್ಟಿ ಅಲ್ಲೊಂದು ವಿವಾದ ಸೃಷ್ಟಿಯಾಗಿ ಬಿಡುವುದು. ಇದೆಲ್ಲ ಆಗುವುದರಿಂದ ಕ್ಷಣಿಕವಾಗಿ ಗೆಲುವು ಸಿಗುತ್ತದೆ. ಆದರೆ ತಮ್ಮೆದುರಿನ ವ್ಯಕ್ತಿಯನ್ನು ಮಾತ್ರ ಶಾಶ್ವತವಾಗಿ ಕಳೆದುಕೊಂಡಾಗಿರುತ್ತದೆ.
ಅಪಹಾಸ್ಯದಿಂದಲೋ, ಕೆಟ್ಟ ಅವಾಚ್ಯ ಶಬ್ಧ ಪ್ರಯೋಗದಿಂದಲೋ, ಅಥವಾ ದೈಹಿಕ ಯುದ್ಧಕ್ಕೆ ಸಿದ್ದರಾಗುವುದರಿಂದಲೋ ಚಚರ್ೆ ಗೆದ್ದಂತೆ ಆಗುವುದಿಲ್ಲ. ನಿಜವಾಗಿ ಅದು ಚಚರ್ೆಯ ಸೋಲಾಗುವುದು. ಒಂದು ಸ್ನೇಹವನ್ನು ಕಳೆದುಕೊಳ್ಳುವ ಮಟ್ಟಿಗೆ ಆ ಚಚರ್ೆ ಆಗುತ್ತಿದೆ ಎಂದಾದರೆ ಅಲ್ಲಿ ಸ್ವಾಸ್ಥ್ಯತೆ ಇಲ್ಲವೆಂದೆ ಅರ್ಥ. ಚಚರ್ೆ ಆಗಬೇಕಿರುವುದು ಒಂದು ವಿಷಯದ ಮೇಲೆ. ಆದರೆ ಈಗೀಗ ವಿಷಯಕ್ಕಿಂತ ವ್ಯಕ್ತಿ ಮತ್ತು ವ್ಯಕ್ತಿತ್ವವನ್ನು ಚಚರ್ೆಗೆ ಇಡಲಾಗುತ್ತಿದೆ. ಆ ಕಾರಣಕ್ಕಾಗಿಯೇ ಧರ್ಮ, ಜಾತಿ, ರಾಜಕೀಯಂಥವು ಅಡ್ಡ ಬಂದು ನಿಲ್ಲುವುದು. ಚಚರ್ೆಸುವ ಎದುರಾಳಿಯ ಮೇಲೆ ಹೇಗಾದರೂ ಮಾಡಿ ಅಪಹಾಸ್ಯವಾದರೂ ಸರಿ ಪೆಟ್ಟು ಕೊಡಬೇಕು. ಸ್ವಾಭಿಮಾನ ನಂಬಿಕೆಗಳಿಗೆ ಹೊಡೆತ ನೀಡಬೇಕು. ಅದರಿಂದ ವಾದ ಗೆಲ್ಲಬೇಕು ಇದುವೇ ಚಚರ್ೆ ಎನ್ನುವಂತಾಗಿದೆ.
ಸ್ನೇಹ ಪ್ರೀತಿ ಇವೆರಡನ್ನು ಮೀರಿದ್ದು ಜಗತ್ತಿನಲ್ಲಿ ಬೇರೆ ಯಾವುದೂ ಇಲ್ಲ. ಶತ್ರುವೂ ಸಹ ಸ್ನೇಹ ಮತ್ತು ಪ್ರೀತಿ ಎರಡು ಶಬ್ಧ ಎದುರಿಗೆ ಬಂದಾಗ ಕ್ಷಣಕಾಲವಾದರೂ ತಲ್ಲಣಿಸುತ್ತಾನೆ. ಹಾಗಿರುವಾಗ ಚಚರ್ೆಯ ವಿಷಯವನ್ನು ಮುಂದಿಟ್ಟುಕೊಂಡು ಉತ್ತಮ ಬಾಂಧವ್ಯವನ್ನು ಕಳೆದುಕೊಳ್ಳುವುದು ಯಾತಕ್ಕೆ. ದೇಶದೊಳಗೆ, ರಾಜ್ಯದೊಳಗೆ ಪಂಗಡಗಳನ್ನು ಹುಟ್ಟಿಸಿಕೊಳ್ಳುವುದು ಯಾತಕ್ಕೆ. ಭಾವನಾತ್ಮಕ ಸಂಬಂಧವನ್ನು ಚಚರ್ೆಯ ಒಳಗೆ ನುಸುಳಲು ಬಿಟ್ಟು ಅದನ್ನು ವಿತಂಡ ವಾದದೊಳಗೆ ಸಿಲುಕಿ ಗೆದ್ದು ಬಿಟ್ಟೆವು ಎಂದರೆ ಅದರಂತಹ ಮೂರ್ಖತನ ಬೇರೆ ಇಲ್ಲ.
ಯಾವುದೇ ರೀತಿಯ ಸಂಭಂಧವಾದರೂ ಅದು ಹಾಗೆ ಉಳಿಯಬೇಕು. ಆದರೆ ಚಚರ್ೆ ಆಗಬೇಕು. ಹಾಗೆ ಆಗಬೇಕೆಂದರೆ ಯಾವ ವಿಷಯವು ಅಲ್ಲಿ ಆಯ್ಕೆಯಾಗಿದೆ ಎಂಉ ತಿಳಿದುಕೊಳ್ಳಬೇಕು. ಆ ವಿಷಯದ ಬಗ್ಗೆ ಒಂದು ಕಲ್ಪನೆ ವಾದ ಮಾಡುವವನಿಗೆ ಇರಲೇ ಬೇಕು. ಆಗ ಮಾತ್ರ ವಿಷಯ ಬಿಟ್ಟು ಬೇರೆಯದು ಪ್ರವೇಶಿಸಲು ಅವಕಾಶ ಇರುವುದಿಲ್ಲ.
ಒಬ್ಬ ಅಲೋಪತಿ ವೈದ್ಯ. ಮತ್ತೊಬ್ಬ ಆಯುವರ್ೆದ ವೈದ್ಯ. ಇವರಿಬ್ಬರಲ್ಲಿ ಚಚರ್ೆ ಆರಂಭವಾಯಿತು. ಇಬ್ಬರೂ ತಮ್ಮತಮ್ಮ ವೈದ್ಯಕೀಯ ಲೋಕದಲ್ಲಿಯ ಸಾಧನೆಯನ್ನು ಹೇಳಿದರು. ಆನಂತರ ತಮ್ಮ ಎದುರಾಳಿಯ ವೈದ್ಯಕೀಯದಲ್ಲಿಯ ಬಾಧಕಗಳನ್ನು ಹೇಳತೊಡಗಿದರು. ಹಾಗೆ ಹೇಳುತ್ತಿರುವಾಗ ಅಲೋಪತಿಯ ವೈದ್ಯ ಹೇಳಿದ 'ಈ ಆಯುವರ್ೆದ ಈಗಿನವರಿಗೆ ಸರಿ ಹೊಂದುವುದಿಲ್ಲ. ಅದು ನಿಧಾನವಾಗಿ ತನ್ನ ಔಷಧ ಪರಿಣಾಮವನ್ನು ಬೀರುತ್ತದೆ ಎಂದು. ಅದಕ್ಕೆ ಆಯುವರ್ೆದ ವೈದ್ಯ ಹೇಳಿದ ಅಲೋಪತಿ ಎನ್ನುವದು ಜನರ ಜೀವದ ಜೊತೆ ಆಟ ಆಡುವುದೇ ಹೆಚ್ಚು ಎಂದು. ಈ ಎರಡು ಮಾತುಗಳು ಅಲ್ಲಿ ನಿಜವಾಗಿ ಅನವಶ್ಯಕವಾಗಿದ್ದವು. ಎರಡು ಔಷಧಗಳು ಹುಟ್ಟಿಕೊಂಡಿದ್ದು ಮನುಷ್ಯರ ಆರೋಗ್ಯವನ್ನು ವೃದ್ಧಿಗೊಳಿಸಲೆಂದು. ಇಲ್ಲಿ ತಾ ಹೆಚ್ಚು ಎನ್ನುವ ವಿಷಯವೇ ಹಾಸ್ಯಾಸ್ಪದ. ಹಾಗಿರುವಾಗ ರೋಗಿಯನ್ನು ತನ್ನ ವೈದ್ಯಕೀಯ ಚಿಕಿತ್ಸೆಯೇ ಗುಣ ಪಡಿಸುತ್ತದೆ ಎಂದು ವಾದ ಮಾಡುವುದರಲ್ಲಿ ಅರ್ಥವಿದೆಯೇ?
ಹೀಗೆ ಘನವಾದ ವಿಚಾರವೂ ಚಚರ್ೆ ಎನ್ನುವ ವಿಷಯವಾಗಿ ಅದು ಜನರಿಗೆ ವಾಕರಿಕೆ ಬರುವಂತೆ ವಿವಾದವಾಗಿ ಮುಕ್ತಾಯವಾದರೆ ಯಾರಿಗೂ ಲಾಭವಿಲ್ಲ. ವಿಷಯ ಜ್ಞಾನವೂ ಹೆಚ್ಚುವುದಿಲ್ಲ. ಸಂಬಂಧವೂ ಉಳಿದಿರುವುದಿಲ್ಲ. ಎಲ್ಲಿಯಾದರೂ ಮುಖ ಕಂಡರೆ ಬುಸುಗುಡಬೇಕು ಎನ್ನಿಸುತ್ತದೆ. ಯಾವುದೋ ವಿಷಯವನ್ನು ಇಟ್ಟುಕೊಂಡು ಹಳೆಯ ಚಚರ್ೆಗೆ ತಳುಕು ಹಾಕಿ ಅಲ್ಲಿಯೂ ರಾಡಿ ಎಬ್ಬಿಸಿ ಬಿಡುವುದು ಇದೆ.
ಹಾಗಾಗಿ ಚಚರ್ೆ ಎನ್ನುವದು ಕೇವಲ ವಾದವಲ್ಲ. ತಾಕರ್ಿಕ ವಾದಕ್ಕಿಂತಲೂ ವಿಸ್ಕೃತ ರೂಪವಾಗಿದೆ. ಸ್ವಪ್ರಮಾಣ ಸೂತ್ರ ಮತ್ತು ವಾಸ್ತವದಿಂದ ದೃಢತೆಯನ್ನು ಪರೀಕ್ಷಿಸುತ್ತದೆ. ಚಚರ್ಿಸಲ್ಪಡುವ ವಿಷಯ ಸೂಕ್ತವೋ, ವ್ಯಕ್ತಿಯೂ ಆ ವಿಷಯದ ವಾಗ್ಮೀಯೋ ಎನ್ನುವದು ಮುಖ್ಯವಾಗುತ್ತದೆ. ವಾಸ್ತವಿಕ ನೆಲೆಗಟ್ಟಿನ ಜೊತೆ ನಿಖರತೆಯು ಇದ್ದು ಪ್ರೇಕ್ಷರೆಡೆಗೆ ಸ್ವಲ್ಪ ಮಟ್ಟಿಗಿನ ಭಾವನಾತ್ಮಕ ಸೆಳೆತ ಇಟ್ಟುಕೊಳ್ಳುವುದು ಈ ಭಾಷಣದ ಪ್ರಮುಖ ಅಂಶಗಳು. ಸಾಮಾನ್ಯವಾಗಿ ಒಂದು ಪಕ್ಷವು ಇನ್ನೊಂದು ಪಕ್ಷದ ವಿರುದ್ಧ ವಾದ ಮಾಡುವಾಗಿನ ಚೌಕಟ್ಟು ಅರಿತಿರಬೇಕಾಗುತ್ತದೆ. ಅದು ಮಾಮರ್ಿಕವಾಗಿರುವುದರ ಜೊತೆಗೆ ಚತುರತೆಯಿಂದ ಕೂಡಿದ್ದರೆ ವಾದ ಗೆಲ್ಲುವುದು ಸುಲಭ.
ಚಚರ್ೆಗೆ ಕುಳಿತವರು ಕೇವಲ ತಮ್ಮ ನಂಬಿಕೆಯನ್ನು ಪ್ರದಶರ್ಿಸಬಾರದು. ಚಚರ್ೆ ವಾಸ್ತವವನ್ನು ಮಾತ್ರ ಹೊರಹಾಕ ಬೇಕು. ಆಗ ಮಾತ್ರ ಚಚರ್ೆಯ ಫಲ ಎರಡು ಪಕ್ಷದವರಿಗೂ ಪ್ರೇಕ್ಷಕವರ್ಗದವರಿಗೂ ಸರಳವಾಗಿ ಸಿಗುತ್ತದೆ. ಹಾಗೂ ವಿವಾದವೆಂಬ ಅವಾಂತರವೂ ಇರುವುದಿಲ್ಲ. ಮುಕ್ತ ಚಚರ್ೆಗಿಂತ ನಿಯಮಾವಳಿಯಲ್ಲಿ ಸಾಗುವ ಚಚರ್ೆಗೆ ಉತ್ತಮ ಫಲಿತಾಂಶ ದೊರೆಯುತ್ತದೆ. ಹಾಗೂ ಭವಿಷ್ಯತ್ತಿನ ಯಾವುದೋ ಒಂದು ಸೂತ್ರವೂ ನಿಮರ್ಾಣ ಆಗುವ ಸಾಧ್ಯತೆಯೂ ಇರುತ್ತದೆ.