ಶರಣ ಸಮೂಹದಲ್ಲಿ ಚನ್ನಬಸವಣ್ಣನವರು ಅಗ್ರಗಣ್ಯರು: ಕೃಷಿ ಇಲಾಖೆಯ ವಿಶ್ರಾಂತ ಅಧಿಕಾರಿ ಕಪ್ಪಲಿ

ಲೋಕದರ್ಶನ ವರದಿ

ಗದಗ: ಅತೀ ಕಡಿಮೆ ವರ್ಷ ಬದುಕಿ ಶ್ರೇಷ್ಟ ಸಾಧನೆ ಮಾಡಿರುವ ಹನ್ನೆರಡನೇ ಶತಮಾನದ ಶರಣ ಸಮೂಹದಲ್ಲಿ ಚನ್ನಬಸವಣ್ಣನವರು ಅಗ್ರಗಣ್ಯರು  ಎಂದು ಕೃಷಿ ಇಲಾಖೆಯ ವಿಶ್ರಾಂತ ಅಧಿಕಾರಿಗಳಾದ ಆರ್.ಡಿ. ಕಪ್ಪಲಿಯವರು ಅಭಿಪ್ರಾಯಪಟ್ಟರು.

ಅವರು ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ  ಗದುಗಿನ ಬಸವೇಶ್ವರ ನಗರದಲ್ಲಿರುವ ಕಬ್ಬಿಗರ ಕೂಟದ ಸಾಹಿತ್ಯ ಭವನದಲ್ಲಿ ಚನ್ನಬಸವಣ್ಣನವರ ಜೀವನ ಮತ್ತು ಸಂದೇಶ ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿ ಮಾತನಾಡುತ್ತಾ, ಚನ್ನಬಸವಣ್ಣನವರ ಜೀವಿತ ಕಾಲಾವಧಿ ತೀರ ಕಡಿಮೆ. ಚನ್ನಬಸವಣ್ಣನವರು ಬದುಕಿದ್ದು ಕೇವಲ 24 ವರ್ಷಗಳು ಮಾತ್ರ. ಬಸವಣ್ಣನವರ ಸೋದರಳಿಯನಾದ ಚನ್ನಬಸವಣ್ಣ ಸ್ವಸ್ವಾಮಥ್ರ್ಯ ಮತ್ತು ಸಾಧನೆಗಳಿಂದ ಕೀತರ್ಿವಂತರಾದ ವ್ಯಕ್ತಿತ್ವವುಳ್ಳವರಾಗಿದ್ದರು ಎಂದರು.

ಚನ್ನಬಸವಣ್ಣನವರು ಅನುಭವ ಮಂಟಪದಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಲಿಂಗಾಯತ ಧರ್ಮದ ಸಂಪ್ರದಾಯಿಕ ವಚನಗಳನ್ನು ಪರಿಷ್ಕರಿಸಿ ಷಟ್ಸ್ಥಲ ಸಂಪ್ರದಾಯಕ್ಕೆ ನೆಲೆಯನ್ನು ಕಲ್ಪಿಸಿದ ಪ್ರಮುಖರಲ್ಲಿ ಚನ್ನಬಸವಣ್ಣನವರು ಮೊದಲಿಗರು. ಚಿಕ್ಕ ವಯಸ್ಸಿನಲ್ಲಿಯೇ ಚನ್ನಬಸವಣ್ಣನವರು ಇಂಥ ಗುರುತರವಾದ ಹೊಣೆಗಾರಿಕೆಯನ್ನು ತುಂಬಾ ಕಷ್ಟದಿಂದ ನಿಭಾಯಿಸಿದವರು. ಕೇವಲ 24 ವರ್ಷಗಳಲ್ಲಿ ಚನ್ನಬಸವಣ್ಣ ಸಾಧಿಸಿದ್ದು, ಕೀತರ್ತಿಶಾಲಿಯಾದದ್ದು ತುಂಬಾ ಹೆಚ್ಚು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಗದಗ ವಿಭಾಗದ ಕನ್ನಡ ಕ್ರಿಯಾ ಸಮಿತಿಯ ಅಧ್ಯಕ್ಷರಾದ ಅಮೃತೇಶ ಹೊಸಳ್ಳಿ ಮಾತನಾಡಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇತ್ತೀಚಿನ ದಿನಗಳಲ್ಲಿ ಹೆಚ್ಚು-ಹೆಚ್ಚು ಕನ್ನಡಪರ ಕಾರ್ಯಕ್ರಮಗಳನ್ನು ಮಾಡುತ್ತಾ, ಹೆಚ್ಚಿನ ಯುವ ಸಾಹಿತಿಗಳಿಗೆ ಅವಕಾಶ ಕಲ್ಪಿಸುತ್ತಿರುವುದು ಶ್ಲಾಘನೀಯವಾಗಿದೆ. ನಾಡಿನ  ಸಾಹಿತಿಗಳಿಗೆ ಜ್ಞಾನಪೀಠಕ್ಕೆ ಸಮಾನವಾದ ನೃಪತುಂಗ ಪ್ರಶಸ್ತಿಯನ್ನು ನೀಡಿ ಸುಮಾರು 7,00,001 ರೂ ನಗದು ರೂಪದಲ್ಲಿ ನೀಡುತ್ತಿದೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸತ್ತಿದೆ. ಮುಂದಿನ ದಿನಗಳಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗೆ ಒಡಗೂಡಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷರಾದ ಡಾ. ಶರಣು ಗೋಗೇರಿಯವರು ಮಾತನಾಡಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳಲ್ಲಿ ಆರ್.ಡಿ. ಕಪ್ಪಲಿಯವರಂತಹ ಹಿರಿಯರು ಪರಿಣಾಮಕಾರಿಯಾದ ಉಪನ್ಯಾಸ ನೀಡಿ ನಮ್ಮೆಲ್ಲರನ್ನು ಬೆರಗುಗೊಳಿಸಿರುತ್ತಾರೆ. ಸಾಹಿತ್ಯ ಪರಿಷತ್ತು ಈ ಎಲ್ಲ ವಯೋಮಾನದವರಿಗೂ ಅವಕಾಶವನ್ನು ನೀಡಿ ಯುವಕರು ಹೆಚ್ಚು-ಹೆಚ್ಚು ಸಾಹಿತ್ಯದ ಕಡೆಗೆ ಒಲವು ತೋರಿಸುವಂತಾಗಬೇಕು. ಸಾಹಿತ್ಯದಲ್ಲಿ ಹೆಚ್ಚು-ಹೆಚ್ಚು ಕೃಷಿಯನ್ನು ಮಾಡಿ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸುವಲ್ಲಿ ಸಕ್ರೀಯರಾಗಬೇಕು ಎಂಬ ಆಶಯವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಎಸ್.ಎಫ್. ಭಜಂತ್ರಿಯವರು ಕವನ ವಾಚನ ಮಾಡಿದರು ಹಾಗೂ ಗದುಗಿನ ಖ್ಯಾತ ಸೀತಾರ ವಾದಕರಾದ ಸುನೀಲ ದಾಮೋದರಮತ್ತು ತಂಡದವರಿಂದ  ಸೀತಾರ ವಾದನ ಕಾರ್ಯಕ್ರಮ ನೆರವೇರಿತು. ಅ.ದ. ಕಟ್ಟಿಮನಿ, ಆಯ್.ಎಸ್. ಮಾದರ, ವೆಂಕಟೇಶ ಜಾಧವ, ಜಿ.ಎ. ಅಂಗಡಿ, ಎಂ.ಎಸ್. ಪತ್ತಾರ, ಬಸವರಾಜ ವಾರಿ, ರತ್ನಕ್ಕ ಪಾಟೀಲ, ಜಯಶ್ರೀ ಶ್ರೀಗಿರಿ, ಜ್ಯೋತಿ ಹೇರಲಗಿ, ದತ್ತಪ್ರಸನ್ನ ಪಾಟೀಲ, ವಸಂತ ಸವದಿ, ಆಯ್.ಡಿ. ಮಾದರ, ಕೆ.ವಿ. ಕುಂದಗೋಳ, ಜೆ.ಎ. ಪಾಟೀಲ, ರಾಮಪ್ಪ ಕಳ್ಳಿಮನಿ, ಬಿ.ಎಂ. ಬಿಳೆಎಲಿ, ಡಾ. ಅಶೋಕ ಮತ್ತಿಗಟ್ಟಿ, ಜಗದೀಶ ಕಳಸದ, ಪ್ರ.ತೋ. ನಾರಾಯಣಪೂರ, ಎಚ್.ಎಸ್. ದಳವಾಯಿ, ಜಯಶ್ರೀ ಶ್ರೀಗಿರಿ, ಎಸ್.ಜಿ. ಚವಡಿ, ಉಮೇಶ ಬಡಿಗೇರ, ರಾಜಶೇಖರ ಕರಡಿ, ಎಸ್.ಎಫ್. ಬೆಣಕನ್ನವರ, ರಾಕೇಶ ಹಿರೇಮನಿ, ಆನಂದ ಕಲ್ಮಠ ಮುಂತಾದವರು ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ ಡಾ. ಅಶೋಕ ಮತ್ತಿಗಟ್ಟಿ ಪ್ರಾರ್ಥಿಸಿದರು. ಕಸಾಪ ಗೌರವ ಕಾರ್ಯದಶರ್ಿಗಳಾದ ಪ್ರಕಾಶ ಮಂಗಳೂರ ಸ್ವಾಗತಿಸಿದರು. ಗೌರವ ಕಾರ್ಯದರ್ಶಿಗಳಾದ ಅಶೋಕ ಹಾದಿ ನಿರೂಪಿಸಿದರು. ಕಸಾಪ ಸಂಘಟನಾ ಕಾರ್ಯದರ್ಶಿ ರವಿರಾಜ ಪವಾರ ವಂದಿಸಿದರು.