ವಿವಿಐಪಿ ಕ್ಯಾಪ್ಟರ್ ಹಗರಣ ತ್ಯಾಗಿ ವಿರುದ್ಧ ಚಾಜರ್್ ಶೀಟ್

ನವದೆಹಲಿ 18: ವಿವಿಐಪಿ ಹೆಲಿಕಾಪ್ಟರ್ ಹಗರಣಕ್ಕೆ ಸಂಬಂಧಿಸಿದಂತೆ ವಾಯುಪಡೆ ಮಾಜಿ ಮುಖ್ಯಸ್ಥ ಏರ್ ಚೀಫ್ ಮಾಷರ್ೆಲ್ ಎಸ್.ಪಿ.ತ್ಯಾಗಿ ಸೇರಿದಂತೆ ಏಳು ಆರೋಪಿಗಳ ವಿರುದ್ಧ ಜಾರಿ ನಿದರ್ೆಶನಾಲಯ ಬುಧವಾರ ಪೂರಕ ಚಾಜರ್್ ಶೀಟ್ ಸಲ್ಲಿಸಿದೆ. 

ಎಸ್.ಪಿ.ತ್ಯಾಗಿ, ಅವರ ಇಬ್ಬರು ಸಹೋದರರ ವಿರುದ್ಧ, ವಕೀಲ ಗೌತಮ್ ಖೇತನ್ ಹಾಗೂ ಇಬ್ಬರು ಇಟಾಲಿಯನ್ ಮಧ್ಯವತರ್ಿಗಳ ವಿರುದ್ಧ ವಿಶೇಷ ನ್ಯಾಯಾಧೀಶ ಅರವಿಂದ್ ಕುಮಾರ್ ಅವರಿಗೆ ಇಡಿ ಚಾಜರ್್ ಶೀಟ್ ಸಲ್ಲಿಸಿದೆ. 

ವಿಶೇಷ ಸಕರ್ಾರಿ ಅಭಿಯೋಜಕ ಎನ್ ಕೆ ಮಟ್ಟ ಅವರ ಮೂಲಕ ಇಡಿ ಇಂದು ಚಾಜರ್್ ಶೀಟ್ ಸಲ್ಲಿಸಿದ್ದು, 28 ಮಿಲಿಯನ್ ಇರೋ ಹಣ ಅಕ್ರಮ ವಹಿವಾಟು ನಡೆಸಲಾಗಿದೆ ಎಂದು ಆರೋಪಿಸಿದೆ. ಅಲ್ಲದೆ ಈ ಹಣವನ್ನು ವಿವಿಧ ವಿದೇಶಿ ಕಂಪನಿಗಳ ಮೂಲಕ ಅಕ್ರಮವಾಗಿ ವಗರ್ಾವಣೆ ಮಾಡಲಾಗಿದೆ ಎಂದು ದೂರಿದೆ. 

ತ್ಯಾಗಿ ಅವರು ಅಗಸ್ಟಾ ವೆಸ್ಟ್ಲ್ಯಾಂಡನ್ನು ಹರಾಜುದಾರರ ಪಟ್ಟಿಗೆ  ಸೇರ್ಪಡೆ ಮಾಡಲು ಅನುಕೂಲವಾಗುವಂತೆ, ಹೆಲಿಕಾಪ್ಟರ್ನ ಹಾರಾಟದ ಮಿತಿಯನ್ನು 6,000 ಮೀ.ನಿಂದ 4500 ಮೀ.ಗಳಿಗೆ (15,000 ಅಡಿಗಳು) ಇಳಿಸಿದರು. ಇದಕ್ಕೆ ಪ್ರತಿಯಾಗಿ ತ್ಯಾಗಿ  ಭಾರಿ ಪ್ರಮಾಣದ ಕಿಕ್ ಬ್ಯಾಕ್ ಪಡೆದಿದ್ದರು ಎಂಬ ಆರೋಪವನ್ನು ಅವರ ವಿರುದ್ಧ ಮಾಡಲಾಗಿದೆ.