ಚಂದ್ರಯಾನ -2: ಲ್ಯಾಂಡರ್ ನೌಕೆ ಚಂದ್ರನ ಮತ್ತಷ್ಟು ಹತ್ತಿರಕ್ಕೆ ಸರಿಸುವ ಕಾರ್ಯ ಯಶಸ್ವಿ

ಚೆನ್ನೈ, ಸೆ 4 - ಚಂದ್ರಯಾನ-2ರ ಲ್ಯಾಂಡರ್ ವಿಕ್ರಮ್ ಅನ್ನು ಕಕ್ಷೆಯಿಂದ ಬೇರ್ಪಡಿಸಿದ ಎರಡು ದಿನಗಳ ನಂತರ ಲ್ಯಾಂಡರ್ ನೌಕೆಯನ್ನು ಚಂದ್ರನತ್ತ ಮತ್ತಷ್ಟು ಹತ್ತಿರಕ್ಕೆ   ಸರಿಸುವ ಕಾರ್ಯವನ್ನು ಬುಧವಾರ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ.  

ಈ ಕಾರ್ಯದಿಂದಾಗಿ ಲ್ಯಾಂಡರ್ ಚಂದ್ರನ ಮೇಲೈ ಮೇಲೆ ಸೆಪ್ಟಂಬರ್ 7ರ ರಾತ್ರಿ  ಸುಲಭವಾಗಿ ಇಳಿಯಲಿದೆ. 

ಯೋಜನೆಯಂತೆ ಇಂದು ಬೆಳಗಿನ ಜಾವ 0342ರಲ್ಲಿ ಲ್ಯಾಂಡರ್ ನೌಕೆಯನ್ನು ಚಂದ್ರನತ್ತ ಮತ್ತಷ್ಟು ಇಳಿಸುವ ಕಾರ್ಯ ಯಶಸ್ವಿಯಾಗಿ ನಡೆಸಲಾಗಿದೆ ಎಂದು ಇಸ್ರೋ ತಿಳಿಸಿದೆ. 

ನೌಕೆಯನ್ನು ಚಂದ್ರನತ್ತ ಇಳಿಸುವ ಕಾರ್ಯವನ್ನು ಒಂಬತ್ತು ಸೆಕೆಂಡ್ ಗಳಲ್ಲಿ ನಡೆಸಲಾಗಿದೆ. 

ವಿಕ್ರಮ್ ಲ್ಯಾಂಡರ್ ನೌಕೆ 35 ಕಿಮೀ ಥ 101 ಕಿಮೀ ನ ಕಕ್ಷೆಯಲ್ಲಿದೆ, ಚಂದ್ರಯಾನ-2 ಆಬರ್ಿಟರ್ 96 ಕಿಮೀ ಥ 125 ಕಿಮೀ ಕಕ್ಷೆಯಲ್ಲಿ ಸುತ್ತುತ್ತಿವೆ. ಆಬರ್ಿಟರ್ ಹಾಗೂ ಲ್ಯಾಂಡರ್ ಸೂಕ್ತವಾಗಿ ಕಾರ್ಯನಿರ್ವಹಿಸುತ್ತಿವೆ. ಇಂದಿನ  ಕಾರ್ಯಾಚರಣೆಯಿಂದ ಚಂದ್ರನ ಮೇಲ್ಮೈನತ್ತ ವಿಕ್ರಮ್ ಲ್ಯಾಂಡರ್ ರವಾನಿಸುವ ಕೆಲಸ ಯಶಸ್ವಿಯಾಗಿದೆ ಎಂದು ಇಸ್ರೋ ಹೇಳಿದೆ.  

ಇದೀಗ ಸೆಪ್ಟೆಂಬರ್ 7ರಂದು ಮುಂಜಾನೆ 1ರಿಂದ 2 ಗಂಟೆ ಮಧ್ಯೆ ಲ್ಯಾಂಡರ್ ಅನ್ನು ಚಂದ್ರನ ಮೇಲ್ಮೈನತ್ತ ಕಳುಹಿಸಲಾಗುತ್ತದೆ, ಅಲ್ಲಿಂದ ಅದು 1.30 ರಿಂದ 2.30ರ ಮಧ್ಯೆ ಚಂದ್ರನ ಮೇಲ್ಮೈ ಸ್ಪರ್ಷಿಸಲಿದೆ. ಇದೊಂದು ಸಂಕೀರ್ಣ ಪ್ರಕ್ರಿಯೆ ಎಂದು ಇಸ್ರೋ ಮುಖ್ಯಸ್ಥರು ಹೇಳಿದ್ದಾರೆ.  

ಈ ಕಾರ್ಯಾಚರಣೆಯನ್ನು ನೇರವಾಗಿ ವೀಕ್ಷಿಸಲು ಪ್ರಧಾನಿ ನರೇಂದ್ರ ಮೋದಿ ಸೆಪ್ಟೆಂಬರ್ 6 ಮತ್ತು 7ರಂದು ಬೆಂಗಳೂರಿನಲ್ಲಿರುವ ಇಸ್ರೋ ಕೇಂದ್ರ ಕಚೇರಿಗೆ ಭೇಟಿ ನೀಡಲಿದ್ದಾರೆ ಎಂದು ವರದಿಯಾಗಿದೆ.